ಬೆಂಗಳೂರು: ತುಮಕೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಕಿದ ಗುಟುರು ಈಗ ಬಿಜೆಪಿ ಪಾಳಯದಲ್ಲೂ ಸಾಕಷ್ಟು ಸಂಚಲನ ಸೃಷ್ಟಿಸಿದೆ.
ಪ್ರಧಾನಿ ಮೋದಿಯವರಿಗೆ ಅವರ ಮುಂದೆಯೇ ರಾಜ್ಯದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಯಡಿಯೂರಪ್ಪ ಹೊರಹಾಕಿದ ಅಸಮಾಧಾನದ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ಥಂಡಾ ಹೊಡೆದಿದ್ದಾರೆ. ಯಡಿಯೂರಪ್ಪ ಹೇಳಿಕೆ ನೋಡಿ ಬೆಚ್ಚಿ ಬಿದ್ದ ರಾಜ್ಯ ನಾಯಕರು, ಈಗ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಯಾವತ್ತೂ ಹೀಗೆ ಮಾತನಾಡದ ಮುಖ್ಯಮಂತ್ರಿಗಳು ನಿನ್ನೆ ಯಾಕೆ ಹೀಗೆ ಮಾತನಾಡಿದರು?, ಅದೂ ಪ್ರಧಾನಿ ಎದುರೇ ಬಿಎಸ್‍ವೈ ಗುಟುರು ಹಾಕಿದ್ದು ಯಾವ ಧೈರ್ಯದಿಂದ? ಇದರ ಅಸಲಿಯತ್ತು ಏನು?. ಹೀಗೆ ಬಿಜೆಪಿ ಮನೆಯಲ್ಲಿ ತಲೆಗೊಂದು ಪ್ರಶ್ನೆ, ಗೊಂದಲ ಹುಟ್ಟಿಕೊಂಡಿದೆಯಂತೆ.
Advertisement
Advertisement
ಈ ಮಧ್ಯೆ ಇಂತಹ ಸುಸಂದರ್ಭ ಸಿಕ್ಕಿದ್ದೇ ತಡ, ಬಿಎಸ್‍ವೈ ವಿರೋಧಿ ಬಣ ಸಹ ಅಲರ್ಟ್ ಆಗಿದೆಯಂತೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಡಿಯೂರಪ್ಪ ಅವರ ತುಮಕೂರು ಭಾಷಣ ಕುರಿತು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಸೀಕ್ರೆಟ್ ರಿಪೋರ್ಟ್ ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ ಹೇಳಿಕೆಯ ಹಿಂದಿನ ಕಾರಣ, ಉದ್ದೇಶಗಳ ಕುರಿತು ಈ ಸೀಕ್ರೆಟ್ ರಿಪೋರ್ಟ್ ನಲ್ಲಿ ನಳಿನ್ ಕುಮಾರ್ ಕಟೀಲ್ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಿಎಂ ಕೈಮುಗಿದು ಮನವಿ ಮಾಡಿದ್ರೂ ನೆರೆ ಪರಿಹಾರದ ಬಗ್ಗೆ ಏನೂ ಮಾತನಾಡದ ಮೋದಿ
Advertisement
ಬಿಎಸ್‍ವೈ ಅಸಮಾಧಾನದ ಹೇಳಿಕೆ ಪ್ರಕರಣ ಈಗ ಅಮಿತ್ ಶಾ ಕೋರ್ಟ್ ನಲ್ಲಿದೆ. ಅಲ್ಲಿಗೆ ಯಡಿಯೂರಪ್ಪ ಮೇಲೆ ಮತ್ತೆ ಹೈಕಮಾಂಡ್ ‘ಐ’ ಬಿದ್ದಿದೆಯಾ ಅನ್ನುವ ಅನುಮಾನವೂ ಮೂಡಿದಂತಾಗಿದೆ. ಅಮಿತ್ ಶಾ, ಯಡಿಯೂರಪ್ಪ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸ್ತಾರಾ? ಯಡಿಯೂರಪ್ಪ ವಿಚಾರದಲ್ಲಿ ಅಮಿತ್ ಶಾ ಮುಂದೇನ್ ಮಾಡ್ತಾರೆ? ಎಂಬುದನ್ನು ಕಾದು ನೋಡಬೇಕಿದೆ.