– ಜನರ ಜೀವ ರಕ್ಷಣೆ ನಮ್ಮ ಪ್ರಥಮ ಆದ್ಯತೆ ಅಂದ್ರು ವಿ.ಸೋಮಣ್ಣ
– ವಿ.ಸೋಮಣ್ಣ ರವರು ಅಭಿವೃದ್ದಿ ಪರ ಚಿಂತಕ ಎಂದ್ರು ತೇಜಸ್ವಿ ಸೂರ್ಯ
ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ.ರಾಜ್ ಕುಮಾರ್ ವಾರ್ಡ್ ಡಾ.ಬಿ.ಆರ್ ಅಂಬೇಡ್ಕರ್ ಆಟದ ಮೈದಾನದ ಬಳಿ ಸುಮಾರು 5.5 ಕಿ.ಮೀ ಉದ್ದದ ಎಚ್.ಟಿ. ಲೈನ್ ಅನ್ನು ಸುಮಾರು 7.5 ಕಿ ಮೀ ಭೂಗತ ಕೇಬಲ್ ಆಗಿ ಬದಲಾಯಿಸುವ ಯೋಜನೆಯನ್ನು ಗುದ್ದಲಿ ಪೂಜೆಯನ್ನು ಸ್ಥಳೀಯ ಶಾಸಕರು ವಸತಿ ಸಚಿವ ವಿ.ಸೋಮಣ್ಣ ಮತ್ತು ಲೋಕಸಭಾ ಸದಸ್ಯ, ರಾಷ್ಟೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಯುವ ಮುಖಂಡ ಡಾ.ಅರುಣ್ ಸೋಮಣ್ಣರವರು ನೇರವೆರಿಸಿದರು.
ಗಡಿನಾಡು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ರವರು ಮತ್ತು ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡರು, ಮಾಜಿ ಮಹಾನಗರ ಪಾಲಿಕೆ ಸದಸ್ಯ ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ದಾಸೇಗೌಡರು ಗಂಗಭೈರಯ್ಯ ರಾಮಪ್ಪ, ವಾಗೇಶ್ ಮತ್ತು ರೂಪ ಲಿಂಗೇಶ್ವರ್, ಸವಿತಾ ಕೃಷ್ಣ, ಜಯರತ್ನ, ಶಿಲ್ಪ ಶ್ರೀಧರ್, ಯುನಿರ್ವಸಲ್ ಕೇಬಲ್ ಕಿಶೋರ್ ಕುಮಾರ್ ರವರು ಪಾಲ್ಗೊಂಡಿದ್ದರು.
Advertisement
ವಸತಿ ಸಚಿವ ವಿ.ಸೋಮಣ್ಣರವರು ಮಾತನಾಡಿ, 66ಕೆ.ವಿ ಹೈಟೆನ್ಷನ್ ವಿದ್ಯುತ್ ತಂತಿಗಳು ಗೋವಿಂದರಾಜನಗರ ವಿಧಾನಸಭಾ ಬಹುತೇಕ ಪ್ರದೇಶದಲ್ಲಿ ವಿದ್ಯುತ್ ತಂತಿಗಳು ಹಾದುಹೋಗಿತ್ತು. 35ರಿಂದ 40ವರ್ಷಗಳ ಹಿಂದೆಯೇ ಹೈಟೆನ್ಷನ್ ವಿದ್ಯುತ್ ತಂತಿಗಳ ಕೆಳ ಭಾಗದಲ್ಲಿ ಸಾವಿರಾರು ಕುಟುಂಬಗಳು ವಾಸ ಮಾಡುತ್ತಿದ್ದರು. ಪ್ರತಿ ದಿನ ವಿದ್ಯುತ್ ತಂತಿಗಳ ಶಾಕ್ ಹೊಡೆಯುವ ಅತಂಕ ಮತ್ತು ವಿದ್ಯುತ್ ಪ್ರವಹಿಸಿ ಹಲವಾರು ಜನರು ಪ್ರಾಣಕಳೆದು ಕೊಂಡಿದ್ದಾರೆ ಮತ್ತು ಕೆಲವರು ಆಸ್ಪತ್ರೆ ಸೇರಿದ್ದಾರೆ .ಹೈಟೆನ್ಷನ್ ವಿದ್ಯುತ್ ತಂತಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಇದನ್ನೂ ಓದಿ: ಶಸ್ತ್ರ ಚಿಕಿತ್ಸೆ ನಂತರ ಅಭಿಷೇಕ್ ಫೋಟೋ ಶೇರ್
