ಬೆಂಗಳೂರು: ಪೋಷಕರೇ ನಿಮ್ಮ ಮಕ್ಕಳು ಪದೇ ಪದೇ ಮೆಡಿಕಲ್ ಶಾಪ್‍ಗೆ ಹೋಗುತ್ತಿದ್ದರೆ ಎಚ್ಚರ ವಹಿಸಿ. ಯಾಕೆಂದರೆ ಬೆಂಗಳೂರಿನ ಕೆಲ ಮೆಡಿಕಲ್ ಶಾಪ್ ಈಗ ಮಾದಕ ಲೋಕದ ತೆಕ್ಕೆಗೆ ಯುವಪಡೆಯನ್ನು ಬೀಳಿಸಿಕೊಳ್ಳುತ್ತಿದೆ. ಡ್ರಗ್ಸ್ ಲೋಕದ ಅಸಲಿ ಕಥೆ ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಹೌದು. ರಾಜ್ಯ ರಾಜಧಾನಿಯಲ್ಲಿ ಡ್ರಗ್ಸ್ ಮಾಫಿಯಾ ಘರ್ಜಿಸುತ್ತಿದೆ. ಈ ಡ್ರಗ್ಸ್ ಗಾಗಿ ಯುವಕರ ಟೀಮ್ ಸದ್ದಿಲ್ಲದೆ ಮೆಡಿಕಲ್‍ನತ್ತ ಶಿಫ್ಟ್ ಆಗುತ್ತಿದೆ. ಯುವಪಡೆ ಆಲ್ಕೋಹಾಲ್ ಅಂಶವಿರುವ, ಅದೇ ಸಿರಪ್‍ಗಳಿಗೆ ಮಾತ್ರೆ ಬೆರೆಸಿ ಇನ್ನಷ್ಟೂ ಕಿಕ್ ಏರಿಸುವ ಚಟವನ್ನು ಅಂಟಿಸಿಕೊಂಡಿದ್ದಾರೆ.
Advertisement
Advertisement
ಹಣ ಕೊಟ್ಟರೆ ಜೀವಕ್ಕೆ ಮಾರಕವಾಗುವ ಸಿರಪ್ ಬಾಟಲ್‍ಗಳನ್ನ ಮೆಡಿಕಲ್ ಸ್ಟೋರ್ ಗಳಲ್ಲಿ ಕೊಡುತ್ತಾರೆ. ಕೊರೆಕ್ಸ್, ಕೊಡೆನ್ ಪಾಸ್ಫೆಟ್ ಟಾಸೆಕ್ಸ್, ಸೇರಿದಂತೆ ಹಲವು ಸಿರಪ್ ಬಾಟಲ್‍ಗಳನ್ನ ವೈದ್ಯರು ನೀಡುವ ಚೀಟಿ ಇಲ್ಲದಿದ್ದರೂ ಕೊಡುತ್ತಾರೆ. ಮುಖ್ಯವಾಗಿ ಈ ಸಿರಪ್ ಜೊತೆಗೆ ಟ್ರಾಮಡಲ್ ಪೇನ್ ಕಿಲ್ಲರ್ ತಗೊಂಡು, ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ. ಆ ಬಳಿಕ ಮತ್ತಿನಲ್ಲಿ ತೇಲಾಡುತ್ತಾ ಪರ ಲೋಕಕ್ಕೆ ಹೋಗಿ ಬಂದಂತಹ ಅನುಭವವನ್ನ ಮದ್ಯವ್ಯಸನಿಗಳು ಅನುಭವಿಸುತ್ತಾರೆ.
Advertisement
ವೈದ್ಯರು ನೀಡಿದ ಚೀಟಿ ಇದ್ದರೆ ಮಾತ್ರ ಈ ಸಿರಪ್‍ಗಳನ್ನ ಕೊಡಬೇಕು ಎಂಬುದು ಮೆಡಿಕಲ್ ರೂಲ್ಸ್ ಇದೆ. ಆದರೆ ಇದ್ಯಾವುದನ್ನ ಮೆಡಿಕಲ್ ಸ್ಟೋರ್ ಮಾಲೀಕರು ಪಾಲಿಸುತ್ತಿಲ್ಲ. ಪ್ರಿಸ್ಕಿಪ್ಶನ್ ಇಲ್ಲದೇ ಸಿರಪ್ ಬಾಟಲಿಗಳನ್ನ ಹೇಗೆ ಕೊಡ್ತಾರೆ ಅನ್ನೋದನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಭೇದಿಸಿದೆ.
