ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಘಟನೆ ನಡೆದರೂ ಬೇಗೂರು ಪೊಲೀಸರು ಕಣ್ಣಿಲ್ಲದವರಂತೆ ವರ್ತಿಸಿದ್ದಾರೆ. ಬಾಡಿಗೆ ತಾಯಿಯಾಗಿದ್ದ ನಾಲ್ಕು ತಿಂಗಳ ಗರ್ಭಿಣಿಗೆ ಗರ್ಭಪಾತವಾಗುವರೆಗೆ ಹಲ್ಲೆ ನಡೆಸಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ.
ಹಫ್ತಾ ವಸೂಲಿ ಮಾಡಲು ತೆರಳಿ ಹಣ ನೀಡದಿದ್ದಕ್ಕೆ ಆರು ಜನರ ಗ್ಯಾಂಗ್ ಹಲ್ಲೆ ನಡೆಸಿದೆ. ಸ್ವಾತಿ ಎಂಬ ಮಹಿಳಾ ಸಂಘಟನೆಯೊಂದರ ಹೆಸರೇಳಿಕೊಂಡು ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಮೀಳಾ, ಪ್ರೇಮ, ರೀಟಾ, ಆಶಾ, ಪೂಜಾ ಹಾಗೂ ಮಂಜುನಾಥ್ ಧಾಂದಲೇ ನಡೆಸಿ ಹಲ್ಲೆ ನಡೆಸಿದ್ದಾರೆ.
Advertisement
Advertisement
ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಪಿಜಿಯೊಂದರಲ್ಲಿ ಆರೈಕೆಯಲ್ಲಿದ್ದ ಗರ್ಭಿಣಿಗೆ ಮಾರ್ಚ್ 11ರ ಪಿಜಿಗೆ ನುಗ್ಗಿದ ಈ ಗ್ಯಾಂಗ್ ಹಣಕ್ಕಾಗಿ ಬೇಡಿಕೆ ಇಟ್ಟಿದೆ. ಹಣ ನೀಡಲು ನಿರಾಕರಿಸಿದ್ದಕ್ಕೆ ಪಿ.ಜಿ ಮಾಲೀಕರಾದ ಗೀತಾ ಮತ್ತು ಗರ್ಭಿಣಿ ಮೇಲೆ ಹಲ್ಲೆ ನಡೆಸಿದ ಪರಿಣಾಮ ಗರ್ಭಪಾತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೊಳಗಾದ ಪಿಜಿ ಮಾಲೀಕರಾದ ಗೀತಾರಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
Advertisement
Advertisement
ಆರು ಜನ ಆರೋಪಿಗಳ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಆದರೆ ಇಂಥ ಕಟುಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಪೊಲೀಸರು ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.