ಬೆಂಗಳೂರು: ರಾಜ್ಯದಲ್ಲಿ ಚುನಾವಣೆಯ ರಂಗು ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಕಡೆ ಚುನಾವಣಾ ಆಯೋಗ ಶೇ.100 ರಷ್ಟು ಮತದಾನಕ್ಕೆ ನಾನಾ ರೀತಿಯ ಕಸರತ್ತು ಮಾಡುತ್ತಿದೆ. ಆದ್ರೆ ಮೆಡಿಕಲ್ ಶಾಪ್ ಮಾಲೀಕರೊಬ್ಬರು ಮತದಾನ ಹೆಚ್ಚಿಸಲು ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಬಳಿಯ ಮೆಡಿಕಲ್ ಶಾಪ್ ಮಾಲೀಕ ಪ್ರಸಾದ್ ಮತದಾನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 15 ವರ್ಷಗಳಿಂದ ಮೆಡಿಕಲ್ ಶಾಪ್ ನಡೆಸುತ್ತಿರುವ ಪ್ರಸಾದ್ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಡಿಸ್ಕೌಂಟ್‍ನಲ್ಲಿ ಔಷಧಿ ನೀಡಲು ಹೊಸ ಐಡಿಯಾವನ್ನ ಮಾಡಿದ್ದಾರೆ. ರಾಜ್ಯ ಚುನಾವಣಾ ಅಧಿಕಾರಿಗಳು ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ, ಮತದಾನ ಮಾಡಿದವರಿಗೆ ಕೆಲ ಮಾಲ್‍ಗಳ ಜೊತೆ ಮಾತಾಡಿ ಶೇ.10 ಡಿಸ್ಕೌಂಟ್ ಕೊಡಿಸ್ತೀವಿ ಅಂತ ಹೇಳಿದ್ರು. ಈ ಸುದ್ದಿಯನ್ನು ಪೇಪರ್‍ನಲ್ಲಿ ಓದಿದ ಪ್ರಸಾದ್ ಕೂಡಲೇ ಮತದಾನ ಮಾಡಿ ಬರುವ ಪ್ರತಿ ಗ್ರಾಹಕರಿಗೆ ಶೇ.10 ಡಿಸ್ಕೌಂಟ್ ಘೋಷಣೆ ಮಾಡಿದ್ದಾರೆ.
Advertisement
Advertisement
ಕೇವಲ ಡಿಸ್ಕೌಂಟ್ ಘೋಷಣೆ ಮಾಡಿ ಸುಮ್ಮನೆ ಆಗದ ಪ್ರಸಾದ್ ತಮ್ಮ ಮೆಡಿಕಲ್ ಶಾಪ್‍ಗೆ ಬರುವ ಪ್ರತಿ ಗ್ರಾಹಕರಿಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ನೀವು ಯಾರಿಗಾದ್ರು ಮತದಾನ ಮಾಡಿ. ಆದ್ರೆ ಕಡ್ಡಾಯವಾಗಿ ಮತದಾನ ಮಾಡಿ. ಅಷ್ಟೇ ಅಲ್ಲದೆ ಮತದಾನ ಮಾಡಿದ್ರೆ ಮುಂದಿನ 5 ವರ್ಷಗಳವರೆಗೆ ನಮ್ಮ ಶಾಪ್ ನಲ್ಲಿ ಶೇ.10 ಡಿಸ್ಕೌಂಟ್ ನೀಡ್ತೀನಿ ಅಂತ ತಮ್ಮ ಮೆಡಿಕಲ್ ಶಾಪ್‍ಗೆ ಬರುವ ಪ್ರತಿ ಗ್ರಾಹಕರಿಗೂ ಹೊಸ ಆಫರ್ ನೀಡುತ್ತಿದ್ದಾರೆ.
Advertisement
ಒಟ್ಟಿನಲ್ಲಿ ಮತದಾನ ಮಾಡೋದಕ್ಕೆ ಹಿಂಜರಿಯುತ್ತಿರೋ ಇಂದಿನ ಜನರ ಮಧ್ಯೆ ಮತದಾನಕ್ಕಾಗಿ 10 ಪರ್ಸೆಂಟ್ ಡಿಸ್ಕೌಂಟ್ ನೀಡುತ್ತಿರುವ ಪ್ರಸಾದ್ ಉಳಿದವರಿಗೆ ಮಾದರಿಯಾಗಿದ್ದಾರೆ.
Advertisement