ಬೆಂಗಳೂರು: ಮೆಟ್ರೋ ಟಿಕೆಟ್ ದರ (METRO Fare Hike) ಏರಿಕೆ ಹೊಣೆ ರಾಜ್ಯ ಸರ್ಕಾರದ್ದು ಎಂದು ಕೇಂದ್ರ ರೈಲ್ವೇ ಖಾತೆಯ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಹೇಳಿದ್ದರೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಮೆಟ್ರೋ ಪ್ರಯಾಣ ದರ ಏರಿಸಿದ್ದು ಕೇಂದ್ರ ಸರ್ಕಾರ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆಟ್ರೋ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಬಿಜೆಪಿ (BJP) ಗೂಬೆ ಕೂರಿಸುತ್ತಿದೆ. ಬಿಜೆಪಿ ಅವರು ಎಷ್ಟು ದಿನ ಈ ರೀತಿ ಬೂಟಾಟಿಕೆ ರಾಜಕೀಯ ಮಾಡುತ್ತೀರಿ? ಕೇಂದ್ರ ರೈಲ್ವೆ ಸಚಿವರಿಗೂ ಸುಳ್ಳಿನ ಸರದಾರ ಎಂಬ ಕುಖ್ಯಾತಿ ನೀಡಿದ ಕೀರ್ತಿ ಬಿಜೆಪಿಗೆಗೆ ಸಲ್ಲುತ್ತದೆ. ಬಿಜೆಪಿ ಅಂದರೆ ಬುರುಡೆ ಜನರ ಪಕ್ಷ. ಸುಳ್ಳು ಹೇಳೋದ್ರಲ್ಲಿ ಇವರನ್ನು ಬಿಟ್ರೆ ಯಾರು ಇಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
ದೇಶದಲ್ಲಿ ಎಲ್ಲಾ ಮೆಟ್ರೋಗಳು ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅಡಿ ಬರುತ್ತದೆ. ಮೆಟ್ರೋಗಳಿಗೆ ಸಂಬಂಧಿಸಿದಂತೆ ಬೋರ್ಡ್ ಇರುತ್ತದೆ. ದರ ಏರಿಕೆಗೆ ರಾಜ್ಯಗಳು ಕೇಂದ್ರಕ್ಕೆ ಪತ್ರ ಬರೆಯುತ್ತದೆ. ಪತ್ರ ಬರೆದ ಮೇಲೆ ಸಮಿತಿ ರಚನೆ ಮಾಡುತ್ತಾರೆ. ಬೆಂಗಳೂರು ಮೆಟ್ರೋ ಸಮಿತಿಯ ಅಧ್ಯಕ್ಷರು ನಿವೃತ್ತಿ ಜಡ್ಜ್ ತಾರಿಣಿ, ಕೇಂದ್ರದ ಪ್ರತಿನಿಧಿ ಸತೀಂದ್ರ ಪಾಲ್ ಸಿಂಗ್, ರಾಜ್ಯದ ಪ್ರತಿನಿಧಿ ರಮಣರೆಡ್ಡಿ ಇದ್ದರು. ಈ ಸಮಿತಿ ಸಭೆ ಮಾಡಿ ಎಷ್ಟು ಏರಿಕೆ ಆಗಬೇಕು ಅಂತ ತೀರ್ಮಾನ ಮಾಡುತ್ತದೆ. ರಾಜ್ಯ ಸರ್ಕಾರಕ್ಕೂ ಮೆಟ್ರೋ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಅನ್ನಭಾಗ್ಯ ದುಡ್ಡು ಇಲ್ಲ, ಗೃಹಲಕ್ಷ್ಮಿಯೂ ಇಲ್ಲ – ಗ್ಯಾರಂಟಿಗೆ ʼಗ್ಯಾರಂಟಿʼ ಇಲ್ಲ!
Advertisement
Advertisement
ಸಮಿತಿಯವರು ಕೇಂದ್ರಕ್ಕೆ ವರದಿ ನೀಡುತ್ತಾರೆ. ದ್ರದ ನಗರಾಭಿವೃದ್ಧಿ ಸಚಿವಾಲಯ ದರ ಏರಿಕೆ ಆದೇಶ ನೀಡುತ್ತದೆ. ಮಂಡಳಿ ಒಪ್ಪಿಗೆ ಪಡೆದು ದರ ಏರಿಕೆ ಮಾಡಲಾಗುತ್ತದೆ. ರಾಜ್ಯ ಸರ್ಕಾರಕ್ಕೂ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ. ನಿಯಮದ ಪ್ರಕಾರ ಮಂಡಳಿಯ ಶಿಫಾರಸಿನ ಮೇಲೆ ದರ ಏರಿಕೆಯಾಗಿದೆ ಎಂದು ತಿಳಿಸಿದರು.
