Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ತುಮಕೂರಿಗೆ ಮೆಟ್ರೋ – ಡಿಪಿಆರ್‌ ತಯಾರಿಸಲು ಟೆಂಡರ್‌ ಕರೆದ BMRCL
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ತುಮಕೂರಿಗೆ ಮೆಟ್ರೋ – ಡಿಪಿಆರ್‌ ತಯಾರಿಸಲು ಟೆಂಡರ್‌ ಕರೆದ BMRCL

Bengaluru City

ತುಮಕೂರಿಗೆ ಮೆಟ್ರೋ – ಡಿಪಿಆರ್‌ ತಯಾರಿಸಲು ಟೆಂಡರ್‌ ಕರೆದ BMRCL

Public TV
Last updated: November 17, 2025 9:09 am
Public TV
Share
2 Min Read
Namma Metro Greenline
SHARE

– ಪ್ರಸ್ತಾವಿತ ಕಾರಿಡಾರ್‌ನಲ್ಲಿ 25 ನಿಲ್ದಾಣಗಳ ನಿರ್ಮಾಣ

ಬೆಂಗಳೂರು: ತುಮಕೂರಿಗೆ ಮೆಟ್ರೋ ಸೇವೆಗಳನ್ನು ವಿಸ್ತರಿಸಲು ಸಮಗ್ರ ಯೋಜನಾ ವರದಿ (DPR) ತಯಾರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಶನಿವಾರ ಟೆಂಡರ್ ಕರೆದಿದೆ.

ಈಗಾಗಲೇ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಮಾದಾವರದವರೆಗೆ ಹಸಿರು ಮಾರ್ಗದ ಮೆಟ್ರೋ ಸೇವೆಯಿದೆ. ಹೊಸ ಪ್ರಸ್ತಾವಿತ 59.6 ಕಿಮೀ ಮಾರ್ಗವು ಮಾದಾವರದಿಂದ ತುಮಕೂರುವರೆಗೆ (Tumakuru) ವಿಸ್ತರಣೆಯಾಗಲಿದೆ.

ಬೊಮ್ಮಸಂದ್ರ-ಹೊಸೂರು ಮೆಟ್ರೋ ವಿಸ್ತರಣೆಯು ಆಮೆ ವೇಗದಲ್ಲಿ ಸಾಗುತ್ತಿದೆ. ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ ರಾಜ್ಯದ ಮೊದಲ ಅಂತರ-ನಗರ ಮೆಟ್ರೋ ಯೋಜನೆಯಾಗಲಿದೆ.

ಈ ಹಿಂದೆ ಮಾದಾವರ-ತುಮಕೂರು ಕಾರಿಡಾರ್‌ನ ಡಿಪಿಆರ್‌ಗಾಗಿ ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಳ್ಳಲು ಸರ್ಕಾರದ ನಿರ್ದೇಶನ ನೀಡಿತ್ತು. ಮೇ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾದ ಕಾರ್ಯಸಾಧ್ಯತಾ ಅಧ್ಯಯನವನ್ನು ಅಂತಿಮವಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿಯಲ್ಲಿ ಜಾರಿಗೊಳಿಸಲು ಅನುಮೋದಿಸಲಾಗಿದೆ.

ಈ ಯೋಜನೆಗೆ 20,649 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದೆ. ಬಿಡ್‌ದಾರರು 4.5 ಲಕ್ಷ ರೂ. ಹೆಚ್ಚು ಮುಂಗಡ ಹಣದೊಂದಿಗೆ(EMD) ನ.20ರ ಒಳಗಡೆ ಟೆಂಡರ್‌ಗೆ ಅರ್ಜಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಬಿಡ್‌ದಾರರ ಆಯ್ಕೆಯ ನಂತರ ಡಿಪಿಆರ್ ತಯಾರಿಕೆಗೆ ಕನಿಷ್ಠ 4-5 ತಿಂಗಳುಗಳು ಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ರಾಮನಗರ ಆಯ್ತು, ಈಗ ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಣಿಗಲ್ ವಿಲೀನ?

JALAHALLI METRO STATION

ತುಮಕೂರು ಕೈಗಾರಿಕಾ ಉಪನಗರವಾಗಿ ಹೊರಹೊಮ್ಮುತ್ತಿದ್ದು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಮೆಟ್ರೋ ಸೇವೆಗಳನ್ನು ವಿಸ್ತರಿಸಲು ರಾಜಕಾರಣಿಗಳಿಂದ ಮತ್ತು ಉದ್ಯಮಗಳಿಂದ ಬೇಡಿಕೆ ಬಂದಿತ್ತು. ಸಾಧ್ಯತಾ ವರದಿಯ ಪ್ರಕಾರ ಒಂದು ಗಂಟೆಗೆ ಒಂದು ದಿಕ್ಕಿನಲ್ಲಿ 15,000 ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಬಹುದು ಎಂಬ ನಿರೀಕ್ಷೆಯಲ್ಲಿ ಬಿಎಂಆರ್‌ಸಿಎಲ್‌ ಇದೆ.

