ಬೆಂಗಳೂರು: ಕ್ಯಾನ್ಸರ್ ಕಾಯಿಲೆ ನಿಯಂತ್ರಣಕ್ಕಾಗಿ ಬೆಂಗಳೂರು ಮೂಲದ ವಿಜ್ಞಾನಿಯೊಬ್ಬರು ಸಾಧನವೊಂದನ್ನು ಕಂಡುಹಿಡಿದಿದ್ದು, ಅಮೆರಿಕದ ಫುಡ್ ಆ್ಯಂಡ್ ಡ್ರಗ್ಸ್ ಎಡ್ಮಿನಿಷ್ಟ್ರೇಶನ್(ಎಫ್‍ಡಿಎ) ಈ ಸಾಧನಕ್ಕೆ ಅನುಮೋದಿಸಿದೆ.
ಈ ವಿಶೇಷ ಕ್ಯಾನ್ಸರ್ ನಿಯಂತ್ರಣ ಸಾಧನಕ್ಕೆ ‘ಸೈಟೊಟ್ರಾನ್’ ಎಂದು ಹೆಸರಿಡಲಾಗಿದೆ. ಆರ್ಗನೈಸೇಶನ್ ಡಿ ಸ್ಕಲೀನ್ ಸಂಶೋಧನ ಕೇಂದ್ರದಲ್ಲಿ ಈ ಸೈಟೊಟ್ರಾನ್ ಕಾನ್ಸರ್ ನಿಯಂತ್ರಣ ಸಾಧನವನ್ನು ಅಲ್ಲಿನ ಅಧ್ಯಕ್ಷ ರಾಜಾ ವಿಜಯ್ ಕುಮಾರ್ ಕಂಡುಹಿಡಿದಿದ್ದಾರೆ. ಈ ಸಾಧನವು ದೇಹದಲ್ಲಿ ಕ್ಯಾನ್ಸರ್ ಕೋಶಗಳು ಹರಡದಂತೆ ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ಕ್ಯಾನ್ಸರ್ ಪ್ರೋಟಿನ್‍ಗಳನ್ನು ನಿಯಂತ್ರಿಸಿ ಅದನ್ನು ಕೊಬ್ಬಿನ ಜೀವಕೋಶಗಳನ್ನಾಗಿ ಬದಲಾಯಿಸುತ್ತದೆ. ಮುಂದಿನ ವರ್ಷದ ಜನವರಿಯಲ್ಲಿ ಬಹುಶಃ ಈ ಸೈಟೊಟ್ರಾನ್ ಸಾಧನ ಭಾರತದ ಆಸ್ಪತ್ರೆಗಳಲ್ಲಿ ಕಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತದೆ ಎಂದು ಡಾ. ಕುಮಾರ್ ತಿಳಿಸಿದ್ದಾರೆ.
Advertisement
Advertisement
ಮ್ಯಾಗ್ನೆಟಿಕ್ ರೆಸೋನೆನ್ಸ್ ಬಳಸುವ ಮೂಲಕ ಈ ಸಾಧನವನ್ನು ತಯಾರಿಸಲಾಗಿದೆ. ಪ್ರೋಟೀನ್-ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗೆ ಈ ಸಾಧನವು ಸಹಾಯಕಾರಿ. ಯಾವುದೇ ಕೋಶವಾಗಲಿ ನಮ್ಮ ದೇಹದಲ್ಲಿ ಕೇವಲ 50 ಬಾರಿ ಮಾತ್ರವೇ ಕೆಲಸ ಮಾಡುತ್ತದೆ. ಆದರೆ ಕಾನ್ಸರ್ ಕಾರಕ ಕೋಶಗಳು ಮಾತ್ರ ದೇಹದಲ್ಲಿ ಹರಡುತ್ತಾ ಹೋಗುತ್ತದೆ. ಹೀಗಾಗಿ ಸೈಟೊಟ್ರಾನ್ ಸಾಧನವು ಕ್ಯಾನ್ಸರ್ ಕೋಶಗಳನ್ನು ತಡೆದು, ಅದು ಹರಡದಂತೆ ಕೆಲಸ ಮಾಡುತ್ತದೆ. ಜೊತೆಗೆ ಆರೋಗ್ಯಕರ ಕೋಶಗಳು ಐವತ್ತಕ್ಕಿಂತಲೂ ಹೆಚ್ಚಿನ ಬಾರಿ ಕೆಲಸ ಮಾಡುವಂತೆ ಸಹಕರಿಸುತ್ತದೆ.