Advertisement
ಪ್ರತಿನಿಧಿ: ಸಾರ್ ಕೊರೆಕ್ಸ್ ಸಿರಪ್ ಸಿಗುತ್ತಾ..? ಇನ್ನೊಂದು ಬರ್ತಿತ್ತಲ್ಲಾ ಇದೇನು..?
ಮೆಡಿಕಲ್ ಸ್ಟೋರ್ ಸಿಬ್ಬಂದಿ: ಇದೇ ಬರೋದು
ಪ್ರತಿನಿಧಿ: ಇನ್ನೊಂದು ಫಾಸ್ಟೆಟ್ ಟಾಸೆಕ್ಸ್ ಸಿಗುತ್ತಾ?
ಸಿಬ್ಬಂದಿ: ಸಿರಪ್ಪಾ..?
ಪ್ರತಿನಿಧಿ: ಹುಮ್..
ಸಿಬ್ಬಂದಿ: ಈಗ ಬರ್ತಿಲ್ಲ.. ಎಲ್ಲೊದ್ರು ಇದೇ ಸಿಗೋದು ನಿಮಗೆ
ಪ್ರತಿನಿಧಿ: ಟಾಸೆಕ್ಸ್ ತೊಗೊಂಡು ಹೋಗಿದ್ದೆ ಲಾಸ್ಟ್ ಟೈಮ್
ಸಿಬ್ಬಂದಿ: ಸ್ಟಾಪ್ ಮಾಡಿಬಿಟ್ರು ಇವಾಗ
ಪ್ರತಿನಿಧಿ: ಎಲ್ಲೂ ಸಿಗಲ್ವಾ ಅಥವಾ ಸ್ಟಾಕ್ ಇಲ್ವಾ..?
ಸಿಬ್ಬಂದಿ: ಸ್ಟಾಕ್ ಎಲ್ಲೂ ಸಿಗಲ್ಲ. ಬ್ಯಾನ್ ಮಾಡಿದ್ದಾರೆ.. ತಗೊಳ್ಳಿ ಇದು ಚೆನ್ನಾಗಿದೆ
ಪ್ರತಿನಿಧಿ: ಚೆನ್ನಾಗಿದೆಯಾ ಸಾರ್..? ಬಿಲ್ ಕೊಡ್ತಿರಾ ಸಾರ್?
ಸಿಬ್ಬಂದಿ: ಪ್ರಿಸ್ಕಿಪ್ಶನ್ ಇದೆಯಾ ?
ಪ್ರತಿನಿಧಿ: ಇಲ್ಲ..
ಸಿಬ್ಬಂದಿ: ಪ್ರಿಸ್ಕಿಪ್ಶನ್ ಬೇಕು
ಪ್ರತಿನಿಧಿ: ಹೌದಾ.. ಪ್ರಿಸ್ಕಿಪ್ಶನ್ ಇದ್ರೆ ಬಿಲ್.. ಇಲ್ಲಾಂದ್ರೆ ಇಲ್ವಾ..?
ಸಿಬ್ಬಂದಿ: ಹೌದು.. ಸಾರ್ ಯಾಕಂದ್ರೆ ಪ್ರಾಬ್ಲಂ, ಡಾಕ್ಟರ್ ನೇಮ್
ಹೀಗೆ ಡಾಕ್ಟರ್ ಪ್ರಿಸ್ಕಿಪ್ಶನ್ ಇಲ್ಲದ್ದಿದ್ದರೂ ಸಿರಪ್ ಬಾಟಲನ್ನ ಕೊಡುತ್ತಾರೆ. ಮೆಡಿಕಲ್ ಸ್ಟೋರ್ ಮಾಲೀಕರಿಗೂ ಭಯ, ಆತಂಕವಿದೆ. ಆದರೂ ಹಣಕ್ಕಾಗಿ ಅಡ್ಡದಾರಿ ಹಿಡಿದಿದ್ದಾರೆ. ಪಬ್ಲಿಕ್ ಟಿವಿ ತಂಡ ಮತ್ತೊಂದು ಮೆಡಿಕಲ್ ಅವರನ್ನು ವಿಚಾರಿಸಿತು. ಆದ್ರೆ ಅಲ್ಲಿ ಮಾದಕ ದ್ರವ್ಯ ಮುಗಿದಿತ್ತು. ಹೀಗಾಗಿ ನಮ್ಮ ಬೇಟೆಯಿಂದ ಜಸ್ಟ್ ಬಚಾವ್ ಆಗಿದ್ದಾರೆ.
