ಮಸೀದಿಯಲ್ಲಿ ಟೆರರಿಸ್ಟ್‌ಗಳು ಬಾಂಬ್ ಇಟ್ಟಿದ್ದಾರೆ – ಪೊಲೀಸ್ರ ನಿದ್ದೆಗೆಡಿಸಿದ ಫೇಕ್‌ ಕಾಲ್‌

Public TV
1 Min Read
112 Police 3

ಬೆಂಗಳೂರು: ಮಸೀದಿಯಲ್ಲಿ ಟೆರೆರಿಸ್ಟ್ ಗಳು (Terrorists) ಬಾಂಬ್ ಇಟ್ಟಿದ್ದಾರೆಂದು ತಡರಾತ್ರಿ ಬಂದ ಅನಾಮಧೇಯ ಕರೆಯೊಂದು ಬೆಂಗಳೂರು ಪೊಲೀಸರ (Bengaluru Police) ನಿದ್ದೆಗೆಡಿಸಿದೆ.

ಹೌದು. ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಶಿವಾಜಿನಗರದ ಅಜಾಂ ಮಸೀದಿಯಲ್ಲಿ ಟೆರೆರಿಸ್ಟ್ ಗಳು ಬಾಂಬ್ ಇಟ್ಟಿದ್ದಾರೆಂದು ಕಿಡಿಗೇಡಿಯೊಬ್ಬ ಕರೆ ಮಾಡಿ ಕಾಲ್‌ ಕಟ್‌ ಮಾಡಿದ್ದಾನೆ.

112 Police

ಪೊಲೀಸ್‌ ಸಹಾಯವಾಣಿ 112 ಸಹಾಯವಾಣಿಗೆ ಕರೆ ಮಾಡಿದ ನಂತರ ಶಿವಾಜಿನಗರದ ಪೊಲೀಸರು (Shivajinagar Police) ಎದ್ನೋ ಬಿದ್ನೋ ಅಂತಾ ದೌಡಾಯಿಸಿದ್ದಾರೆ. ಮಸೀದಿಯ (Mosque) ಮೂಲೆ ಮೂಲೆಯನ್ನೂ ಪರಿಶೀಲನೆ ಮಾಡಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲೂ ಬುಲ್ಡೋಜರ್‌ ಸದ್ದು; ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರವಿಸರ್ಜನೆ ಮಾಡಿದ್ದ ಆರೋಪಿ ಮನೆ ಧ್ವಂಸ

ಬಾಂಬ್ ಸ್ಕ್ವಾಡ್ ಹಾಗೂ ಶ್ವಾನದಳದಿಂದ ಇಡೀ ಮಸೀದಿ ಪರಿಶೀಲನೆ ಮಾಡಿದ ಬಳಿಕ ಬಾಂಬ್‌ ಸಿಗದೇ ಇದೊಂದು ಫೇಕ್‌ ಕಾಲ್‌ ಅಂತಾ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ. ಇದೀಗ ಸುಳ್ಳು ಕರೆ ಮಾಡಿದ ವ್ಯಕ್ತಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಬೆಂಗಳೂರಿನಿಂದ ಹೊರಗಡೆ ಕುಳಿತುಕೊಂಡೇ ಕಿಡಿಗೇಡಿ ಪೊಲೀಸರಿಗೆ ಕರೆ ಮಾಡಿರೋದು ಗೊತ್ತಾಗಿದ್ದು, ಸುಳ್ಳು ಬಾಂಬ್ ಕರೆ ಮಾಡಿದ್ದ ವ್ಯಕ್ತಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ರಾಕೀಯ ತೆವಲಿಗಾಗಿ ಜೀವದ ಜೊತೆ ಚೆಲ್ಲಾಟವಾಡ್ತಿದೆ – KSRTC ನೌಕರನ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ

Web Stories

Share This Article