Advertisement
Advertisement
ಈ ಸಾಧನವನ್ನು ಕಂಡುಹಿಡಿಯಲು ಸುಮಾರು 30 ವರ್ಷಗಳು ತಗುಲಿದೆ. ಇದು ನೋಡಲು ಎಂಆರ್‍ಐ ಸ್ಕಾನಿಂಗ್ ಯಂತ್ರದ ರೀತಿ ಕಾಣುತ್ತದೆ. ರೋಟೆಶನಲ್ ಕ್ಕ್ವಾಂಟಮ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಎಂಬುದಾಗಿ ಈ ತಂತ್ರಜ್ಞಾನವನ್ನು ಕರೆಯಲಾಗುತ್ತದೆ.
28 ದಿನಗಳ ಕಾಲ ನಿರಂತರವಾಗಿ ಸೈಟೊಟ್ರಾನ್ ಸಾಧನದಿಂದ ಚಿಕಿತ್ಸೆ ತೆಗೆದುಕೊಂಡರೆ ಸಾಲಿಂಡ್ ಟ್ಯುಮರ್ ಗಳು ಕೋಶಗಳು ಹರಡುವುದು ನಿಲ್ಲುತ್ತದೆ. ಉದಾಹರಣೆಗೆ ಲಿವರ್ ಕ್ಯಾನ್ಸರ್, ಮೋದೋಜ್ಜೀರಕ ಗ್ರಂಥಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಗಳನ್ನು ಇದರಿಂದ ನಿಯಂತ್ರಿಸಬಹುದು. ಆದರೆ ರಕ್ತದ ಕ್ಯಾನ್ಸರ್ ರೀತಿ ಸಾಲಿಡ್ ಟ್ಯುಮರ್ ಗಳಲ್ಲದ ಕ್ಯಾನ್ಸರ್ ನನ್ನು ಈ ಸಾಧನದಿಂದ ನಿಯಂತ್ರಿಸಲು ಆಗುವುದಿಲ್ಲ. ಇದುವರೆಗೂ ಈ ಸಾಧನದಿಂದ ಯಾವುದೇ ಅಡ್ಡಪರಿಣಾಮ ಪತ್ತೆಯಾಗಿಲ್ಲ. ಚಿಕಿತ್ಸೆ ವೇಳೆ ಇದರಿಂದ ರೋಗಿಗಳಿಗೆ ತೊಂದರೆ ಆಗುವುದಿಲ್ಲ ಎಂದು ಡಾ. ಕುಮಾರ್ ವಿವರಿಸಿದ್ದಾರೆ.
ಯುರೋಪ್, ಮೆಕ್ಸಿಕೊ, ಅಮೆರಿಕ, ಮಲೇಷ್ಯಾ ಮತ್ತು ಗಲ್ಫ್‌ನಂತಹ ಕೆಲವು ದೇಶಗಳಲ್ಲಿ ನಿಯಂತ್ರಣ ಅಧಿಕಾರಿಗಳು ಇದರ ಬಳಕೆಯನ್ನು ತೆರವುಗೊಳಿಸಿದ್ದಾರೆ. ಭಾರತದಲ್ಲಿ ಈಗ ಇದನ್ನು ಬಳಕೆಗೆ ತರಲಾಗುತ್ತಿದೆ. ಈ ತಂತ್ರಜ್ಞಾನವನ್ನು ಬಳಸಲು ಬಯಸುವ ಆಸ್ಪತ್ರೆಗಳೊಂದಿಗೆ ಸಂಸ್ಥೆ ಮಾತುಕತೆ ನಡೆಸುತ್ತಿದೆ.
ಇದು ಬಳಕೆಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಆಗಿದೆ ಎಂದು ಯುಎಸ್ ಎಫಡಿಎ ಹೇಳಿದೆ. ಹೀಗಾಗಿ ಮುಂದಿನ ಜನವರಿ ವೇಳೆಗೆ ಈ ಸಾಧನವು ಆಸ್ಪತ್ರೆಯಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.