ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru-Mysuru Expressway) ಎರಡನೇ ಟೋಲ್ ಜಾರಿಯಾದ ಬೆನ್ನಲ್ಲೇ ಮಂಗಳವಾರದಿಂದ ಈ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಯಾಣ ದರವೂ (Bus Ticket) ಏರಿಕೆಯಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ಜುಲೈ 1 ರಿಂದ ಆರಂಭಗೊಂಡಿದೆ. ಇಲ್ಲಿನ ಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 525 ರೂ. ಟೋಲ್ ಸಂಗ್ರಹಿಸಲಾಗುತ್ತಿದೆ. ಇದನ್ನ ಸರಿದೂಗಿಸಲು ಕೆಎಸ್‌ಆರ್‌ಟಿಸಿ ಈ ಮಾರ್ಗದಲ್ಲಿ ಸಾಮಾನ್ಯ ಸಾರಿಗೆಗೆ 15 ರೂ., ರಾಜಹಂಸಕ್ಕೆ 20 ರೂ., ವೋಲ್ವೋ ಮತ್ತು ಎಲೆಕ್ಟ್ರಿಕ್ ಬಸ್‌ಗಳ ಟಿಕೆಟ್ ದರವನ್ನು 30 ರೂ.ಗಳಷ್ಟು ಹೆಚ್ಚಿಸಿದೆ. ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಕಲ್ಲು ಹೊಡೆತ – ಮಕ್ಕಳಿಬ್ಬರು ಪೊಲೀಸರ ವಶಕ್ಕೆ
ಈ ಹಿಂದೆ ಸಾಮಾನ್ಯ ಸಾರಿಗೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ 170 ರೂ. ಇತ್ತು, ಈಗ 185 ರೂ. ಆಗಿದೆ. ರಾಜಹಂಸ 230 ರಿಂದ 250 ರೂ.ಗೆ ಏರಿಕೆಯಾಗಿದೆ. ವೋಲ್ವೋ ಅಥವಾ ಇವಿ ಬಸ್‌ಗಳಲ್ಲಿ 330 ರಿಂದ 360 ರೂ.ಗೆ ಟಿಕೆಟ್ ದರ ಹೆಚ್ಚಳ ಆಗಿದೆ.
ಇದಕ್ಕೂ ಮುನ್ನ ಕೆಳೆದ ಕೆಲ ತಿಂಗಳ ಹಿಂದಷ್ಟೇ ಬೆಂಗಳೂರು ಬಳಿಯ ಕಣಮಿಣಕಿ ಹಾಗೂ ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿಯ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಶುರುವಾದಾಗ, ಆಗಲೂ ಕೂಡ ಬಸ್ ಟಿಕೆಟ್ ದರವನ್ನ 20 ರಿಂದ 35 ರೂ.ಗೆ ಹೆಚ್ಚಿಸಲಾಗಿತ್ತು. ಸದ್ಯ ಈಗ ಮತ್ತೆ ಏರಿಕೆ ಆಗಿರೋದು ಸಾರಿಗೆ ಸವಾರರ ಜೇಬನ್ನ ಇನ್ನಷ್ಟು ಭಾರವನ್ನಾಗಿಸಿದೆ. ಇದನ್ನೂ ಓದಿ: ಪೊಲೀಸರ ಎದುರೇ SSLC ಹುಡುಗರ ಫೈಟ್ – ಎಸ್‌ಐ ಮೂಗಿಗೆ ಗಾಯ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]