ಮೈಸೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ (Bengaluru Mysuru Expressway) ನಿರ್ಮಾಣಕ್ಕೆ ಜೆಡಿಎಸ್ ಸರ್ಕಾರದ ಕೊಡುಗೆಯೂ ಇದೆ. ಮೈತ್ರಿ ಸರ್ಕಾರ ಇದ್ದಾಗ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಅನುಮೋದನೆ ಕೊಡದೇ ಇದ್ದಿದ್ದರೇ ರಸ್ತೆ ಹೇಗೆ ಆಗುತ್ತಿತ್ತು ಎಂದು ಜೆಡಿಎಸ್ ಶಾಸಕ ಸಿ.ಎಸ್ ಪುಟ್ಟರಾಜು (CS Puttaraju) ಪ್ರಶ್ನಿಸಿದ್ದಾರೆ.
Advertisement
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ದಶಪಥ ರಸ್ತೆ ಕ್ರೆಡಿಟ್ ವಾರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ದಶಪಥ ರಸ್ತೆಗೆ ಜೆಡಿಎಸ್‌ನದ್ದೂ (JDS) ಪಾಲಿದೆ ಎಂದು ಹೇಳಿದರು. ಇದನ್ನೂ ಓದಿ: ಸುಮಲತಾ ಶುಕ್ರವಾರ ಬಿಜೆಪಿ ಸೇರ್ತಾರೆ: ಶಾಸಕ ಪುಟ್ಟರಾಜು
Advertisement
ಪ್ರತಾಪ್ ಸಿಂಹ (Pratap Simha) ಹೆಜ್ಜೆ-ಹೆಜ್ಜೆಗೂ ಚೀಫ್ ಎಂಜಿನಿಯರ್ ಥರ ಆಡ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತಾಪ್ ಸಿಂಹಗೇ ಹೆದ್ದಾರಿ ಯೋಜನೆ ಗುತ್ತಿಗೆ ಕೊಟ್ಟಿದ್ಯಾ? ಇಡೀ ಯೋಜನೆ ನಾನೊಬ್ಬನೇ ಮಾಡಿಸಿದ್ದೇನೆ ಅಂತಾ ಓಡಾಡಿಕೊಂಡಿದ್ದಾರೆ. ನಾನು ಎಂಪಿ ಆಗಿದ್ದವನು. ದೆಹಲಿಯಲ್ಲಿ ಏನೆಲ್ಲಾ ಹೋರಾಟ ಮಾಡಿದ್ದೀನಿ ಅಂತಾ ಯಡಿಯೂರಪ್ಪ ಅವರ ಬಳಿ ಕೇಳಿ ತಿಳಿದುಕೊಳ್ಳಲಿ ಎಂದು ಹೇಳಿದರು. ಇದನ್ನೂ ಓದಿ: ಮೋದಿ ರೋಡ್ ಶೋಗೆ ಮೊದಲೇ ಸಿದ್ದರಾಮಯ್ಯ ಪರಿಶೀಲನಾ ಯಾತ್ರೆ
Advertisement
Advertisement
ಮೈತ್ರಿ ಸರ್ಕಾರ ಇದ್ದಾಗ ಕುಮಾರಸ್ವಾಮಿ ಯೋಜನೆಯ ಅನುಮೋದನೆ ನೀಡದೇ ಇದ್ದಿದ್ದರೆ ಹೆದ್ದಾರಿ ಹೇಗೆ ಆಗುತ್ತಿತ್ತು. ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದಿದ್ರೂ ಈ ಯೋಜನೆಗೆ ಸಹಕಾರ ಕೊಡಲೇಬೇಕಿತ್ತು. ಹೆದ್ದಾರಿ ಬಂದಿರುವುದರಿಂದ ಚನ್ನಪಟ್ಟಣ, ರಾಮನಗರ, ಮಂಡ್ಯ ಶ್ರೀರಂಗಪಟ್ಟಣದ ನೂರಾರು ಕುಟುಂಬಗಳ ಬಾಯಿಗೆ ಮಣ್ಣು ಬಿದ್ದಿದೆ ಎಂದು ತಿಳಿಸಿದರು.