ಬೆಂಗಳೂರು: ಹಳದಿ ಮಾರ್ಗದ ಮೆಟ್ರೋ (Metro Yellow Line) ಸಂಚಾರವನ್ನು 2025ರ ಜನವರಿಗೆ ಆರಂಭಿಸುವುದಾಗಿ ಬಿಎಂಆರ್‌ಸಿಎಲ್ (BMRCL) ಹೇಳಿಕೊಂಡಿದೆ. ಆದರೆ ಮೆಟ್ರೋ ಸಂಚಾರಕ್ಕೆ ಒಂದಲ್ಲ ಒಂದು ಅಡೆತಡೆಗಳು ಎದುರಾಗುತ್ತಿವೆ.
ಹಳದಿ ಮಾರ್ಗದಲ್ಲಿ ಜನವರಿ ಅಂತ್ಯಕ್ಕೆ ಸಂಚಾರ ಆರಂಭವಾಗಬೇಕಾದ್ರೆ ಸಂಪೂರ್ಣ ಟ್ರೈನ್‍ಗಳ ಅವಶ್ಯಕತೆ ಇದೆ. ಪೂರ್ಣ ಪ್ರಮಾಣದ ಟ್ರೈನ್‍ಗಳು ಇನ್ನೂ ಬಂದಿಲ್ಲ. ಇದರಿಂದ ಹಳದಿ ಮಾರ್ಗದಲ್ಲಿ ಜನವರಿ ಅಂತ್ಯಕ್ಕೆ ಮೆಟ್ರೋ ಸಂಚಾರ ಆರಂಭವಾಗತ್ತಾ ಎಂಬ ಅನುಮಾನ ಕಾಡಿದೆ.
Advertisement
Advertisement
ಮಾರ್ಗದ ವಾಣಿಜ್ಯ ಸಂಚಾರಕ್ಕೆ ಬಿಎಂಆರ್‌ಸಿಎಲ್‌ಗೆ ಬೇಕಿರೋದು 8 ಸೆಟ್‍ನಷ್ಟು ಟ್ರೈನ್‍ಗಳು ಸದ್ಯ ಇರೋದು ಮೂರು ಸೆಟ್‍ಗಳು ಮಾತ್ರ. ಹೀಗಿರುವಾಗ ಉಳಿದ ಐದು ಸೆಟ್‍ಗಳು ಇದೇ ತಿಂಗಳ ಒಳಗಾಗಿ ಬಂದರೂ, ಅವನ್ನು ಟ್ರ್ಯಾಕ್‍ಗೆ ಇಳಿಸಿ, ಪರೀಕ್ಷೆ ಮುಗಿಸಿ ಸಂಚಾರಕ್ಕೆ ಅಣಿ ಮಾಡೋಕೆ ಸಮಯವಕಾಶ ಬೇಕಾಗಲಿದೆ. ಹೀಗಿರುವಾಗ ಜನವರಿ ಅಂತ್ಯಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡಿದೆ.
Advertisement
Advertisement
ಚೀನಾದಿಂದ ಡ್ರೈವರ್ ಲೆಸ್ ಟ್ರೈನ್ ಬಿಡಿ ಭಾಗಗಳು ಬರುತ್ತಿವೆ. ಅಲ್ಲದೇ ಪಶ್ಚಿಮ ಬಂಗಾಳ ಸೇರಿದಂತೆ ಬೆಂಗಳೂರಿನಲ್ಲೂ ಇದರ ಭಾಗಗಳು ತಯಾರಾಗುತ್ತಿವೆ. 5 ಸೆಟ್‍ಗಳನ್ನ ವೇಗವಾಗಿ ಸಿದ್ಧಪಡಿಸಿದರೂ ಅದನ್ನು ಟ್ರ್ಯಾಕ್‍ಗೆ ಇಳಿಸಿ ಪರಿಶೀಲನೆ ಮಾಡಲು ಕೊಂಚ ಹೆಚ್ಚಿನ ಸಮಯಾವಾಕಾಶ ಬೇಕಾಗಲಿದೆ. ಹೀಗಿರುವಾಗ ಜನವರಿ ಅಂತ್ಯಕ್ಕೆ ಮಾರ್ಗ ಉದ್ಘಾಟಿಸೋ ತಯಾರಿಯಲ್ಲಿರುವ ಬಿಎಂಆರ್‌ಸಿಎಲ್ ಬೇರೆ ಏನಾದರೂ ತಯಾರಿ ಮಾಡಿದೆಯೇ ಎಂಬುದು ತಿಳಿದು ಬರಬೇಕಿದೆ.