– ಕುಡಿದು ಅಸಭ್ಯ ವರ್ತನೆ ಮಾಡಿದರೆ ಕಿಕ್ ಔಟ್
ಬೆಂಗಳೂರು: ಹೊಸ ವರ್ಷ ಆಚರಣೆ ಹಿನ್ನೆಲೆ ಡಿ.31ರಂದು ಮಧ್ಯರಾತ್ರಿ 2ಗಂಟೆ ವರೆಗೂ ಮೆಟ್ರೋ ಸೇವೆ ವಿಸ್ತರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಡಿಸೆಂಬರ್ 31ರಂದು ಮಧ್ಯರಾತ್ರಿ 2ಗಂಟೆ ವರೆಗೂ ಮೆಟ್ರೋ ಸಂಚರಿಸಲಿದ್ದು, 50 ರೂ. ಮೇಲ್ಪಟ್ಟು ಟಿಕೆಟ್ ಖರೀದಿಸಿದವರಿಗೆ ಬಂಪರ್ ಕೊಡುಗೆಯನ್ನು ಸಹ ನೀಡಿದೆ. ಆದರೆ ಕುಡಿದು ಪ್ರಯಾಣಿಸುವವರಿಗೆ ಎಚ್ಚರಿಕೆ ನೀಡಿದ್ದು, ಕುಡಿದು ಅಸಭ್ಯವಾಗಿ ವರ್ತಿಸಿದರೆ ಕಿಕ್ ಔಟ್ ಮಾಡುವುದಾಗಿ ಬಿಎಂಆರ್‌ಸಿಎಲ್ ತಿಳಿಸಿದೆ.
Advertisement
Advertisement
ಹೊಸ ವರ್ಷದ ಹಿಂದಿನ ದಿನ ಮಧ್ಯರಾತ್ರಿ ಎಂ.ಜಿ ರಸ್ತೆ, ಬ್ರಿಗೇಟ್ ರಸ್ತೆ ಬಳಿ ಸಂಭ್ರಮಾಚರಣೆಗೆ ಸಾವಿರಾರು ಜನ ಸೇರುತ್ತಾರೆ. ಈ ಸಮಯದಲ್ಲಿ ಸಾಕಷ್ಟು ಜನ ಮೆಟ್ರೋದಲ್ಲೇ ಪ್ರಯಾಣಿಸುತ್ತಾರೆ. ಹೀಗಾಗಿ ಟ್ರಿನಿಟಿ ಮೆಟ್ರೋ ಸ್ಟೇಷನ್, ಎಂಜಿ ರಸ್ತೆ, ಕಬ್ಬನ್ ಪಾರ್ಕಿನಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಈ ಮೂರು ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
Advertisement
ಅಲ್ಲದೆ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ತೆರಳುವವರಿಗೆ ಟಿಕೆಟ್ ನೀಡಲು ಕಷ್ಟವಾಗುವುದರಿಂದ ಪೇಪರ್ ಟಿಕೆಟ್ ನೀಡಲು ಮೆಟ್ರೋ ನಿರ್ಧರಿಸಿದೆ. ಸಂಜೆ 4 ಗಂಟೆಗೆ ಎಲ್ಲಾ ಮೆಟ್ರೋ ಸ್ಟೇಷನ್ ನಲ್ಲಿ ಪೇಪರ್ ಟಿಕೆಟ್ ಕೊಡಲಾಗುತ್ತದೆ. ಅಲ್ಲದೆ 50 ರೂ.ಗಿಂತ ಹೆಚ್ಚು ಟಿಕೆಟ್ ಪಡೆದರೆ ಬೆಂಗಳೂರಿನ ಯಾವ ಮೆಟ್ರೋ ನಿಲ್ದಾಣದಲ್ಲಿ ಬೇಕಾದರೂ ಸಂಚರಿಸಬಹು ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
Advertisement
ಮೆಟ್ರೋನಲ್ಲಿ ಡ್ರಿಂಗ್ಸ್ ಮಾಡುವವರು ಸಂಚರಿಸಬಹುದು. ಆದರೆ ಕುಡಿದ ಮತ್ತಿನಲ್ಲಿ ಅಸಭ್ಯ ವರ್ತನೆ ಮಾಡಿದರೆ ಅವರನ್ನು ಆ ಕ್ಷಣವೇ ಮೆಟ್ರೋಯಿಂದ ಕಿಕ್ ಔಟ್ ಮಾಡಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.