ಬೆಂಗಳೂರು: ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ನಿರ್ಮಾಣವಾಗಿರುವ ಮೆಟ್ರೋ ನೇರಳೆ ಮಾರ್ಗವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ.
Advertisement
ಮೆಟ್ರೋ ನೇರಳೆ ಮಾರ್ಗದ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರದ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ, ಸಂಸದ ತೇಜಸ್ವಿ ಸೂರ್ಯ, ಸಚಿವರಾದ ವಿ ಸೋಮಣ್ಣ, ಆರ್. ಅಶೋಕ್, ಮುನಿರತ್ನ, ಎಸ್ ಟಿ ಸೋಮಶೇಖರ್ ಗೋಪಾಲಯ್ಯ ಉಪಸ್ಥಿತರಿದ್ದರು. ಇದನ್ನೂ ಓದಿ: ಬೊಮ್ಮಾಯಿ ಮುಖ್ಯಮಂತ್ರಿ ಆದ್ಮೇಲೆ ಕೋವಿಡ್ ಕಡಿಮೆ ಆಗುತ್ತಿದೆ: ಪ್ರಭು ಚವ್ಹಾಣ್
Advertisement
Advertisement
ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಬಂದ ಮೊದಲ ಟ್ರೈನ್ ಉದ್ಘಾಟನೆ ಬಳಿಕ ಸಂಚಾರ ಆರಂಭಿಸಿತು. ಮಹಿಳಾ ಲೋಕೋಪೈಲೆಟ್ ನಿಂದ ಮೊದಲ ರೈಲಿನ ಸಂಚಾರ ಆರಂಭಗೊಂಡಿತು. ಉದ್ಘಾಟನೆ ಬಳಿಕ ನಾಯಂಡಹಳ್ಳಿ ನಿಲ್ದಾಣದಿಂದ ಕೆಂಗೇರಿವರೆಗೂ ಮೆಟ್ರೋ ಸಂಚಾರಿಸಿತು. ಮೊದಲ ಮೆಟ್ರೋದಲ್ಲಿ ಬಿಎಂಆರ್ ಸಿಎಲ್ ಸಿಬ್ಬಂದಿ ಸಂಚಾರ ಮಾಡಿದರು.
Advertisement
ರೈಲು ಸಂಚರಿಸಲು ಏಪ್ರಿಲ್ ನಿಂದ ಟ್ರಯಲ್ ರನ್ ನಡೆಸಿದ್ದ ಮೆಟ್ರೋ ನಿಗಮ ಇಂದಿನಿಂದ ಸಂಚಾರ ಆರಂಭಿಸಿದೆ. 7.5 ಕೀಮಿ ಉದ್ದದ ಮೆಟ್ರೋ ಮಾರ್ಗ ಇದಾಗಿದ್ದು, ನಾಯಂಡಹಳ್ಳಿಯಿಂದ ಕೆಂಗೇರಿ ಬಸ್ ಟರ್ಮಿನಲ್ ವರೆಗಿನ ನೇರಳೆ ಮೆಟ್ರೋ ಮಾರ್ಗ ವಿಸ್ತರಿಸಿದೆ. ಅಧಿಕೃತವಾಗಿ ಸೋಮವಾರ ಬೆಳಗ್ಗೆ 7 ಗಂಟೆಯಿಂದ ಮೆಟ್ರೋ ಹಳಿಗೆ ಬರಲಿದೆ. ಪ್ರತಿ 10 ನಿಮಿಷಕ್ಕೆ ಒಮ್ಮೆ ಮೆಟ್ರೋ ಸಂಚರಿಸಲಿದೆ. ಒಟ್ಟು 7.5 ಕೀಮಿ ದೂರದಲ್ಲಿ 6 ಸ್ಟೇಷನ್ ಇರಲಿದ್ದು, ಆಗಸ್ಟ್ 11 ಹಾಗೂ 12 ರಂದು ಸುರಕ್ಷತಾ ಪರೀಕ್ಷೆ ನಡೆಸಲಾಗಿತ್ತು. 1,560 ಕೋಟಿ ವೆಚ್ಚದಲ್ಲಿ ಮೆಟ್ರೋ ಮಾರ್ಗ ನಿರ್ಮಾಣವಾಗಿದೆ. ಇದನ್ನೂ ಓದಿ: ಮೈಸೂರು ಗ್ಯಾಂಗ್‍ರೇಪ್ – ಆರೋಪಿ ಮೇಲಿದೆ 10 ಕೇಸ್‍ಗಳು