ಬೆಂಗಳೂರು: ಕನ್ನಡ ರಾಜ್ಯೋತ್ಸವದ ಹಿನ್ನೆಲೆ ನಮ್ಮ ಮೆಟ್ರೋದ (Namma Metro) ಗ್ರೀನ್ ಲೈನ್‌ನಲ್ಲಿ ಸಂಪೂರ್ಣವಾಗಿ ಅಪ್ಪು ಭಾವಚಿತ್ರಗಳಿಂದ ಕಂಗೊಳಿಸುತ್ತಿರುವ ರೈಲೊಂದು ಸಂಚರಿಸುತ್ತಿದೆ.
ನ.1 ಕನ್ನಡ ರಾಜ್ಯೋತ್ಸವದ ಹಿನ್ನೆಲೆ ನಮ್ಮ ಮೆಟ್ರೋದ ಗ್ರೀನ್ ಲೈನ್‌ನಲ್ಲಿ ರೈಲೊಂದರ ಮೇಲೆ ನಟ ಪುನೀತ್ ರಾಜಕುಮಾರ್ (Puneeth Rajkumar) ಭಾವಚಿತ್ರಗಳನ್ನು ಅಂಟಿಸಲಾಗಿದೆ. ಮೆಟ್ರೋ ಬೋಗಿಗಳ ಮೇಲೆ ಅಪ್ಪು ಭಾವಚಿತ್ರ, ಕನ್ನಡ ಬಾವುಟ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂಬ ಘೋಷವಾಕ್ಯಗಳನ್ನು ಬರೆಯಲಾಗಿದೆ. ಅಲ್ಲದೇ ಕೊನೆಗೆ ಗಂಧದಗುಡಿ (Gandhada Gudi) ಚಿತ್ರದ ಪೋಸ್ಟರ್ ಕೂಡ ಅಂಟಿಸಲಾಗಿದೆ.ಇದನ್ನೂ ಓದಿ: ಮೆಕ್ಸಿಕೋ ಸೂಪರ್ ಮಾರ್ಕೆಟ್‌ನಲ್ಲಿ ಸ್ಫೋಟ; ಮಕ್ಕಳು ಸೇರಿ 23 ಮಂದಿ ಸಾವು
ಪೀಣ್ಯಾದ (Peenya) ಡಿಪೋದಲ್ಲಿ ಮುದ್ರಾ ವೆಂಚರ್ಸ್ ಹಾಗೂ ಲೋಕೇಶ್ ಔಟ್‌ಡೋರ್‌ನವರು ಈ ಅದ್ಭುತ ಹೊರಾಂಗಣ ಡಿಸೈನ್ ಮಾಡಿದ್ದು, ನಮ್ಮ ಮೆಟ್ರೋದೊಂದಿಗೆ ಜಾಹೀರಾತು ಹಕ್ಕುಗಳಿಗಾಗಿ ಈ ಎರಡು ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ.
ಅಪ್ಪು ಭಾವಚಿತ್ರವಿರುವ ಮೆಟ್ರೋ ನಾಗಸಂದ್ರದಿಂದ ಸಿಲ್ಕ್ ಬೋರ್ಡ್‌ವರೆಗೆ ಸಂಚರಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಬಿಎಂಆರ್‌ಸಿಎಲ್‌ನ ಕನ್ನಡ ಪ್ರೀತಿ ಹಾಗೂ ಪುನೀತ್ ಅಭಿಮಾನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ

