ರಾಮನಗರ: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru – Mysuru Expressway) ಟೋಲ್ ಕಟ್ಟಲಾಗದೇ ಕೆಎಸ್‌ಆರ್‌ಟಿಸಿ (KSRTC) ಬಸ್ ಒನ್ ವೇಯಲ್ಲಿ ವಾಪಸ್ಸಾಗಿರುವ ಘಟನೆ ಬಿಡದಿಯ ಶೇಷಗಿರಿಹಳ್ಳಿ ಟೋಲ್ ಬಳಿ ನಡೆದಿದೆ.
Advertisement
ಕೆಎ 10 ಎಫ್ 0492 ನಂಬರ್‌ನ ಸಾರಿಗೆ ಬಸ್ ಮೈಸೂರಿನಿಂದ ಬೆಂಗಳೂರಿಗೆ ಹೊರಟ್ಟಿತ್ತು. ಈ ವೇಳೆ ಬಸ್‍ನಲ್ಲಿ ಫಾಸ್ಟ್ ಟ್ಯಾಗ್ ಇಲ್ಲದ ಕಾರಣ ಶೇಷಗಿರಿಹಳ್ಳಿ ಟೋಲ್ ಸಿಬ್ಬಂದಿ ದುಪ್ಪಟ್ಟು ಹಣ ಕಟ್ಟುವಂತೆ ತಿಳಿಸಿದ್ದಾರೆ. ಆದರೆ ಹಣ ಕಟ್ಟದೇ ಬಸ್ ಚಾಲಕ ಹಾಗೂ ನಿರ್ವಾಹಕ ಒನ್ ವೇಯಲ್ಲೇ ಮೈಸೂರು ಕಡೆಗೆ ಮರಳಿದ್ದಾನೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಜಾರಿಗೆ ಕೌಂಟ್‍ಡೌನ್ – ನೋಂದಣಿ ಪ್ರಕ್ರಿಯೆ ಹೇಗೆ? ಯಾರು ಅರ್ಹರು?
Advertisement
Advertisement
ಟೋಲ್‍ನಿಂದ ಬಿಡದಿಯ ಹನುಮಂತನಗರದವರೆಗೂ ಸುಮಾರು 2 ಕೀ.ಮೀ ಬಸ್ ಒನ್ ವೇಯಲ್ಲೇ ಸಂಚರಿಸಿದೆ. ಬಳಿಕ ಸರ್ವಿಸ್ ರಸ್ತೆಯ ಮೂಲಕ ಬೆಂಗಳೂರಿಗೆ ತೆರಳಿದೆ. ಬಸ್ ಶುಭ ಕಾರ್ಯಕ್ರಮಕ್ಕೆ ತೆರಳಿರುವ ಸಾಧ್ಯತೆಗಳಿದ್ದು, ಬಸ್‍ನ್ನು ಹೂವಿನ ಹಾರಗಳಿಂದ ಸಿಂಗರಿಸುವುದು ವೀಡಿಯೋದಲ್ಲಿ ಕಂಡು ಬಂದಿದೆ.
Advertisement
ಬಸ್ ಒನ್‍ವೇಯಲ್ಲಿ ಸಂಚರಿಸುವ ದೃಶ್ಯ ವಾಹನ ಸವಾರರ ಮೊಬೈಲ್‍ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಜಾಗರೂಕತೆ ತೋರಿಸಿರುವ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಸಾರ್ವಜನಿಕರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಬಿಡದಿ ಪೊಲೀಸರು (Bidadi Police) ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: 12 ಜಿಲ್ಲೆಗಳ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ ಅನ್ನ ಭಾಗ್ಯದ ಹಣ
Web Stories