ಬೆಂಗಳೂರು: ಟ್ರಾಫಿಕ್ ಜಾಮ್ ನಿಂದ ಕಂಗೆಟ್ಟಿರುವ ಬೆಂಗಳೂರಿಗರು ಇಂದಿನಿಂದ ನಿಟ್ಟುಸಿರು ಬಿಡಬಹುದಾಗಿದೆ. ನಮ್ಮ ಮೆಟ್ರೋ (Namma Metro) ರಾಜಧಾನಿ ಮಂದಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಇಂದಿನಿಂದ ಬಹು ನಿರೀಕ್ಷಿತ ಬೈಯಪ್ಪನಹಳ್ಳಿ (Baiyappanahalli) ಮತ್ತು ಕೆ ಆರ್ ಪುರ (K.R Pura) ನಡುವಿನ ಹಾಗೂ ಕೆಂಗೇರಿ ಮತ್ತು ಚಲಘಟ್ಟ ನಡುವೆ ಮೆಟ್ರೋ ರೈಲು ಓಡಾಟ ಆರಂಭ ಆಗಿದೆ.
Advertisement
ಕೇಂದ್ರ ಸರ್ಕಾರದ (Central Govt) ಸೂಚನೆಯಂತೆ ಬೈಯಪ್ಪನಹಳ್ಳಿ ಮತ್ತು ಕೆ ಆರ್ ಪುರ ನಡುವೆ 2.1 ಕಿಲೋ ಮೀಟರ್ ಮಾರ್ಗ ಮತ್ತು ಕೆಂಗೇರಿ ಮತ್ತು ಚಲಘಟ್ಟ ನಡುವೆ 2.05 ಕಿಲೋ ಮೀಟರ್ ಮೆಟ್ರೋ ರೈಲು ಮಾರ್ಗ ಇಂದಿನಿಂದ ಸೇವೆಗೆ ಲಭ್ಯವಾಗಲಿದೆ. ಇದರಿಂದಾಗಿ ಒಟ್ಟು ನೇರಳೆ ಮಾರ್ಗದ (Purple Line) ಉದ್ದ 43.49 ಕಿಲೋ ಮೀಟರ್‍ಗೆ ಹೆಚ್ಚಳವಾಗಿದೆ. ವೈಟ್ ಫೀಲ್ಡ್ (ಕಾಡುಗೋಡಿ)ಯಿಂದ ಚಲಘಟ್ಟ ಸಂಪರ್ಕಿಸುವ ಈ ಮಾರ್ಗದಲ್ಲಿ 37 ಮೆಟ್ರೋ ನಿಲ್ದಾಣಗಳಿವೆ. ಈ ಹೊಸ ಎರಡು ಮಾರ್ಗದಿಂದ ನಮ್ಮ ಮೆಟ್ರೋ ಸಂಪರ್ಕ ರಾಜಧಾನಿಯಲ್ಲಿ ಒಟ್ಟು 73.81 ಕಿಲೋ ಮೀಟರ್ ಗೆ ಏರಿಕೆ ಆಗಿದೆ. ಈ ಎರಡು ಮಾರ್ಗಗಳು ಪ್ರಮುಖವಾಗಿ ಐಟಿ-ಬಿಟಿ ಉದ್ಯಮಿಗಳಿಗೆ ವರದಾನವಾಗಿದ್ದು, ಟ್ರಾಫಿಕ್ ಜಾಮ್ (Traddic Jam) ಸಮಸ್ಯೆಗೆ ಪರಿಹಾರ ನೀಡಲಿವೆ.
Advertisement
Advertisement
ವೈಟ್‍ಫೀಲ್ಡ್ ನಿಂದ ಪಟ್ಟಂದೂರು ಅಗ್ರಹಾರ ನಿಲ್ದಾಣಕ್ಕೆ 10 ನಿಮಿಷ, ಪಟ್ಟಂದೂರು ಅಗ್ರಹಾರದಿಂದ ಮೈಸೂರು ರಸ್ತೆ ನಿಲ್ದಾಣಕ್ಕೆ 5 ನಿಮಿಷ, ಮೆಜೆಸ್ಟಿಕ್‍ನಿಂದ ಎಂಜಿ ರೋಡ್ ನಿಲ್ದಾಣಕ್ಕೆ 3 ನಿಮಿಷ ಮತ್ತು ಮೈಸೂರು ರಸ್ತೆಯಿಂದ ಚಲಘಟ್ಟಕ್ಕೆ (Challaghatta) 10 ನಿಮಿಷ ಬೇಕಾಗುತ್ತದೆ. ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 5ಕ್ಕೆ ಮೆಟ್ರೋ ರೈಲು ಆರಂಭವಾದ್ರೇ, ಕೊನೆಯ ರೈಲು ವೈಟ್ ಫಿಲ್ಡ್ ನಿಂದ ರಾತ್ರಿ 10.45ಕ್ಕೆ ಹಾಗೂ ಉಳಿದ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11.05ಕ್ಕೆ ಹೊರಡುತ್ತದೆ. ನೇರಳೆ ಮಾರ್ಗದ ಒಟ್ಟು ಪ್ರಯಾಣಕ್ಕೆ 60 ರೂಪಾಯಿ ಪ್ರಯಾಣ ದರವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಿಗದಿ ಮಾಡಿದೆ.
Advertisement
ಒಟ್ಟಿನಲ್ಲಿ ಎರಡು ಮಾರ್ಗಗಳ ಉದ್ಘಾಟನೆ ವಿಳಂಬವಾದ ಹಿನ್ನೆಲೆಯಲ್ಲಿ ಭಾನುವಾರ ಕೇಂದ್ರ ಸರ್ಕಾರ ಬಿಎಂಆರ್‍ಸಿಎಲ್‍ಗೆ ಖಡಕ್ ವಾರ್ನ್ ನೀಡಿ, ಇಂದೇ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸೂಚಿಸಿದೆ. ಈ ಹಿನ್ನಲೆ ಇಂದಿನಿಂದ ಎರಡು ಮಾರ್ಗಗಳು ಪ್ರಯಾಣಿಕರಿಗೆ ಮುಕ್ತವಾಗಿವೆ.
Web Stories