ಚಾಮರಾಜನಗರ: ಬಿಜೆಪಿ (BJP), ಕಾಂಗ್ರೆಸ್ (Congress), ಜೆಡಿಎಸ್ (JDS) ಸರ್ಕಾರಗಳಾಗಲಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಾಗಲಿ ತಮ್ಮ ಮನೆಯಿಂದ ಹಣ ತಂದು ಬೆಂಗಳೂರು-ಮೈಸೂರು ದಶಪಥ ರಸ್ತೆ ಮಾಡಿಸಿಲ್ಲ. ಅದು ನಿರ್ಮಾಣ ಆಗಿರೋದು ಜನರ ದುಡ್ಡಿನಿಂದ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ವಾಗ್ದಾಳಿ ನಡೆಸಿದ್ದಾರೆ.
Advertisement
ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಶಪಥ ರಸ್ತೆ (Bengaluru Mysuru Expressway) ನಿರ್ಮಾಣವಾಗಲು ನಾನೇ ಕಾರಣ ಎನ್ನುತ್ತಿರುವ ಸಂಸದ ಪ್ರತಾಪ್ ಸಿಂಹ ಅವರ ಮಾತು ಅರ್ಥವಿಲ್ಲದ್ದು. ದೇಶದಲ್ಲಿ ಕೇಂದ್ರ ಸರ್ಕಾರ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಅದೆಲ್ಲ ನರೇಂದ್ರ ಮೋದಿ ಅವರದ್ದು ಎನ್ನಲು ಸಾಧ್ಯವಿಲ್ಲ. ಹಾಗೆಯೇ ರಸ್ತೆ ನನ್ನಿಂದ ನಿರ್ಮಾಣವಾಗಿದೆ ಅನ್ನೋದು ಮೂರ್ಖತನದ ಪರಮಾವಧಿ ಎಂದು ಹೇಳಿದ್ದಾರೆ.
Advertisement
Advertisement
ದಶಪಥ ರಸ್ತೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಕೇಂದ್ರ, ರಾಜ್ಯದ ಮತ್ತು ಜನರ ತೆರಿಗೆ ಹಣದಿಂದ ನಿರ್ಮಾಣವಾದ ರಸ್ತೆ ಅದು. ರಾಜಕೀಯ ಪಕ್ಷಗಳು ಇದರ ಲಾಭ ತೆಗೆದುಕೊಳ್ಳಲು ಮುಂದಾಗಬಾರದು ಎಂದು ತಿಳಿವಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮೋದಿ ರೋಡ್ ಶೋಗೆ ಮೊದಲೇ ಸಿದ್ದರಾಮಯ್ಯ ಪರಿಶೀಲನಾ ಯಾತ್ರೆ
Advertisement
ದಶಪಥ ರಸ್ತೆಗೆ ಯಾರೂ ಮಾಲೀಕರಲ್ಲ. ಸಮಗ್ರ ದೇಶ, ರಾಜ್ಯದ ಜನರು ನೀಡಿರುವ ತೆರಿಗೆಯಿಂದ ನಿರ್ಮಾಣವಾಗಿದೆ. ಆದ್ದರಿಂದ ಇದನ್ನು ಯಾರೂ ಸಹ ನಮ್ಮದು ಅನ್ನೋಕೆ ಆಗಲ್ಲ ಎಂದ ಅವರು, ಬೆಂಗಳೂರು – ಮೈಸೂರು ದಶಪಥ ರಸ್ತೆಗೆ `ಕನ್ನಡ ತಾಯಿ ಭುವನೇಶ್ವರಿ ರಸ್ತೆ’ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದಶಪಥ ರಸ್ತೆ ಜೆಡಿಎಸ್ ಸರ್ಕಾರದ ಕೊಡುಗೆ – ಶಾಸಕ ಪುಟ್ಟರಾಜು