– ವೈದ್ಯೆ ಕೃತಿಕಾ ರೆಡ್ಡಿ ಸಾವಿನ ಹಿಂದೆ `ಅವಳ’ನೆರಳು..?
ಬೆಂಗಳೂರು: ಹೆಂಡತಿಯನ್ನು ಹೀಗೂ ಕೊಲೆ ಮಾಡಬಹುದಾ ಎಂಬ ಸುದ್ದಿ ನಿಜಕ್ಕೂ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಅನಸ್ತೇಷಿಯಾ (Anesthesia) ಇಂಜೆಕ್ಷನ್ ಕೊಟ್ಟು ವೈದ್ಯೆ ಪತ್ನಿಯನ್ನ ಕಿಲ್ಲರ್ ಡಾಕ್ಟರ್ ಮರ್ಡರ್ ಮಾಡಿರುವುದು ಹೆತ್ತೊಡಲಿಗೆ ಕಿಚ್ಚು ಹಚ್ಚುವಂತಿ ಮಾಡಿದೆ. ಮಗಳೂ ವೈದ್ಯೆ. ಆಕೆಯ ಬದುಕು ಸುಂದರವಾಗಿರಲಿ ಎಂದು ಪೋಷಕರು ವೈದ್ಯನಿಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿದ್ದರು. ಆ ಕಿರಾತಕ ತಾಳಿ ಕಟ್ಟಿ, ಹಸೆಮಣೆ ಏರಿದ್ದ ಪತ್ನಿಯನ್ನೇ ಕೊಂದಿದ್ದಾನೆ. ವೈದ್ಯಕೀಯ ವಿದ್ಯೆ ಬಳಸಿ ಮುದ್ದಾಗಿದ್ದ ಮಡದಿಯ ಉಸಿರು ನಿಲ್ಲಿಸಿದ್ದಾನೆ. ಆತನೇ ಡಾ. ಕೃತಿಕಾ ರೆಡ್ಡಿ ಕೊಂದ ಕೊಲೆಗಾರ ಡಾ. ಮಹೇಂದ್ರ ರೆಡ್ಡಿ.
ಬೇರೆ ಯುವತಿ ಜೊತೆ ಕಳ್ಳಸಂಬಂಧ?
ವೈದ್ಯನಾಗಿದ್ದ ಪತಿ, ವೈದ್ಯೆ ಪತ್ನಿಯನ್ನ ಕೊಂದ ಪ್ರಕರಣದಲ್ಲಿ ಟ್ವಿಸ್ಟ್‌ಗಳು ಸಿಗುತ್ತಿವೆ. ಕೊಲೆಗಾರ ಡಾ. ಮಹೇಂದ್ರ ರೆಡ್ಡಿ ಅನೈತಿಕ ಸಂಬಂಧ ಹೊಂದಿದ್ದ ಎಂಬ ಆರೋಪಗಳು ಕೇಳಿಬಂದಿವೆ. ಪ್ರೇಯಸಿಗೋಸ್ಕರ ಪತ್ನಿ ಕೃತಿಕಾ ರೆಡ್ಡಿಯನ್ನ (Krutkia Reddy) ಕೊಲೆ ಮಾಡಿದ್ದಾನೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ, ವೃತ್ತಿಯಲ್ಲಿ ವೈದ್ಯನಾಗಿರುವ ಆತ, ಬೇರೆ-ಬೇರೆ ಯುವತಿಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಶಂಕಿಸಿದ್ದು, ಇದೇ ಕಾರಣಕ್ಕೆ ಕೃತಿಕಾಳನ್ನ ಹತ್ಯೆಗೈದಿದ್ದಾರೆನೆ ಎಂದು ಆಕೆಯ ತಂದೆ ಮುನಿರೆಡ್ಡಿ ದೂರಿದ್ದಾರೆ.
ಸಹೋದರ ಮೆಡಿಕಲ್‌ನಲ್ಲಿ ಅನಸ್ತೇಷಿಯಾ ಖರೀದಿ?
