ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಗುಡ್ ನ್ಯೂಸ್ ಕೊಡುವುದಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ.
Advertisement
ಸೆಪ್ಟೆಂಬರ್‌ನಿಂದ ಪರ್ಪಲ್ ಲೈನ್ ಎಕ್ಸ್‌ಟೆನ್ಷನ್ ಟ್ರಯಲ್ ರನ್ ಶುರುವಾಗುತ್ತಿದೆ. ಇದರಿಂದ ಟ್ರಾಫಿಕ್ ದಟ್ಟಣೆಯ ಬೈಯಪ್ಪನಹಳ್ಳಿಯಿಂದ, ಕೆ.ಆರ್ ಪುರಂವರೆಗಿನ ಟೆಸ್ಟ್ ಟ್ರಯಲ್ ಮಾಡಲಿದೆ. ವೈಟ್‌ಫೀಲ್ಡ್‌ವರೆಗಿನ ವಿಸ್ತರಣೆಯನ್ನು ಇದೇ ಡಿಸೆಂಬರ್ ಹೊತ್ತಿಗೆ ಮುಗಿಸುವ ಯೋಜನೆಯಲ್ಲಿ ಬಿಎಂಆರ್‌ಸಿಎಲ್ ಇದ್ದು, 2ನೇ ಹಂತದಲ್ಲಿ ಮುಖ್ಯವಾಗಿ ಎಲೆಕ್ಟ್ರಾನಿಕ್ ಸಿಟಿ ಮಾರ್ಗ, ಸಿಲ್ಕ್ ಬೋರ್ಡ್ ಟು ಕೆಆರ್ ಪುರಂ ಮಾರ್ಗ, ಹಾಗೇ ವೈಟ್ ಫೀಲ್ಡ್ ಮಾರ್ಗದಲ್ಲಿ ಮೆಟ್ರೋ ಸಂಚರಿಸಲಿದೆ. ಇದನ್ನೂ ಓದಿ: ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: 3 ಶಾಂತಿಪಾಲನ ಸೈನಿಕರು, 12 ನಾಗರಿಕರು ಮೃತ
Advertisement
Advertisement
ಇಲ್ಲೆಲ್ಲಾ ಐಟಿ, ಬಿಟಿ ಕಂಪನಿಗಳು ಹೆಚ್ಚಾಗಿದ್ದು, ಪೀಕ್ ಅವರ್ಸ್‍ನಲ್ಲಿ ಸಾಕಷ್ಟು ರಷ್ ಆಗುವ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೇ ಮೆಟ್ರೋ ಬೋಗಿಗಳನ್ನು 6ರ ಬದಲಾಗಿ 8ಕ್ಕೆ ಏರಿಸಲು ಸಲಹೆ ನೀಡಲಾಗಿತ್ತು. ಆದರೆ ಬಿಎಂಆರ್‌ಸಿಎಲ್ 8 ಬೋಗಿ ಮಾಡಿದರೆ ಸ್ಟೇಷನ್ ಸ್ಟ್ರಕ್ಚರ್ ಬದಲಾಯಿಸಬೇಕು. ದೊಡ್ಡ ಸ್ಟೇಷನ್ ನಿರ್ಮಾಣಕ್ಕೆ ಭೂಸ್ವಾಧೀನ ಸೇರಿ ಹೆಚ್ಚಿನ ಹಣ ವೆಚ್ಚವಾಗಲಿದೆ. ಹೀಗಾಗಿ ಬೋಗಿ ಜಾಸ್ತಿ ಮಾಡುವುದಕ್ಕಿಂತ ರೈಲಿನ ಸಂಖ್ಯೆ ಹೆಚ್ಚಿಸುವುದು ಸೂಕ್ತ ಎಂದು ತೀರ್ಮಾನಿಸಿದೆ. ಹಾಗಾಗಿ ಎರಡನೇ ಹಂತದಲ್ಲಿ ಪ್ರತಿ ಎರಡು ನಿಮಿಷಕ್ಕೊಂದು ಟ್ರೈನ್ ಓಡಿಸುವಂತಾ ತಂತ್ರಜ್ಞಾನವನ್ನು ಅಳವಡಿಸುವುದಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ. ಇದನ್ನೂ ಓದಿ: 6 ವರ್ಷ ತುಂಬಿದರಷ್ಟೇ 1ನೇ ಕ್ಲಾಸ್‌ಗೆ ಪ್ರವೇಶ – ಗೊಂದಲಕ್ಕೆ ಕಾರಣವಾದ ಆದೇಶ