ಬೆಂಗಳೂರು: ಶಾಂತಿನಗರ ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಮೇಲೆ ಮತ್ತೊಂದು ಕೇಸ್ ಬೀಳುವ ಸಾಧ್ಯತೆಯಿದೆ.
ಸದಾಶಿವನಗರ ಸಂಚಾರಿ ಪೊಲೀಸರ ಮುಂದೆ ಹಾಜರಾರಾಗಬೇಕಿದ್ದ ನಲಪಾಡ್ ಇವತ್ತು ಹಾಜರಾಗೋದು ಡೌಟ್ ಆಗಿದೆ. ಯಾಕೆಂದರೆ ಆತ ಮತ್ತೊಂದು ಕೇಸ್ ಬೀಳುವ ಭಯದಲ್ಲಿದ್ದಾನೆ. ಅಪಘಾತ ಮಾಡಿದ್ದಲ್ಲದೇ, ಗನ್‍ಮ್ಯಾನ್ ನನ್ನ ನಾನೇ ಕಾರು ಓಡಿಸಿದ್ದೆ ಎಂದು ತಪ್ಪೊಪ್ಪಿಕೊಳ್ಳಲು ಕಳಹಿಸಿದ ತಂತ್ರಗಾರಿಕೆಯೇ ಮುಳುವಾಗುವ ಸಾಧ್ಯತೆಯಿದೆ.
ಸಾಕ್ಷಿ ನಾಶದ ಆಧಾರದ ಮೇಲೆ ಈಗಾಗಲೇ ಗನ್‍ಮ್ಯಾನ್ ಬಾಲಕೃಷ್ಣನನ್ನು ಬಂಧಿಸಲಾಗಿದೆ. ಒಂದು ವೇಳೆ ಪೊಲೀಸರ ವಿಚಾರಣೆಗೆ ಬಂದರೆ ಮತ್ತೊಂದು ಎಫ್.ಐ.ಆರ್ ಹಾಕಿ ಬಂಧಿಸುವ ಭಯದಲ್ಲಿದ್ದಾನೆ. ಅಪಘಾತ ಮಾಡಿ ತಪ್ಪೊಪ್ಪಿಕೊಳ್ಳುವಂತೆ ಗನ್‍ಮ್ಯಾನ್ ಕಳಿಸಿದ್ದ ನಲಪಾಡ್ ನನ್ನು ಐಪಿಸಿ ಸೆಕ್ಷನ್ 120 ಬಿ(ಕ್ರಿಮಿನಲ್ ಒಳಸಂಚು) ಆರೋಪದ ಅಡಿ ಬಂಧಿಸುವ ಸಾಧ್ಯತೆಯಿದೆ. ಇದನ್ನು ಓದಿ: ಹಿಟ್ ಆಂಡ್ ರನ್ ಕೇಸ್, ಗನ್‍ಮ್ಯಾನ್ ಅರೆಸ್ಟ್ – ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿದ್ದ ನಲಪಾಡ್ ಸಿಕ್ಕಿ ಬಿದ್ದಿದ್ದು ಹೇಗೆ?
ತನ್ನನ್ನು ಬಂಧಿಸಬಹುದು ಎನ್ನುವ ಕಾರಣಕ್ಕೆ ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿರುವ ನಲಪಾಡ್, ಗನ್‍ಮ್ಯಾನ್ ಬಾಲಕೃಷ್ಣ ಜಾಮೀನು ನೋಡಿಕೊಂಡು ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.