ಇನ್ನೂ ಡಾ.ಕೃತಿಕಾ ಕೊಲೆ ಮಾಡುವುದಕ್ಕೆ ಮಹೇಂದ್ರ ರೆಡ್ಡಿ (Mahendra Reddy) ಅನಸ್ತೇಷಿಯಾ ಬಳಕೆ ಮಾಡಿರುವುದು ಎಫ್‌ಎಸ್‌ಎಲ್ ವರದಿಯಲ್ಲಿ ಬಹಿರಂಗವಾಗಿದೆ. ಆದ್ರೆ, ಈ ಮೆಡಿಸನ್ ಖರೀದಿ ಮಾಡಿದ್ದೆಲ್ಲಿ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆರೋಪಿ ಮಹೇಂದ್ರ, ತಾನು ಕೆಲಸ ಮಾಡುತ್ತಿದ್ದ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಮಡಿವಾಳದಲ್ಲಿರುವ ಆತನ ಸಹೋದರನ ಮೆಡಿಕಲ್ ಶಾಪ್‌ನಲ್ಲಿ ಅನಸ್ತೇಷಿಯಾ ಖರೀದಿ ಮಾಡಿದ್ದಾನೆಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ. ಇತ್ತ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಇರುವ ಗ್ಯಾಸ್ಟ್ರೋ ಎಂಟ್ರಾಲಜಿ ಸಂಸ್ಥೆ, ಜುಲೈನಲ್ಲಿಯೇ ಆರೋಪಿ ಮಹೇಂದ್ರ ಕೆಲಸ ಬಿಟ್ಟಿದ್ದಾನೆಂದು ತಿಳಿಸಿದೆ. ಮಾರ್ಚ್‌ನಿಂದ ಗುತ್ತಿಗೆ ಆಧಾರದ ಮೇಲೆ ವೈದ್ಯರಾಗಿ ಸೇವೆ ಮಾಡ್ತಿದ್ದ ಕಿಲ್ಲರ್ ಡಾಕ್ಟರ್ ಜುಲೈನಲ್ಲಿ ಕೆಲಸದಿಂದ ಬಿಡುಗಡೆ ಆಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ದಾಲ್ ಸರೋವರ ಸೇರಿ 6 ಸ್ಥಳದಲ್ಲಿ ನಡೆದಿದ್ದ ವೆಡ್ಡಿಂಗ್ ಶೂಟ್
ಪತಿ ಮಹೇಂದ್ರ ರೆಡ್ಡಿಯಿಂದ ಕೊಲೆಯಾದ ಪತ್ನಿ ಕೃತಿಕಾ ರೆಡ್ಡಿ ಅದೆಷ್ಟೋ ಕನಸು ಕಟ್ಟಿಕೊಂಡು ಮದುವೆಯಾಗಿದ್ಲು. ತಾನು ವೈದ್ಯೆಯಾಗಿದ್ದು ಜನರ ಜೀವ ಉಳಿಸುವ ದೇವತೆಯಾಗಿದ್ಲು. ಕೃತಿಕಾ-ಮಹೇಂದ್ರರ ಮದುವೆ ಭಾರಿ ಅದ್ಧೂರಿಯಾಗಿ ನಡೆದಿತ್ತು. ಇನ್ನು, ಕೃತಿಕಾ ಆಗರ್ಭ ಶ್ರೀಮಂತೆಯಾಗಿದ್ದಳು. ಆಕೆಯ ತಂದೆ ಮುನಿರೆಡ್ಡಿ ನೂರಾರು ಕೋಟಿಯ ಒಡೆಯರಾಗಿದ್ದಾರೆ. ಮಗಳ ಮದುವೆಯನ್ನ ಅದ್ಧೂರಿಯಾಗಿ ಮಾಡಿಸಿದ್ರು. ಇದಷ್ಟೇ ಅಲ್ಲ ಪ್ರೀ ವೆಡ್ಡಿಂಗ್ ಶೂಟ್ ಕೂಡ ಭರ್ಜರಿಯಾಗಿಯೇ ಮಾಡಿಸಿದ್ರು. ಕಾಶ್ಮೀರ ಸೇರಿ ಒಂದಲ್ಲ ಎರಡಲ್ಲ ಬರೋಬ್ಬರಿ 6 ಸ್ಥಳದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಲಾಗಿತ್ತು. 2024ರ ಫೆಬ್ರವರಿಯಲ್ಲಿ ಕಾಶ್ಮೀರಕ್ಕೆ ತೆರಳಿದ್ದ ಜೋಡಿ ಮೇ 26ರಂದು ಹೊಸಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ ಮದುವೆಯಾಗಿ ಕೆಲವೇ ತಿಂಗಳಲ್ಲಿ ವೈದ್ಯ ರಕ್ಕಸನಾಗಿ. ಕೃತಿಕಾಳನ್ನ ಕೊಂದಿದ್ದಾನೆ.