Advertisement
ಸಿಎಂ ಅವರು ಜನರ ಹಿತದೃಷ್ಟಿಯಿಂದ ಕಡಿಮೆ ಮಾಡಿ ಅಂತ ಹೇಳಿದ್ದಾರೆ. ಹೀಗಾಗಿ ಮೆಟ್ರೋ ಎಂಡಿ ದರ ಇಳಿಕೆ ಬಗ್ಗೆ ಮಾತಾಡಿದ್ದಾರೆ. ಮೂರು ಬಿಟ್ಟವರು ಊರಿಗೆ ದೊಡ್ಡವರು. ಬಿಜೆಪಿ ಅವರು ವಸ್ತುಸ್ಥಿತಿ ಬಿಟ್ಟು ಕಾಂಗ್ರೆಸ್ ಬಗ್ಗೆ ಆರೋಪ ಮಾಡುತ್ತಾರೆ. ಮಂಡಳಿ ಎಷ್ಟು ಏರಿಕೆ ಮಾಡಲು ಶಿಫಾರಸು ಮಾಡಿದೆ ಎಂಬ ಮಾಹಿತಿ ನಮ್ಮ ಬಳಿಯಿಲ್ಲ. ಮೆಟ್ರೋ ಮಂಡಳಿ ಎಷ್ಟು ಪ್ರಮಾಣದ ಏರಿಕೆಗೆ ಪ್ರಸ್ತಾಪ ಮಾಡಿದೆ ಎನ್ನುವುದು ರಹಸ್ಯವಾಗಿರುತ್ತದೆ. ಅದು ಯಾರಿಗೂ ತಿಳಿಯುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಬಣಗಳ ನಡುವೆ ಏಪ್ರಿಲ್ Vs ಡಿಸೆಂಬರ್ ವಾರ್!
ದರ ಏರಿಕೆ ಜನಕ್ಕೆ ಹೊರೆ ಆಗುತ್ತದೆ. ಅದಕ್ಕಾಗಿ ನಾನು ಕೇಂದ್ರ ಸರ್ಕಾರಕ್ಕೆ ಸಬ್ಸಿಡಿ ಕೊಡಲಿ ಎಂದು ಹೇಳುತ್ತೇನೆ. ಮೆಟ್ರೋ ದರ ಏರಿಕೆ ಆಗಿರುವುದಕ್ಕೆ ಕೇಂದ್ರ ಸರ್ಕಾರವೇ ಕಾರಣ. ಮೋದಿ ಅವರನ್ನು ಪ್ರಶ್ನಿಸಲು ನಮ್ಮ ಸಂಸದರಿಗೆ ಧೈರ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ರೈಲ್ವೆ ವಿಷಯ ಬಂದ ಕೂಡಲೇ ಪಿಸಿ ಮೋಹನ್, ತೇಜಸ್ವಿಸೂರ್ಯ ನಾವೇ ಮೆಟ್ರೋ ತಂದಿದ್ದು ಎನ್ನುವ ರೀತಿ ಮಾತಾಡ್ತಾರೆ. ಮನಮೋಹನ್ ಸಿಂಗ್ ನೇತೃತ್ವದಲ್ಲಿ ಮೆಟ್ರೋ ಬಂದಿದೆ. ಕೆಲವರು ಫೋಸ್ ಕೊಡೋ ಕೆಲಸ ಮಾಡುತ್ತಾರೆ. ಪ್ರಹ್ಲಾದ್ ಜೋಶಿ ಕೂಡಾ ಸುಳ್ಳು ಹೇಳ್ತಾರೆ. ಬೊಮ್ಮಾಯಿ, ಶೆಟ್ಟರ್ ಕೂಡಾ ಮೆಟ್ರೋ ದರ ರಾಜ್ಯ ಏರಿಕೆ ಮಾಡಿದ್ದು ಅಂತಾರೆ.ಮಾಜಿ ಸಿಎಂ ಆದವರು ಹೀಗೆ ಹಸಿಸುಳ್ಳು ಹೇಳ್ತಾರೆ. ಇವರಿಗೆ ಸಿಎಂ ಆಗಲಿ ಅರ್ಹತೆ ಇರಲಿಲ್ಲ. ಅಂತವರನ್ನ ಬಿಜೆಪಿ ಸಿಎಂ ಮಾಡಿತ್ತು ಎಂದು ಸಿಟ್ಟು ಹೊರ ಹಾಕಿದರು.