ಬೆಂಗಳೂರು: ಈರುಳ್ಳಿ, ತರಕಾರಿ, ಗ್ಯಾಸ್, ಪೆಟ್ರೋಲ್ ಆಯ್ತು ಈಗ ಹಾಲು, ಮೊಸರು, ತುಪ್ಪದ ಬೆಲೆ ಏರಿಕೆಯಾಗಿದೆ. ಹೊಸ ವರ್ಷದಂದು ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಹಾಲು ಮೊಸರಿನ ದರ ಫೆಬ್ರವರಿ ಒಂದರಿಂದಲ್ಲೇ ಏರಿಕೆ ಆಗಲಿದೆ. ನಷ್ಟದ ನೆಪವೊಡ್ಡಿ ರೈತರಿಗೆ ಲಾಭ ನೀಡುತ್ತೇವೆ ಎಂಬ ಉದ್ದೇಶದಿಂದ ಕೆ.ಎಂ.ಎಫ್ ಹಾಲಿನ ದರ ಹೆಚ್ಚಳಕ್ಕೆ ಮುಂದಾಗಿದೆ.
ಪ್ರಸ್ತುತ ಪ್ರತಿ ಲೀಟರ್ ದರ ಎಷ್ಟಿದೆ?
ನೀಲಿ ಪ್ಯಾಕೆಟ್ – 35 ರೂ.
ಹಸಿರು ಪ್ಯಾಕೆಟ್ – 40 ರೂ.
ಸ್ಪೆಷಲ್ ಪ್ಯಾಕೆಟ್ – 41 ರೂ.
ಶುಭಂ ಪ್ಯಾಕೆಟ್- 41 ರೂ.
Advertisement
ಫೆ. 1 ರಿಂದ 2 ರೂ ದರ ಏರಿಕೆ
ನೀಲಿ ಪ್ಯಾಕೆಟ್ – 37 ರೂ.
ಹಸಿರು ಪ್ಯಾಕೆಟ್ – 42 ರೂ.
ಸ್ಪೇಷಲ್ ಪ್ಯಾಕೆಟ್ – 43 ರೂ.
ಶುಭಂ ಪ್ಯಾಕೆಟ್ – 43 ರೂ.
Advertisement
Advertisement
ಹಾಲು ಸೇರಿದಂತೆ ಹಾಲಿನ ಉತ್ಪನಗಳ ದರ ಪರಿಷ್ಕರಣೆಗೆ ಕೆಎಂಎಫ್ ಮುಖ್ಯಮಂತ್ರಿಗಳ ಗಮನಕ್ಕೆ ತಂದಿತ್ತು. ಇವತ್ತು ಅವರ ಮೌಖಿಕ ಅನುಮೋದನೆ ನೀಡಿದ್ದಾರೆ. 2 ರೂ. ಏರಿಕೆಯಿಂದ ಬರುವ ಹಣದಲ್ಲಿ ಒಂದು ರೂ. ರೈತರಿಗೆ ಉಳಿದ ಒಂದು ರೂ ಆಯಾ ಜಿಲ್ಲಾ ಹಾಲು ಒಕ್ಕೂಟಗಳಿಗೆ ನೀಡಲಾಗುತ್ತೆ. ಒಂದು ರೂ. ನಲ್ಲಿ 40 ಪೈಸೆ ಹಸುಗಳಿಗೆ ಇನ್ಶುರೆನ್ಸ್, 40 ಪೈಸೆ ಹಾಲು ಮಾರಾಟಗಾರರ ಏಜೆಂಟ್ ಗಳಿಗೆ ಕಮಿಷನ್ ನೀಡಲಿದ್ದು, ಉಳಿದ 20 ಪೈಸೆ ಒಕ್ಕೂಟಗಳ ಸೆಕ್ರೇಟರಿಗಳಿಗೆ ಕಮಿಷನ್ ನೀಡಲು ಕೆಎಂಎಫ್ ನಿರ್ಧಾರ ಮಾಡಿದೆ.
Advertisement
ರೈತರಿಗೆ ಅನುಕೂಲವಾಗೋ ನಿಟ್ಟಿನಲ್ಲಿ ದರವನ್ನು ವಿಗಂಡನೆ ಮಾಡಿದ್ದೇವೆ. 2 ರೂ. ಗಳಲ್ಲಿ 1 ರೂ. 40 ಪೈಸೆ ರೈತರಿಗೆ ಸಲ್ಲುತ್ತದೆ. ಕಳೆದ ಮೂರು ವರ್ಷಗಳಿಂದ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಿಲ್ಲ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ನಂದಿನಿ ಹಾಲಿನದರ ಏರಕೆ ಮಾಡಿರೋದ್ದನ್ನು ರೈತ ಮುಖಂಡ ಕೊಡಿಹಳ್ಳಿ ಚಂದ್ರಶೇಖರ್ ಸ್ವಾಗತಿಸಿದ್ದಾರೆ. ಹಾಲಿನದರ 100 ರೂ ಮಾಡಿದ್ರು ಗ್ರಾಹಕರು ಹೊರೆ ಎಂದು ಪರಿಗಣಿಸಬಾರದು. ರೈತರಿಗೆ ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗಿ ಲಾಭವೇ ಇಲ್ಲದಂತಾಗಿದೆ. ಕೇಂದ್ರ ಸರ್ಕಾರದ ನೌಕರರಿಗೆ ಶೇ.23 ರಷ್ಟು ವೇತನ ಹೆಚ್ಚಿಸಿದ್ರು. ಇದರಿಂದ ದೇಶದ ಖಜಾನೆಗೆ ತೊಂದರೆಯಾಗಿದೆ. ಈ ಬಗ್ಗೆ ಜನ ಕೇಳುವುದಿಲ್ಲ. ಹಾಲು ತರಕಾರಿ ಹಣ್ಣು ಹಂಪಲು ದರ ಏರಿಕೆಯಾದರೆ ಜನ ಕೇಳುತ್ತಾರೆ. ಇದರಿಂದ ಗ್ರಾಹಕರಿಗೇನು ಅಷ್ಟು ಹೊರೆಯಾಗಲ್ಲ. ಇನ್ನೂ ಹೆಚ್ಚಿನ ಅನುದಾನ ರೈತರಿಗೆ ನೀಡಬೇಕು ಅಂತಾ ಚಂದ್ರಶೇಖರ್ ಹೇಳಿದ್ದಾರೆ.