ಮುಂಬೈ: ಬೆಂಗಳೂರಿನ 29 ವರ್ಷದ ಸಂಗೀತಗಾರ ಕರಣ್ ಜೋಸೆಫ್ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ಬಾಂದ್ರಾದಲ್ಲಿ ನಡೆದಿದೆ.
ಕರಣ್ ತನ್ನ ಸ್ನೇಹಿತ ರಿಷಿ ಷಾ ಜೊತೆ ಅವರ ಫ್ಲಾಟ್ ನಲ್ಲಿ ವಾಸಿಸುತ್ತಿದ್ದರು ಹಾಗೂ ಆತನ ಸ್ನೇಹಿತ ರಿಷಿ ಷಾ ಕೆಲಸ ಮಾಡುವ ಕಂಪೆನಿಯಿಂದ ಆ ಫ್ಲಾಟ್ ಅನ್ನು ಕೊಡಲಾಗಿತ್ತು. ಅಲ್ಲಿ ಕಿಟಕಿ ಹತ್ತಿರ ಹೋಗಿ ಜಿಗಿದಿದ್ದಾರೆ ಎಂದು ಮುಂಬೈನ ಪೊಲೀಸರು ತಿಳಿಸಿದ್ದಾರೆ.
Advertisement
ಕಳೆದ ಒಂದು ತಿಂಗಳಿನಿಂದ ಕರಣ್ ಅಲ್ಲಿ ವಾಸವಾಗಿದ್ದು ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯಾದ ಪಂಡಿತ್ ಠಾಕ್ರೆ ಹೇಳಿದ್ದಾರೆ.
Advertisement
Advertisement
ಬೆಳಗ್ಗೆ 8.30ಕ್ಕೆ ಲಿವಿಂಗ್ ರೂಮ್ ನಲ್ಲಿ ಕರಣ್ ತನ್ನ ಸ್ನೇಹಿತರ ಜೊತೆ ಟಿವಿ ನೋಡುತ್ತಿದ್ದರು. ಆಗ ಕರಣ್ ಎದ್ದು ನಿಂತು ಕಿಟಕಿ ಹತ್ತಿರ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಅವರು ಮದ್ಯಪಾನ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಕರಣ್ ನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು. ಕರಣ್ ಶುಕ್ರವಾರ ರಾತ್ರಿ ಮನೆಯಿಂದ ಹೊರಗೆ ಹೋದರೆ ಶನಿವಾರ ಬೆಳ್ಳಗೆ ಬರುತ್ತಿದ್ದರು ಎಂದು ಠಾಕ್ರೆ ಹೇಳಿದ್ದಾರೆ.
ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಗಲಿಲ್ಲ. ಕರಣ್ ಅವರ ಆತ್ಮಹತ್ಯೆ ಹಿಂದಿರುವ ಕಾರಣ ತಿಳಿಯಲು ಅವರು ಬಳಸುತ್ತಿದ್ದ ಮೊಬೈಲ್ ಫೋನ್ ನನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರಣ್ ಅವರ ಪೋಷಕರಿಗೆ ಘಟನೆಯ ಬಗ್ಗೆ ತಿಳಿಸಿ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಒಪ್ಪಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಣ್ ಜೋಸೆಫ್ ಭಾರತದ ಅತ್ಯುತ್ತಮ ಸಂಗೀತಗಾರ ಎಂಟಿವಿ ಅನ್ ಪ್ಲಗಡ್ ನಲ್ಲಿ ಪೆಂಟಾಗ್ರಾಂ ನುಡಿಸುತ್ತಿದ್ದರು ಎಂದು ಗಾಯಕ ಹಾಗೂ ಸಂಗೀತ ಸಂಯೋಜಕ ವಿಶಾಲ್ ದಡ್ಲಾನಿ ಟ್ವೀಟ್ ಮಾಡಿದ್ದಾರೆ.
#KaranJoseph was a genius. Should have been far more celebrated than he was. It's really unfair, how the music scene works in India. 🙁
— VISHAL DADLANI (@VishalDadlani) September 9, 2017
Destroyed. Karan Joseph, one of the most incredible Indian musicians, has committed suicide. Played with Pentagram on our MTV Unplugged set.
— VISHAL DADLANI (@VishalDadlani) September 9, 2017