ಬೆಂಗಳೂರು: ಹಬ್ಬ ಹರಿದಿನಗಳಲ್ಲಿ ಖಾಸಗಿ ಬಸ್ ಗಳು, ಕೆಎಸ್‍ಆರ್ ಟಿಸಿ ಪ್ರಯಾಣಿಕರಿಗೆ ದುಬಾರಿ ಟಿಕೆಟ್ ವಿಧಿಸುವುದು ನಿಮಗೆ ಗೊತ್ತೇ ಇದೆ. ಈಗ ಇದೇ ತಂತ್ರವನ್ನು ಬಿಎಂಆರ್ ಸಿಎಲ್ ಮಾಡಿದ್ದು ಹೊಸ ವರ್ಷದಂದು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿ ಲಾಭ ಮಾಡಲು ಮುಂದಾಗಿದೆ.
ಹೌದು, ಪ್ರತಿದಿನ ಬೆಳಗ್ಗೆ 5 ರಿಂದ ರಾತ್ರಿ 11ರ ವರೆಗೆ ಕಾರ್ಯನಿರ್ವಹಿಸುವ ಮೆಟ್ರೋ ಡಿಸೆಂಬರ್ 31ರ ರಾತ್ರಿ ಬೆಳಗ್ಗಿನ ಜಾವ 2 ಗಂಟೆಯವರೆಗೆ ಸಾರ್ವಜನಿಕರಿಗೆ ಸಂಚಾರ ವ್ಯವಸ್ಥೆ ನೀಡುವುದಾಗಿ ಹೇಳಿದೆ. ಆದರೆ ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಟ್ರಿನಿಟಿ, ಎಂಜಿ ರೋಡ್, ಮತ್ತು ಕಬ್ಬನ್ ಪಾರ್ಕ್ ನಿಲ್ದಾಣದಿಂದ ಪ್ರಯಾಣಿಕರು ಯಾವುದೇ ನಿಲ್ದಾಣಕ್ಕೆ ಪ್ರಯಾಣಿಸಿದರೂ 50 ರೂ. ದರವನ್ನು ನಿಗದಿ ಪಡಿಸಿದೆ.
Advertisement
ಡಿಸೆಂಬರ್ 31ರ ರಾತ್ರಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ ಹೀಗಾಗಿ ಚಿಲ್ಲರೆ ನೀಡಲು ನಮಗೆ ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ 50 ರೂ. ದರವನ್ನು ನಿಗದಿ ಮಾಡಲಾಗಿದೆ ಎಂದು ಅಧಿಕಾರಿಗಳು ತಮ್ಮ ನಡೆಯ ಬಗ್ಗೆ ಸಮರ್ಥನೆ ನೀಡಿದ್ದಾರೆ.
Advertisement
ಸಾರ್ವಜನಿಕರಿಂದ ವಿರೋಧ:
ಸಾರ್ವಜನಿಕರ ಸೇವೆ ನೀಡಬೇಕಾದ ಮೆಟ್ರೋ ಚಿಲ್ಲರೆ ನೆಪದಲ್ಲಿ ಈ ರೀತಿ ದರ ಏರಿಸಿ ಲಾಭಕ್ಕೆ ಮುಂದಾಗಿರುವುದು ಎಷ್ಟು ಸರಿ? ನಾವು ಒಂದು ಟಿಕೆಟ್ ಗೆ ಎಷ್ಟು ದರ ಆಗುತ್ತದೋ ಅಷ್ಟೇ ಹಣವನ್ನು ನೀಡುತ್ತೇವೆ. ನಮಗೆ ಚಿಲ್ಲರೆ ನೀಡುವುದೇ ಬೇಡ. ಈಗ ಹೇಗೆ ಟಿಕೆಟ್ ನೀಡುತ್ತಿರೋ ಅಷ್ಟೇ ದರಲ್ಲಿ ಟಿಕೆಟ್ ನೀಡಬಹುದಲ್ಲವೇ ಎಂದು ಪ್ರಶ್ನೆ ಮಾಡಿ ಮೆಟ್ರೋ ದರ ಏರಿಕೆಯನ್ನು ಟೀಕಿಸುತ್ತಿದ್ದಾರೆ.
Advertisement
Advertisement
https://www.youtube.com/watch?v=xDbb1xHdrZ4