ಬೆಂಗಳೂರು: ವಿವಿಐಪಿ ಮಕ್ಕಳು ದುಡ್ಡಿನ ದೌಲತ್ತಿನಲ್ಲಿ ಮಾಡಿದ್ದನ್ನು ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ಸಾರ್ವಜನಿಕರ ಪ್ರಶ್ನೆಯ ಬಳಿಕ ಇಡೀ ಪ್ರಕರಣಕ್ಕೆ ತಿರುವು ಸಿಗುತ್ತೆ. ಅದೂ ಒಂದೇ ದಿನ ಒಂದೇ ಸಮಯದಲ್ಲಿ ಎರಡು ಘಟನೆಗಳು ನಡೆದು ಹೋಗಿದ್ದು, ಬೆಂಗಳೂರು ಮತ್ತು ಬಳ್ಳಾರಿ ಅಪಘಾತಗಳಾಗಿವೆ. ಎರಡು ಅಪಫಾತದಲ್ಲಿ ವಿವಿಐಪಿ ಮಕ್ಕಳೇ ಪಾತ್ರವಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಬೆಂಗಳೂರಿನ ನಲ್‍ಪಾಡ್ ಪ್ರಕರಣದಲ್ಲಿ ಇದ್ದ ಆತುರ ಮತ್ತು ತನಿಖೆಯ ಚುರುಕು ಬಳ್ಳಾರಿ ಪ್ರಕರಣದಲ್ಲಿ ಏಕಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ನಲಾಪಾಡ್ ಕೂಡ ಅಪಘಾತ ಮಾಡಿ ಬೇರೊಂದು ಕಾರಿನಲ್ಲಿ ಓಡಿ ಹೋಗಿದ್ದರು. ಈ ಬಗ್ಗೆ ಅನುಮಾನ ಬಂದು ಪ್ರಶ್ನೆ ಕೇಳಿದರೆ ನನ್ನ ಹತ್ತಿರ ಅಂತಹ ಕಾರು ಇಲ್ಲ. ನಾನು ಘಟನೆ ನಡೆದ ಜಾಗದಲ್ಲಿ ಇರಲಿಲ್ಲ ಎಂದು ಹಾರಿಕೆ ಉತ್ತರ ಕೊಟ್ಟಿದ್ದರು. ಆದರೆ ಪೊಲೀಸರು ತನಿಖೆಯನ್ನು ನಡೆಸಿ ವಿಚಾರಣೆಗೆ ಕರೆದಾಗ ನಾನು ಅಲ್ಲಿ ಇದ್ದೇ ಬೇರೆ ಕಾರಿನಲ್ಲಿ ಇದ್ದೇ ಎಂದು ಹೇಳಿಕೆ ಕೊಟ್ಟಿದ್ದರು.
Advertisement
Advertisement
ನಲ್‍ಪಾಡ್ ಪ್ರಕರಣದಲ್ಲಿ ಪೊಲೀಸರು ತಾಂತ್ರಿಕ ಸಾಕ್ಷ್ಯವನ್ನು ಕಲೆ ಹಾಕಿ ವಿಚಾರಣೆಗೆ ಕರೆದಿದ್ದೇವೆ ಎಂದಿದ್ದರು. ಆದರೆ ಬಳ್ಳಾರಿಯ ಪ್ರಕರಣ ನಡೆದು ಒಂದು ವಾರ ಆಗುತ್ತಾ ಬಂದರು ಕೂಡ ತನಿಖೆಯ ಫಲಿತಾಂಶ ಶೂನ್ಯ ಅಂತ ಪೊಲೀಸರೇ ಒಪ್ಪಿಕೊಳ್ಳುತ್ತಿದ್ದಾರೆ. ತಾಂತ್ರಿಕ ತನಿಖೆಯನ್ನಾಗಲಿ ಮಾಹಿತಿಯನ್ನಾಗಲಿ ಕಲೆಹಾಕಿಲ್ಲ ಅಂತಲೇ ಕಾಲ ಕಳೆಯುತ್ತಿರುವುದು ಸಾರ್ವಜನಿಕರಿಗೆ ಅನುಮಾನ ಮೂಡಿಸಿದೆ. ಆದ್ದರಿಂದ ಒಂದೊಂದು ಪ್ರಕರಣವನ್ನು ಒಂದೊಂದು ರೀತಿ ತನಿಖೆ ಮಾಡುತ್ತಿದ್ದೀರಾ ಎಂದು ಆಕೋಶ ವ್ಯಕ್ತಪಡಿಸಿದ್ದಾರೆ.