ಬೆಂಗಳೂರು: ಆತ್ಮಗಳ ಜೊತೆ ಮಾತಾಡುತ್ತೇನೆಂದು ಮನೆ ಬಿಟ್ಟು ತೆರಳಿದ್ದ ಬಾಲಕಿ ಗುಜರಾತ್ನ ಸೂರತ್ನಲ್ಲಿ ಪತ್ತೆಯಾಗಿದ್ದಾಳೆ.
ಕಳೆದ ಅಕ್ಟೋಬರ್ 31 ರಂದು ಮನೆಬಿಟ್ಟು ತೆರಳಿದ್ದು, 78 ದಿನಗಳ ಬಳಿಕ ಸೂರತ್ನಲ್ಲಿ ಜನವರಿ 15 ರಂದು ಪತ್ತೆಯಾಗಿದ್ದಾಳೆ. ಬಾಲಕಿಯು ಆತ್ಮಗಳ ಜೊತೆ ಮಾತನಾಡುವದನ್ನು ಅಭ್ಯಾಸ ಮಾಡುತ್ತೇನೆಂದು ಬೆಂಗಳೂರಿನಿಂದ ಸೂರತ್ ತಲುಪಿದ್ದು, ಸೂರತ್ನ ಅನಾಥಾಶ್ರಮವೊಂದರಲ್ಲಿ ಪತ್ತೆಯಾಗಿದ್ದಾಳೆ. ಇದನ್ನೂ ಓದಿ: ಕೊಹ್ಲಿ ನಾಯಕತ್ವ ತ್ಯಜಿಸಲು ಇದೇ ಕಾರಣ!
Advertisement
Advertisement
ಸದ್ಯ ಸುಬ್ರಹ್ಮಣ್ಯನಗರ ಪೊಲೀಸರು ಅಪ್ರಾಪ್ತ ಬಾಲಕಿಯನ್ನ ಪೋಷಕರಿಗೆ ಒಪ್ಪಿಸಿದ್ದು, ಮನೆಯಿಂದ ತೆರಳುವ ವೇಳೆ 2 ಜೊತೆ ಬಟ್ಟೆ 2500 ರೂ ನಗದು ಕೊಂಡೊಯ್ದಿದ್ದಳು. ಇದನ್ನೂ ಓದಿ: ಟೆಸ್ಟ್ ನಾಯಕತ್ವಕ್ಕೆ ಗುಡ್ಬೈ – ಕೊಹ್ಲಿ ಬ್ರ್ಯಾಂಡ್ ಮೌಲ್ಯ ಇಳಿಕೆ?