Bengaluru CityDistrictsLatestMain Post

ಮಾಸ್ಕ್ ಹಾಕದ್ದನ್ನು ಪ್ರಶ್ನಿಸಿದ್ದಕ್ಕೆ ಮಾರ್ಷಲ್ ಮೇಲೆ ಹಲ್ಲೆ ಮಾಡಿದ ವಿದೇಶಿ ಪ್ರಜೆ

- ಮಹಿಳೆಯಿಂದಲೂ ಮಾರ್ಷಲ್ಸ್‌ಗೆ ಕ್ಲಾಸ್

ಬೆಂಗಳೂರು: ಮಾಸ್ಕ್ ಹಾಕದ್ದನ್ನು ಪ್ರಶ್ನಿಸಿದ್ದಕ್ಕೆ ಮಾರ್ಷಲ್ ಮೇಲೆ ವಿದೇಶಿ ಪ್ರಜೆಯೊಬ್ಬ ಹಲ್ಲೆ ಮಾಡಿದ ಘಟನೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಾರ್ಷಲ್ ಹಾಗೂ ವಿದೇಶಿ ವ್ಯಕ್ತಿ ನಡುವೆ ಜಟಾಪಟಿ ನಡೆದಿದೆ. ವಿದೇಶಿ ಪ್ರಜೆಯು ಮಾಸ್ಕ್ ಹಾಕಿಕೊಳ್ಳದೇ ಬರುತ್ತಿದ್ದದ್ದನ್ನು ಮಾರ್ಷಲ್ ಗಮನಿಸಿದ್ದಾರೆ. ಈ ವೇಳೆ ಅವರು ಮಾಸ್ಕ್ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಆಗ ವ್ಯಕ್ತಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಮಧ್ಯೆ ಇಬ್ಬರ ನಡುವೆ ಬಸ್ ನಿಲ್ದಾಣದ ಆವರಣದಲ್ಲೇ ತಳ್ಳಾಟ ನಡೆದಿದ್ದು, ಜಗಳ ತಾರಕ್ಕಕ್ಕೇರಿ ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಒತ್ತಾಯದಿಂದ ಯಾರಿಗೂ Corona Vaccine ನೀಡಲ್ಲ: ಕೇಂದ್ರ ಸರ್ಕಾರ

ಈ ನಡುವೆ ಮಾರ್ಷಲ್ಸ್‍ಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು ದಂಡ ವಿಧಿಸಲು ಬಂದ ಮಾರ್ಷಲ್ಸ್‍ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ತುಂಬಾ ಓವರ್ ಆಗಿ ಮಾರ್ಷಲ್ಸ್‍ಗಳು ನಡೆದುಕೊಳ್ಳುತ್ತಾರೆ. ವಿದೇಶಿ ಪ್ರಜೆಗೆ ಇವರ ಕೈಯಲ್ಲಿ ಏನು ಮಾಡುವುದಕ್ಕೆ ಆಗಿಲ್ಲ. ಈಗ ನಮ್ಮನ್ನ ಕೇಳುವುದಕ್ಕೆ ಬರುತ್ತೀರಾ ಎಂದು ಅವಾಜ್ ಹಾಕಿದ್ದಾರೆ.

ಬಸ್ ನಿಲ್ದಾಣದಲ್ಲಿದ್ದ ಮಹಿಳೆಯೊಬ್ಬಳು ಸಹ ಮಾರ್ಷಲ್ಸ್‌ಗಳಿಗೆ ತರಾಟೆಗೆ ತೆಗೆದುಕೊಂಡಿದ್ದು ಅವನು ಹೊರದೇಶದವನಾಗಿದ್ದು, ಹೊಡೆದಿದ್ದಕ್ಕೆ ಬಿಟ್ಟರು. ಅವನಿಗೊಂದು ನ್ಯಾಯ ನಮ್ಮಗೊಂದು ನ್ಯಾಯನಾ ನಾವು ಇಲ್ಲೇ ಹುಟ್ಟಿರುವವರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಾಕ್ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ: ಇಮ್ರಾನ್ ಖಾನ್

Leave a Reply

Your email address will not be published.

Back to top button