ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಆಗುತ್ತಿರುವ ಕೆಲಸ ಕುಮಾರಸ್ವಾಮಿ ಸರ್ಕಾರದಲ್ಲಿ ಶೇ.20 ಆಗಿದ್ದರೆ ನಾನು ಪಕ್ಷ ಬಿಡುತ್ತಿರಲಿಲ್ಲ ಎಂದು ಅನರ್ಹ ಶಾಸಕ ನಾರಾಯಣಗೌಡ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದವರು ಸಿಎಂ ಆಗಿದ್ದು ಖುಷಿಯಾಗಿದೆ. ನಮ್ಮ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿ ನಡೆಯುತ್ತಿದೆ. ನಮ್ಮ ಬಗ್ಗೆ ಯಾರು ತಪ್ಪಾಗಿ ಮಾತನಾಡಿಲ್ಲ. ಸಣ್ಣಪುಟ್ಟ ಸಮಸ್ಯೆಗಳು ಇರುವುದು ಸಹಜ, ಅದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.
Advertisement
Advertisement
ಬಾಂಬೆಯಲ್ಲಿ ಬ್ಯುಸಿನೆಸ್ ಮಾಡ್ತಿದ್ದವನು ಕರ್ಮ ಭೂಮಿ ಋಣ ತೀರಿಸಲು ಬಂದಿದ್ದೇನೆ. ಈ ಸರ್ಕಾರದಲ್ಲಿ ನನ್ನ ಕ್ಷೇತ್ರದ ಬಹಳ ಕೆಲಸ ಆಗುತ್ತಿದೆ. ಈ ಸರ್ಕಾರದಲ್ಲಿ ಆಗುತ್ತಿರುವ ಕೆಲಸ ಶೇ.20 ಕುಮಾರಣ್ಣ ಸರ್ಕಾರದಲ್ಲಿ ಆಗಿದರೆ ನಾನು ಜೆಡಿಎಸ್ ಪಕ್ಷ ಬಿಡುತ್ತಿರಲಿಲ್ಲ ಎಂದು ತಿಳಿಸಿದರು.
Advertisement
ಇದೇ ವೇಳೆ ನಿಮ್ಮ ಕ್ಷೇತ್ರದಲ್ಲಿ ಬಿಎಸ್‍ವೈ ಪುತ್ರ ವಿಜೇಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರದ ಬಗ್ಗೆ ಕೇಳಿದಾಗ, ನನ್ನ ಕ್ಷೇತ್ರಕ್ಕೆ ವಿಜೇಯೇಂದ್ರ ಬರುವುದಾದರೆ ಸ್ವಾಗತ. ನಾನೇ ವೆಲ್ ಕಮ್ ಮಾಡುತ್ತೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲದಕ್ಕೂ ಸಿದ್ಧ ಎಂದು ಹೇಳಿದರು.