ಬೆಂಗಳೂರು: ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಪ್ರಕರಣ ಹಳ್ಳ ಹಿಡಿಯುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ತನಿಖೆಗಿಳಿದ ಪೊಲೀಸರಿಗೆ ಯುಬಿ ಸಿಟಿಯ ಸೆಕ್ಯೂರಿಟಿ ಗಾರ್ಡ್‍ಗಳು ತಲೆನೋವಾಗಿ ಪರಿಣಮಿಸಿದ್ದಾರೆ.
ಹೌದು. ನಟಿ ಶ್ರುತಿ ಹರಿಹರನ್ ಅವರು ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸರು, ಮೊದಲಿಗೆ ನಟ ಅರ್ಜುನ್ ಸರ್ಜಾ, ವಿಸ್ಮಯ ಚಿತ್ರದ ನಿರ್ದೇಶಕ, ನಿರ್ಮಾಪಕ ಸೇರಿದಂತೆ ಸಾಕಷ್ಟು ಜನರನ್ನು ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಹೇಳಿಕೆಗಳನ್ನು ಪಡೆದುಕೊಂಡಿದ್ದರು.
Advertisement
Advertisement
ವಿಸ್ಮಯ ಚಿತ್ರ ಚಿತ್ರೀಕರಣದ ವೇಳೆ ನಂಗೆ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ರು. ಯುಬಿ ಸಿಟಿಯಲ್ಲಿ ರೂಮ್ ನಲ್ಲಿ ಒಬ್ಬನೇ ಇದೇನಿ, ಬಾ ಸ್ವಲ್ಪ ಹೊತ್ತು ಕಾಲ ಕಳೆಯೋಣ ಅಂತಾ ನನ್ನನ್ನು ಕರೆದ್ರು ಎಂದು ನಟಿ ಶ್ರುತಿ ಹರಿಹರನ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆ ವೇಳೆ ಯುಬಿ ಸಿಟಿಯಲ್ಲಿ ಕೆಲಸ ಮಾಡ್ತಿದ್ದ ಸೆಕ್ಯೂರಿಟಿ ಗಾರ್ಡ್ ಗಳನ್ನು ವಿಚಾರಣೆ ನಡೆಸೋಕೆ ಹೋದ ಪೊಲೀಸರಿಗೆ ಶಾಕ್ ಆಗಿದೆ. ಯಾಕಂದ್ರೆ ಆ ಘಟನೆ ನಡೆದ ನಂತ್ರ ಹತ್ತಾರು ಸೆಕ್ಯೂರಿಟಿ ಗಾರ್ಡ್‍ಗಳು ಕೆಲಸಬಿಟ್ಟಿರೋದಲ್ಲದೇ, ಸೆಕ್ಯೂರಿಟಿ ಏಜೆನ್ಸಿಯನ್ನೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಅಲ್ಲಿದ್ದ ಕೆಲ ಸಿಬ್ಬಂದಿ ಕೂಡ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಬಾಯಿ ಬಿಡ್ತಿಲ್ಲ.
Advertisement
Advertisement
ಈ ಎಲ್ಲಾ ಘಟನೆಗಳಿಂದ ಬೇಸತ್ತ ಕಬ್ಬನ್ ಪಾರ್ಕ್ ಪೊಲೀಸರು, ಸೂಕ್ತ ಸಾಕ್ಷಿಗಳ ಕೊರತೆಯ ನಡುವೆಯೇ ಚಾರ್ಜ್ ಶೀಟ್ ಸಲ್ಲಿಸೋಕೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಮೇಲಿನ ಕೆಲ ಅಂಶಗಳನ್ನು ನೋಡ್ತಿದ್ರೆ, ಪ್ರಕರಣ ಹಳ್ಳ ಹಿಡಿಯೋದು ಗ್ಯಾರಂಟಿ ಎಂದು ಮೂಲಗಳು ತಿಳಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv