ಬೆಂಗಳೂರು: ಅಪ್ರಾಪ್ತ ಮಗನಿಗೆ ಮದುವೆ ಮಾಡಿ ಪೋಷಕರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಂಗಳೂರಿನ ಪುಟ್ಟೆಹಳ್ಳಿಯಲ್ಲಿ ನಡೆದಿದೆ.
ಮಗ ಬೇಡ ಅಂದ್ರು ಬಲವಂತದಿಂದ 19 ವರ್ಷದ ಯುವತಿ ಜೊತೆ ಮದುವೆ ಮಾಡಿಸಿ ಯುವಕನ ತಂದೆ ತಾಯಿ ಭಯದ ವಾತಾವರಣದಲ್ಲಿದ್ದಾರೆ. ಅಪ್ರಾಪ್ತನಿಗೆ ಮದುವೆ ಮಾಡಿ ಮನೆಯಲ್ಲಿ ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲೀಸರೊಂದಿಗೆ ಹೋಗಿ ಮದುವೆ ಹೆಣ್ಣು ಹಾಗೂ ಅಪ್ರಾಪ್ತ ಯುವಕನ್ನ ರಕ್ಷಿಸಿದ್ದಾರೆ.
ಯುವಕ ಅಪ್ರಾಪ್ತವಾಗಿದ್ದರಿಂದ ಬಾಲಮಂದಿರಕ್ಕೆ ಕಳಿಸಿ ಯುವತಿಯನ್ನ ಪೋಷಕರೊಂದಿಗೆ ಕಳಿಸಿಕೊಡಲಾಗಿದೆ. ಘಟನೆ ಸಂಬಂದ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಯುವಕ ಪೋಷಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನಾವು ಮೂಲತಃ ಅಸ್ಸಾಂ ರಾಜ್ಯದವರಾಗಿದ್ದು, ಕಳೆದ 15 ವರ್ಷಗಳಿಂದ ಬೆಂಗಳೂರಿನ ಪುಟ್ಟೆನಹಳ್ಳಿಯಲ್ಲಿ ವಾಸವಾಗಿದ್ದೇವೆ. ಯುವತಿ ಪೋಷಕರು ಆಕೆ ಚಿಕ್ಕವಳಿದ್ದಾಗಲೇ ಮರಣ ಹೊಂದಿದ್ದಾರೆ. ಅವಳು ಒಬ್ಬಳೇ ವಾಸಿಸುತ್ತಿದ್ದರಿಂದ ನನ್ನ ಮಗನ ಜೊತೆ ಮದುವೆ ಮಾಡಿಸಿದ್ದೇವೆ ಎಂದು ವಿಚಾರಣೆ ವೇಳೆ ಯುವಕ ಪೋಷಕರು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. ಈ ಪ್ರಕರಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.