ಬೆಂಗಳೂರು: ಪ್ರಧಾನಿ ಮೋದಿ ಅವರು ನಾಳೆ ದೇಶದ ಜನತೆಗಾಗಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಳ್ಳುವುದಾಗಿ ಟ್ವೀಟ್ ಮಾಡಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ಈಗಾಗಲೇ ಮೋದಿ ಅವರು, ದೇಶವನ್ನು ಏಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಇಂದು ಕೂಡ ದೇಶದ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಮೋದಿ ಅವರು ವಿಡಿಯೋ ಕಾನ್ಫೆರೆನ್ಸ್ ಮಾಡಿದ್ದರು. ಇದಾದ ನಂತರ ಅವರು ಟ್ವೀಟ್ ಮಾಡಿದ್ದು, ವಿಡಿಯೋ ಸಂದೇಶ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
Advertisement
At 9 AM tomorrow morning, I’ll share a small video message with my fellow Indians.
कल सुबह 9 बजे देशवासियों के साथ मैं एक वीडियो संदेश साझा करूंगा।
— Narendra Modi (@narendramodi) April 2, 2020
Advertisement
ಈ ವಿಚಾರವಾಗಿ ಟ್ವೀಟ್ ಮಾಡಿರುವ ಮೋದಿ ಅವರು, ನಾಳೆ ಬೆಳಗ್ಗೆ 9 ಗಂಟೆಗೆ ಸರಿಯಾಗಿ, ಒಂದು ಚಿಕ್ಕ ವಿಡಿಯೋವನ್ನು ದೇಶದ ಜನರ ಜೊತೆ ಹಂಚಿಕೊಳ್ಳುತ್ತೇನೆ ಎಂದು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆಯೂ ಕೊರೊನಾ ವಿಚಾರವಾಗಿ ದೇಶವನ್ನು ಉದ್ದೇಶಿಸಿ ಮೊದಲ ಬಾರಿ ಮಾತನಾಡಿದಾಗ ಒಂದು ದಿನದ ಜನತಾ ಕರ್ಫ್ಯೂ ಹಾಕಿದ್ದರು. ಇದಾದ ನಂತರ ಎರಡನೇ ಬಾರಿ ಮಾತನಾಡಿದ್ದ ಮೋದಿ 21 ದಿನ ದೇಶವವನ್ನು ಲಾಕ್‍ಡೌನ್ ಮಾಡುವುದಾಗಿ ಘೋಷಣೆ ಮಾಡಿದ್ದರು.
Advertisement
Advertisement
ಈಗ ಮೋದಿ ಅವರು ವಿಡಿಯೋವನ್ನು ಶೇರ್ ಮಾಡುತ್ತೇನೆ ಎಂದು ಹೇಳಿರುವುದು ಕುತೂಹಲ ಹೆಚ್ಚಿಸುವಂತೆ ಮಾಡಿದೆ. ಜೊತೆಗೆ ಈಗ ದೇಶದ ಜನರು ಏಪ್ರಿಲ್ 14ಕ್ಕೆ ಲಾಕ್‍ಡೌನ್ ಅಂತ್ಯವಾಗುತ್ತಾ ಇಲ್ಲ ಮುಂದುವರಿಯುತ್ತಾ ಎಂಬ ಗೊಂದಲದಲ್ಲಿ ಇದ್ದಾರೆ. ಮೋದಿ ನಾಳೆಯ ಈ ವಿಡಿಯೋದಲ್ಲಿ ಜನರ ಈ ಗೊಂದಲಕ್ಕೆ ತೆರೆ ಎಳೆಯುತ್ತಾರಾ? ಇಲ್ಲ ಲಾಕ್‍ಡೌನ್‍ಅನ್ನು ಮುಂದುವರಿಸುವುದರ ಬಗ್ಗೆ ಸುಳಿವು ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.