ಬೆಂಗಳೂರು: ಕನ್ನಡ ರಾಜ್ಯೋತ್ಸವ ದಿನದಂದೇ ಮೆಟ್ರೋ ಪ್ರಯಾಣಿಕರಿಗೆ (Namma Metro) ಸಿಹಿ ಸುದ್ದಿ ಸಿಕ್ಕಿದೆ. ಇಂದಿನಿಂದ 5ನೇ ಹೊಸ ಮೆಟ್ರೋ ರೈಲು ಸಂಚಾರ ಆರಂಭಿಸಿದೆ.
ಆರ್.ವಿ.ರೋಡ್ ಮತ್ತು ಬೊಮ್ಮಸಂದ್ರ ಕಡೆ ತೆರಳುವ ಮೆಟ್ರೋ ರೈಲು ಇದಾಗಿದೆ. ಈ ಮೊದಲು ನಾಲ್ಕು ರೈಲು ಸೇವೆ ಇತ್ತು. ಇಂದಿನಿಂದ ಐದು ಮೆಟ್ರೋ ಸೇವೆ ಯೆಲ್ಲೋ ಲೈನ್‌ನಲ್ಲಿ (Yellow Line) ಲಭ್ಯವಿರಲಿದೆ. ಯೆಲ್ಲೋ ಲೈನ್‌ನಲ್ಲಿ ಪೀಕ್ ಅವರ್‌ನಲ್ಲಿ ರೈಲುಗಳು ಪ್ರತಿ 15 ನಿಮಿಷಕ್ಕೊಮ್ಮೆ ಸಂಚರಿಸಲಿವೆ. ಇದನ್ನೂ ಓದಿ: ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ನಾಳೆ ಟ್ರ್ಯಾಕಿಗಿಳಿಯಲಿದೆ ಐದನೇ ರೈಲು
ಹಿಂದಿನಂತೆ 19 ನಿಮಿಷಗಳ ಬದಲು ಈಗ 15 ನಿಮಿಷಕ್ಕೆ ಮೆಟ್ರೋ ಸೇವೆ ಇರಲಿದೆ. ಈ ಬದಲಾವಣೆ ಎಲ್ಲ ದಿನಗಳಿಗೂ ಅನ್ವಯವಾಗಲಿದೆ. ಮೊದಲ ಹಾಗೂ ಕೊನೆಯ ರೈಲು ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ.
ಇದರಿಂದ ಪ್ರಯಾಣಿಕರಿಗೆ ಸುಗಮ ಹಾಗೂ ಸುಧಾರಿತ ಮೆಟ್ರೋ ಸೇವೆ ಸಿಕ್ಕಂತಾಗಿದೆ. ಹಳದಿ ಮಾರ್ಗದ ಮೆಟ್ರೋ ಪ್ರಯಾಣಿಕರ ಕಾಯುವಿಕೆ ಇನ್ನಷ್ಟು ತಗ್ಗಲಿದೆ.


