ಬೆಂಗಳೂರು: ಇತ್ತೀಚೆಗಷ್ಟೇ ಬಿಬಿಎಂಪಿಯ ಶಿಕ್ಷಣ ಸ್ಥಾಯಿ ಸಮಿತಿ ಕಚೇರಿ ಸಂಪೂರ್ಣ ಹಸಿರುಮಯವಾಗಿದ್ದು, ಕಚೇರಿಯಲ್ಲಿ ಗಣ್ಯರ ಫೋಟೋಗಳು ಮಂಗಮಾಯ ಆಗಿದ್ದವು. ಇದೀಗ ಬಿಬಿಎಂಪಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕಚೇರಿಯಲ್ಲಿ ಮತ್ತೊಂದು ಎಡವಟ್ಟು ನಡೆದಿದೆ.
ಶಾಸಕ ಹ್ಯಾರಿಸ್ ಮೆಚ್ಚಿಸಲು ಮುಂದಾಗಿ ಕಾರ್ಪೊರೇಟರ್ ಸೌಮ್ಯಾ ಶಿವಕುಮಾರ್ ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ಕೌನ್ಸಿಲ್ ಕಟ್ಟಡದಲ್ಲಿರುವ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಕಚೇರಿಯಲ್ಲಿ `ಧಾರ್ಮಿಕ ಪಟ’ ಪ್ರದರ್ಶನ ಮಾಡಲಾಗಿದೆ. ಹೀಗಾಗಿ ಶಾಂತಿನಗರ ಕಾರ್ಪೊರೇಟರ್ ಸೌಮ್ಯ ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
Advertisement
Advertisement
ಸೌಮ್ಯ ಶಿವಕುಮಾರ್ ವಿರುದ್ಧ ಪದ್ಮಶ್ರೀ ಬಿ ಶೆಟ್ಟಿಕೆರೆ ಎಂಬವರಿಂದ ಫೇಸ್‍ಬುಕ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ಹೋರಾಟಗಾರರು ಸತ್ತು ಹೋಗಿದ್ದಾರಾ..? ಇದು ಕರ್ನಾಟಕನಾ ಅಥವಾ ಪಾಕಿಸ್ತಾನನಾ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
ಇಮ್ರಾನ್ ಪಾಷಾ ಎಡವಟ್ಟು:
ಬಿಬಿಎಂಪಿ ಶಿಕ್ಷಣ ಸಮಿತಿಯಲ್ಲಿ ಮಾಜಿ ರೌಡಿ ಶೀಟರ್, ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಸಾಹಿತಿಗಳಿಗೆ ಅವಮಾನ ಮಾಡಿ ಕಚೇರಿಯನ್ನು ಸಂಪೂರ್ಣ ಹಸಿರುಮಯ ಮಾಡಲು ಹೊರಟ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇಮ್ರಾನ್ ಪಾಷಾ ಮೇಲೆ ಹತ್ತಾರು ಕೇಸ್‍ಗಳಿದ್ದು, ಈಗ ಶಿಕ್ಷಣ ಸ್ಥಾಯಿ ಅಧ್ಯಕ್ಷರಾಗಿಯೂ ಅವಾಂತರ ಸೃಷ್ಟಿಸಿದ್ದರು. ಕಚೇರಿಯಲ್ಲಿ ಹಿರಿಯ ಸಾಹಿತಿಗಳು, ಪರಮಪೂಜ್ಯರಾದ ಸಿದ್ದಗಂಗಾ ಶ್ರೀಗಳು, ಶಿಕ್ಷಣ ಕ್ರಾಂತಿ ಮಾಡಿದ ಸರ್ವಪಲ್ಲಿ ರಾಧಕೃಷ್ಣ ಯಾರಿಗೂ ಇಲ್ಲಿ ಜಾಗ ಇಲ್ಲ. ಮಿಟಿ ಕಚೇರಿಯಲ್ಲಿದ್ದ ಕವಿಗಳು, ಸಾಹಿತಿಗಳ ಫೋಟೋಗಳಿಗೆ ಕೊಕ್ ಕೊಟ್ಟಿದ್ದರು.
Advertisement
ಕುವೆಂಪು, ದ.ರಾ.ಬೇಂದ್ರೆ, ಸರ್ವಪಲ್ಲಿ ರಾಧಾಕೃಷ್ಣನ್ ಫೋಟೋಗಳನ್ನು ತೆರವು ಮಾಡಿದ್ದು ಶಿಕ್ಷಣ ಕಮಿಟಿಯಲ್ಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಅವಮಾನ ಮಾಡಲಾಗಿತ್ತು. ಕಮಿಟಿ ಕಚೇರಿಯಲ್ಲಿದ್ದ ಸಿದ್ದಗಂಗಾ ಶ್ರೀಗಳು, ಬಾಲಗಂಗಾಧರ ಸ್ವಾಮೀಜಿಯವರ ಭಾಚಿತ್ರವನ್ನು ತೆರವು ಮಾಡಿದ್ದರು. ಸಿಎಂ, ಡಿಸಿಎಂ, ಪ್ರಧಾನಿ ಫೋಟೋ ಹಾಕದೇ ಉದ್ಧಟತನ ತೋರಿ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv