ಬೆಂಗಳೂರು:ಎಲೆಕ್ಟ್ರಾನಿಕ್ ಸಿಟಿಗೆ (Electronic City) ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದಲ್ಲಿ ಮೆಟ್ರೋ (Metro) ಸಂಚಾರ ವಿಳಂಬವಾಗಲಿದೆ. ನಿಗದಿ ಪ್ರಕಾರ ಡಿಸೆಂಬರ್‌ನಲ್ಲಿ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆಗಬೇಕಿತ್ತು. ಆದರೆ ಚೀನಾದಿಂದ (China) ಪೂರೈಕೆ ಆಗಬೇಕಿದ್ದ ಬೋಗಿಗಳ ಪೂರೈಕೆ ವಿಳಂಬವಾದ್ದರಿಂದ ಆರ್.ವಿ.ರಸ್ತೆ-ಬೊಮ್ಮಸಂದ್ರ ಮೆಟ್ರೋ ಮಾರ್ಗದ ಸಂಚಾರ 2024ರ ಮಾರ್ಚ್-ಏಪ್ರಿಲ್‌ಗೆ ಮುಂದೂಡಿಕೆಯಾಗಿದೆ.
2019 ರಲ್ಲಿ ಚೈನಾ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೋರೆಷನ್ (ಸಿಆರ್‌ಆರ್‌ಸಿ) ಜೊತೆ ಬೋಗಿ ಖರೀದಿ ಸಂಬಂಧ ನಮ್ಮ ಮೆಟ್ರೋ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದ ಪ್ರಕಾರ 173 ವಾರಗಳಲ್ಲಿ 216 ಬೋಗಿ ಪೂರೈಸಬೇಕಿತ್ತು. ಕೋವಿಡ್ ಹಾಗೂ ವಿದೇಶಿ ನೇರ ಹೂಡಿಕೆ ನೀತಿ, ವ್ಯಾಪಾರ ನಿರ್ಬಂಧ, ಉಪಗುತ್ತಿಗೆ ಕಂಪನಿಯ ಹುಡುಕಾಟ ಕಾರಣ ನೀಡಿ ಸಿಆರ್‌ಆರ್‌ಸಿ ಬೋಗಿಗಳ ಪೂರೈಕೆ ವಿಳಂಬ ಮಾಡಿದೆ. ಇದನ್ನೂ ಓದಿ: ಭಾರತಕ್ಕಾಗಿ ಮತ್ತೆ ಬ್ಯಾಟಿಂಗ್ ಮುಂದುವರೆಸುತ್ತೇನೆ: ಸಚಿನ್ ತೆಂಡೂಲ್ಕರ್
ಎಲ್ಲವೂ ನಿಗದಿ ಪ್ರಕಾರ ನಡೆದಿದ್ದರೆ 18.2 ಕಿ.ಮೀ. ಈ ಮಾರ್ಗದಲ್ಲಿ ಡಿಸೆಂಬರ್‌ನಲ್ಲಿ ಮೆಟ್ರೋ ಸೇವೆ ಶುರುವಾಗಬೇಕಿತ್ತು. 2021ರಿಂದ ಹಳದಿ ಮಾರ್ಗ ಕಾರ್ಯಾರಂಭ ನಿಗದಿತ ಅವಧಿ ಮುಂದೂಡಿಕೆ ಆಗುತ್ತಲೇ ಇದ್ದು, ಈಗ ಮತ್ತೊಮ್ಮೆ ಡೆಡ್‌ಲೈನ್ ತಪ್ಪಿದೆ.
2019ರಲ್ಲಿ ಸಿಆರ್‌ಆರ್‌ಸಿ ನಾನ್ಜಿಂಗ್ ಪುಜೆನ್ ಕಂಪನಿ ಜೊತೆಗೆ ನಮ್ಮ ಮೆಟ್ರೋ 216 ಬೋಗಿಗಳ (36 ರೈಲು) ಪೂರೈಸುವ ಒಪ್ಪಂದ ನಡೆದಿತ್ತು. ಮೂಲ ಮಾದರಿಯ ಆರು ಬೋಗಿಗಳ ಎರಡು ಸೆಟ್‌ನ್ನು ಚೀನಾ ಕಳುಹಿಸಿದ ಬಳಿಕ ಸಿಆರ್‌ಆರ್‌ಸಿಯಿಂದ ಉಪಗುತ್ತಿಗೆ ಪಡೆದ ಕೋಲ್ಕತ್ತಾದ ಉತ್ತರಪುರ ಬಳಿಯ ತೀತಾಘರ್ ವ್ಯಾಗನ್ ಕಂಪನಿಯು 204 ಬೋಗಿಗಳನ್ನು ಅದೇ ಮಾದರಿಯಲ್ಲಿ ನಿರ್ಮಿಸಿ ಮೆಟ್ರೋಗೆ ನೀಡಬೇಕಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]