ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಯಾದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ (Bengaluru Mysuru Expressway) ಇರುವ ನ್ಯೂನ್ಯತೆಯನ್ನು ಸರಿಪಡಿಸಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ (MP Pratap Simha) ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳೇ, ರಸ್ತೆ ಕಿತ್ತು ಬಂದಿಲ್ಲ, Expansion joint ಬಳಿ ಇದ್ದ ಸಣ್ಣ ನ್ಯೂನ್ಯತೆಯನ್ನು ಅನ್ನು ಸರಿಪಡಿಸಲಾಗುತ್ತಿದೆ. pic.twitter.com/MqoCSJYlDt
— Pratap Simha (@mepratap) March 15, 2023
Advertisement
ಮಾಧ್ಯಮಗಳಲ್ಲಿ ರಸ್ತೆ ಕಿತ್ತು ಬಂದಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, ರಸ್ತೆ ಕಿತ್ತು ಬಂದಿಲ್ಲ, ಎಕ್ಸ್ಪನ್ಶನ್ ಜಾಯಿಂಟ್ (Expansion Joint) ಬಳಿ ಇದ್ದ ಸಣ್ಣ ನ್ಯೂನತೆಯನ್ನು ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2 ಮದುವೆಯಾದ ಟೆಕ್ಕಿ – ವಾರದಲ್ಲಿ 3 ದಿನ ಮೊದಲ ಪತ್ನಿಗೆ, 3 ದಿನ ಇನ್ನೊಬ್ಬಳಿಗೆ, ಸಂಡೇ ಫ್ರೀ
Advertisement
ಮಾರ್ಚ್ 12 ರಂದು ಪ್ರಧಾನಿ ಮೋದಿ ದಶಪಥ ರಸ್ತೆಯನ್ನು ಉದ್ಘಾಟನೆ ಮಾಡಿದ್ದರು. ಮಾರ್ಚ್ 14 ರಿಂದ ಈ ರಸ್ತೆಯಲ್ಲಿ ಟೋಲ್ ಸಂಗ್ರಹ ಆರಂಭವಾಗಿತ್ತು.