ಬೆಂಗಳೂರು: ನಗರದಲ್ಲಿ ಪ್ರಯಾಣಿಸಲು ಮೆಟ್ರೋ ಸೇವೆಯನ್ನೇ ನೆಚ್ಚಿಕೊಂಡಿರುವ ಮಂದಿಗೆ ಹೊಸ ವರ್ಷಕ್ಕೆ ಗುಡ್ ನ್ಯೂಸ್ ಸಿಕ್ಕಿದೆ.
ನಮ್ಮ ಮೆಟ್ರೋ ಬೆಂಗಳೂರಿನ ಟ್ರಾಫಿಕ್ ಪರಿಹಾರಕ್ಕೆ ಹೆಚ್ಚು ಅನುಕೂಲವಾಗಿದೆ. ಹೊಸ ಸಂಭ್ರಮಕ್ಕೆ ನಗರದ ವಿವಿಧೆಡೆ ಹೋಗುವ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಸಮಯವನ್ನು ವಿಸ್ತರಿಸಿದೆ. ಜನವರಿ 1ರಿಂದ ತನ್ನ ಕೊನೆಯ ಮೆಟ್ರೋ ಸೇವಾ ಅವಧಿಯನ್ನು ಬಿ.ಎಂ.ಆರ್.ಸಿ.ಎಲ್ ಹೆಚ್ಚಿಸುತ್ತಿದೆ.
Advertisement
Advertisement
ನಗರದ 4 ದಿಕ್ಕುಗಳಲ್ಲಿಯೂ ರಾತ್ರಿ 12ರವರೆಗೆ ಇನ್ನುಮುಂದೆ ಮೆಟ್ರೋ ರೈಲುಗಳು ಸಂಚರಿಸಲಿವೆ. ಈ ಬಗ್ಗೆ ಬಿ.ಎಂ.ಆರ್.ಸಿ.ಎಲ್ ಪ್ರಕಟಣೆ ಹೊರಡಿಸಿದೆ. ಜನವರಿ 1ರಿಂದ ನಮ್ಮ ಮೆಟ್ರೋದ ಪರಿಷ್ಕೃತ ವೇಳಾಪಟ್ಟಿಯನ್ನ ಬಿಟ್ಟಿದೆ.
Advertisement
ವೇಳಾಪಟ್ಟಿ
ಮೈಸೂರು ರಸ್ತೆ ನಿಲ್ದಾಣದಿಂದ 11.05ಕ್ಕೆ ಹೊರಡುತ್ತಿದ್ದ ಕೊನೆಯ ಮೆಟ್ರೋ ರೈಲು ಜನವರಿ ಒಂದರ ಬಳಿಕ ರಾತ್ರಿ 11.40ಕ್ಕೆ ಹೊರಡಲಿದೆ. ಬೈಯಪ್ಪನಹಳ್ಳಿಯಲ್ಲಿ 11 ಗಂಟೆಗೆ ಹೊರಡುತ್ತಿದ್ದ ರೈಲು ರಾತ್ರಿ 11.35ಕ್ಕೆ ಹೊರಡಲಿದೆ.
Advertisement
ನಾಗಸಂದ್ರದಿಂದ 10.50ಕ್ಕೆ ಹೊರಡುತ್ತಿದ್ದ ಕೊನೆಯ ರೈಲು ರಾತ್ರಿ 11.25ಕ್ಕೆ ಹೊರಡಲಿದೆ. ಯಲಚೇನಹಳ್ಳಿಯಿಂದ 11 ಗಂಟೆಗೆ ಹೊರಡುತ್ತಿದ್ದ ಕೊನೆಯ ಮೆಟ್ರೋ ರೈಲು ರಾತ್ರಿ 11.35ಕ್ಕೆ ಹೊರಡಲಿದೆ.
ಆಕಾಶದೆತ್ತರಕ್ಕೆ ಭೂಗರ್ಭದೊಳಗೆ ಸಂಚಾರ ಮಾಡಿ ಎಲ್ಲರ ಹುಬ್ಬೇರಿಸಿದ್ದ ನಮ್ಮ ಮೆಟ್ರೋದ ಸೇವಾ ಅವಧಿ ವಿಸ್ತರಣೆ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ರಾತ್ರಿ ಅವಧಿಯಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳಿಗೆ ಇದು ಸಹಾಯವಾಗಲಿದೆ.