ಮಾದಾವರದ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಿಂದ (BIEC) ಪ್ರಾರಂಭವಾಗುವ ಈ ಪ್ರಸ್ತಾವಿತ ಕಾರಿಡಾರ್‌ನಲ್ಲಿ 25 ಎತ್ತರದ ನಿಲ್ದಾಣಗಳು (ಎಲ್ಲವೂ ಎಲೆವೆಟೆಡ್‌ ಮಾದರಿಯ ನಿಲ್ದಾಣಗಳು) ನಿರ್ಮಾಣವಾಗಲಿದೆ. ನೆಲಮಂಗಲ, ದಾಬಸ್‌ಪೇಟೆ ಮತ್ತು ಕ್ಯಾತಸಂದ್ರದಂತಹ ಪ್ರಮುಖ ಪ್ರದೇಶಗಳ ಮೂಲಕ ಮೆಟ್ರೋ ಹಾದುಹೋಗಲಿದೆ. ಇದನ್ನೂ ಓದಿ:  ಬೆಂಗಳೂರಲ್ಲಿ ಮತ್ತೆರಡು ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಡಿಕೆಶಿ ಪ್ಲಾನ್

ತುಮಕೂರಿಗೆ ರಸ್ತೆ ಪ್ರಯಾಣವು ಪ್ರಸ್ತುತ ಮಾರ್ಗ ದಟ್ಟಣೆಯನ್ನು ಅವಲಂಬಿಸಿ ಸುಮಾರು ಎರಡು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ತುಮಕೂರಿಗೆ ರೈಲುಗಳ ಸಂಖ್ಯೆ ಹೆಚ್ಚಿದೆ ಜೊತೆಗೆ ಕಡಿಮೆ ಸಮಯವನ್ನು ತೆಗೆದುಕೊಂಡರೂ ರೈಲುಗಳ ಆವರ್ತನವು ಕಳವಳಕಾರಿಯಾಗಿಯೇ ಉಳಿದಿದೆ. ಆದರೆ ಮೆಟ್ರೋ ರೈಲುಗಳು 4-5 ನಿಮಿಷಕ್ಕೆ ಸಂಚರಿಸಲಿರುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆಯಿದೆ.

ಪ್ರಕ್ರಿಯೆ ಮುಗಿದ ನಂತರ ಬಿಡ್‌ಗಳನ್ನು ಪರಿಶೀಲಿಸಲಾಗುತ್ತದೆ. ತಾಂತ್ರಿಕ ಅರ್ಹತೆ, ಆರ್ಥಿಕ ಮಾನದಂಡಗಳು ಮತ್ತು ಇತರ ಹಲವು ವಿಷಯಗಳನ್ನು ಚರ್ಚಿಸಲಾಗುತ್ತದೆ. ಈಗ ಅಂತಿಮ ದಿನಾಂಕವನ್ನು ನಿಗದಿ ಮಾಡಲು ಸಾಧ್ಯವಿಲ್ಲ. ಈ ಎಲ್ಲಾ ಪ್ರಕ್ರಿಯೆ ಮುಕ್ತಾಯಕ್ಕೆ ಕನಿಷ್ಠ 5-6 ತಿಂಗಳು ತೆಗೆದುಕೊಳ್ಳಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್ಲೆಲ್ಲಿ ನಿಲ್ದಾಣ ಬರಲಿದೆ?
ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ವೀವರ್ ಕಾಲೋನಿ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್‌ಗೇಟ್, ಬೂದಿಹಾಳ್, ಟಿ. ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನ್‌ಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಾಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್‌ಐಟಿ (ಸಿದ್ಧಾರ್ಥ ಕಾಲೇಜು), ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್, ನಾಗಣ್ಣ ಪಾಳ್ಯ, ಶಿರಾ ಗೇಟ್‌ ಬಳಿ ಎಲಿವೇಟೆಡ್‌ ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗುವ ಸಾಧ್ಯತೆಯಿದೆ.

TAGGED:bengalurunamma metrotumakuruತುಮಕೂರುಬಿಎಂಆರ್‍ಸಿಎಲ್ಬೆಂಗಳೂರುಮೆಟ್ರೋ
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

CSK 3
Cricket

ಕೋಲ್ಕತ್ತಾಗೆ 4ನೇ ಸೋಲು- ಚೆನ್ನೈಗೆ 32 ರನ್‌ಗಳ ಸೂಪರ್‌ ಜಯ, ಮುಂಬೈ ಹಿಂದಿಕ್ಕಿದ ಕಿಂಗ್ಸ್‌

Public TV
By Public TV
5 hours ago
Rayareddy
Districts

25 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಿ: ಬಸವರಾಜ ರಾಯರೆಡ್ಡಿ

Public TV
By Public TV
5 hours ago
IPL all teams captains
Cricket

ಆಸ್ಟ್ರೇಲಿಯಾದಲ್ಲಿ ಐಪಿಎಲ್‌, ಭಾರತದಲ್ಲಿ ಬಿಗ್‌ ಬ್ಯಾಷ್‌ ಲೀಗ್‌ – ಆಡಿಲೇಡ್‌ನಲ್ಲಿ ಪಂದ್ಯ ಆಯೋಜನೆಗೆ ಭಾರೀ ಚರ್ಚೆ

Public TV
By Public TV
6 hours ago
Yogesh Gowda murder case final verdict postponed to April 15 Vinay Kulkarni
Bengaluru City

ಯೋಗೀಶ್ ಗೌಡ ಕೊಲೆ ಕೇಸ್; 10 ವರ್ಷಗಳ ಬಳಿಕ ಬುಧವಾರ ಕೋರ್ಟ್ ತೀರ್ಪು – ವಿನಯ್ ಕುಲಕರ್ಣಿಗೆ ಟೆನ್ಷನ್

Public TV
By Public TV
6 hours ago
AYODHYA
Bengaluru City

ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ರಾಜ್ಯದ 10 ಕಾಂಗ್ರೆಸ್‌ ಶಾಸಕರು

Public TV
By Public TV
7 hours ago
PM Narendra Modi Inaugurates Delhi Dehradun Expressway
Latest

ದೆಹಲಿ-ಡೆಹ್ರಾಡೂನ್‌ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ – ಸಂಚಾರ 6 ಗಂಟೆಯಿಂದ 2.5 ಗಂಟೆಗೆ ಇಳಿಕೆ

Public TV
By Public TV
7 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?