Advertisement
Advertisement
ತೊಂದರೆಯನ್ನು ನಿವಾರಿಸುವ ಸಲುವಾಗಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸುಮಾರು 55 ಕಿ. ಮೀ ಉದ್ದದ ಎಚ್‍ಟಿ ಲೈನ್ ಅನ್ನು ಸುಮಾರು 7.5 ಕಿ ಮೀ ಭೂಗತ ಕೇಬಲ್ ಆಗಿ ಬದಲಾಯಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜಾಜಿನಗರ 6 ನೇ ಬ್ಲಾಕ್, ಕೈಗಾರಿಕಾ ಪ್ರದೇಶ, ಮಾರೇನಹಳ್ಳಿ, ಎಂ ಸಿ ಬಡಾವಣೆ, ಡಾ. ಬಿ ಆರ್ ಅಂಬೇಡ್ಕರ್ ಆಟದ ಮೈದಾನ, ಮಾರುತಿ ಮಂದಿರ, ಅಗ್ರಹಾರ ದಾಸರಹಳ್ಳಿ, ಗೋವಿಂದರಾಜನಗರ, ಬಿಆರ್‍ವಿ ಕಾಲೋನಿ, ಚಂದ್ರಾ ಬಡಾವಣೆ, ಗಂಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿರುವ ವಿದ್ಯುತ್ ಪ್ರಸರಣ ನಿಗಮದ 66 ಕೆ ವಿ ಹೈಟೆನ್ಷನ್ ವಿದ್ಯುತ್ ತಂತಿಗಳು ಇನ್ನು ಮುಂದೆ ಜನರ ಕಣ್ಣಿಗೆ ಕಾಣದು! ಈ ಅಧಿಕ ಒತ್ತಡದ ತಂತಿಗಳು ಇನ್ನು ಮುಂದೆ ಭೂಗತ ಕೇಬಲ್ ಮೂಲಕ ಹಾದು ಹೋಗಲಿವೆ. ಇನ್ನು ಹೈಟೆನ್ಷನ್ ವಿದ್ಯುತ್ ತಂತಿಗಳ ಕೆಳ ಭಾಗದಲ್ಲಿ ಮನೆ ಮಾಲೀಕರು ನೆಮ್ಮದ್ದಿಯಿಂದ ಜೀವನ ಸಾಗಿಸಬಹುದು. ಇದನ್ನೂ ಓದಿ: 70 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ADLR, DDLR ಎಸಿಬಿ ಬಲೆಗೆ
Advertisement
ತೇಜಸ್ವಿ ಸೂರ್ಯರವರು ಮಾತನಾಡಿ, ಅಭಿವೃದ್ದಿ ಪರ ಚಿಂತಕ, ಸದಾ ಕ್ರಿಯಾಶೀಲ ವ್ಯಕ್ತಿತ್ವ ಸಚಿವ ವಿ.ಸೋಮಣ್ಣರವರು ನಾಗರಿಕರ ಸಮಸ್ಯೆಗಳ ಪರಿಹಾರಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಹೈಟೆನ್ಷನ್ ವಿದ್ಯುತ್ ತಂತಿಗಳಿಂದ ಬೆಂಗಳೂರು ನಗರದಲ್ಲಿ ನೂರಾರು ಜನರ ಜೀವ ಪಡೆದಿದೆ. ಇದಕ್ಕೆ ಪರಿಹಾರ ಒದಗಿಸಬೇಕು ಎಂದು ವಿ.ಸೋಮಣ್ಣರವರ ಅವಿರತ ಶ್ರಮದಿಂದ ಹೈಟೆನ್ಷನ್ ವಿದ್ಯುತ್ ತಂತಿಗಳು ಭೂಮಿಯ ಕೆಳ ಭಾಗದಲ್ಲಿ ಹಾದಹೋಗಲಿದೆ. ಇದರಿಂದ ಜನರ ಜೀವ ರಕ್ಷಣೆ ಜೊತೆಯಲ್ಲಿ ನಗರ ಸೌಂದರ್ಯ ಹೆಚ್ಚಲಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.