ಪ್ರತಿನಿಧಿ: ನಿಮ್ದು ನಂಬರ್ ಇದೆ. ಕಾಲ್ ಮಾಡ್ತೀನಿ. ಅಡ್ಜಸ್ಟ್ ಮಾಡೋಕೆ ಆಗುತ್ತಾ?
ಸಿಬ್ಬಂದಿ: ಆಗಲ್ಲ ಅಣ್ಣ.. ಇದ್ರೆ ನಾವು ಕೊಟ್ಟು ಬಿಡ್ತೀವಿ. ನಿಮ್ದು ಕಷ್ಟ ಗೊತ್ತಾಗುತ್ತೆ ನಮಗೆ… ಸ್ಟಾಕ್ ಇಲ್ಲ ಏನು ಮಾಡೋದು ಹೇಳಿ?
ಪ್ರತಿನಿಧಿ: ಆಪ್ಶನ್ ಏನು ಸಾರ್..?
ಸಿಬ್ಬಂದಿ: ಪ್ರೈವೇಟ್‍ನಲ್ಲಿ ಕೇಳಿ. ರಿಕ್ವೆಸ್ಟ್ ಮಾಡಿ. ಇಲ್ಲಿ ಮಾಡಿದ್ರಲ್ಲ ಅಷ್ಟು ಮಾಡಿ. ಕಾಸು ಹೆಚ್ಚಿಗೆ ಕೊಡಿ.
ಪ್ರತಿನಿಧಿ: ಮೂರ್ನಾಲ್ಕು ಕಡೆ ಕೇಳಿದ್ವಿ..
ಹೀಗೆ ಕದ್ದುಮುಚ್ಚಿ ವ್ಯವಹಾರ ನಡೆಯುತ್ತಿದೆ. ಮುಖ್ಯವಾಗಿ ಈ ಸಿರಪನ್ನು ಕೆಮ್ಮು, ಕಫ ಕಡಿಮೆ ಮಾಡೋದಕ್ಕೆ ಬಳಸುತ್ತಾರೆ. ಆದರೆ ಇದರಲ್ಲಿ ಆಲ್ಕೋಹಾಲ್ ಕಂಟೆಂಟ್ ಜಾಸ್ತಿ ಇರುವುದರಿಂದ ಹಾಗೂ ಆರೋಗ್ಯಕ್ಕೆ ಮಾರಕವಾಗಿರುವುದರಿಂದ ಹೆಚ್ಚಾಗಿ ಬಳಸೋದಿಲ್ಲ. ಒಂದೊಮ್ಮೆ ತುಂಬಾ ಅಗತ್ಯವೆನಿಸಿದ್ರೆ ವೈದ್ಯರ ಪ್ರಿಸ್ಕಿಪ್ಶನ್ ಬೇಕೇ ಬೇಕು.
ಒಟ್ಟಿನಲ್ಲಿ ನಮ್ಮ ಯುವ ಜನತೆ ಅಡ್ಡದಾರಿ ಹಿಡಿದು ತಮ್ಮ ಅಮೂಲ್ಯವಾದ ಬದುಕನ್ನ ಮತ್ತಲ್ಲೇ ಅಂತ್ಯ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದೆಯಾದರೂ ಸಂಬಂಧಪಟ್ಟಂತಹ ಅಧಿಕಾರಿಗಳು ಈ ಜಾಲಕ್ಕೆ ಬ್ರೇಕ್ ಹಾಕೋ ಅನಿವಾರ್ಯತೆ ಇದೆ.
ಅಡ್ಡ ಪರಿಣಾಮಗಳೇನು..?
– ಊಟ ತಿಂಡಿ ಸೇರೋದಿಲ್ಲ, ದೈನಂದಿನ ಕೆಲಸ ಮಾಡಲಾಗಲ್ಲ
– ನರದೌರ್ಬಲ್ಯ
– ಮಾನಸಿಕ ಸ್ಥಿಮಿತತೆ ಕಳೆದುಹೋಗುವ ಸಾಧ್ಯತೆ
– ಲಿವರ್, ಕಿಡ್ನಿಗೆ ಡ್ಯಾಮೇಜ್
– ರೋಗ ನಿರೋಧಕ ಶಕ್ತಿ ನಿಧಾನವಾಗಿ ಕುಂದುತ್ತದೆ