ಬೆಂಗಳೂರು: ಕಂತು ಕಟ್ಟಿ ಕಟ್ಟಿ ಸಾಕಾಗಿ ಗ್ರಾಹಕರು ಬಜಾಜ್ ಫೈನಾನ್ಸ್ ಕಚೇರಿಯನ್ನು ಧ್ವಂಸಗೊಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಎಂ.ಸಿ.ಮೋದಿ ಆಸ್ಪತ್ರೆ ರಸ್ತೆಯಲ್ಲಿರುವ ಬಜಾಜ್ ಫೈನಾನ್ಸ್ ಕಚೇರಿಗೆ ಇಂದು ಅನೇಕ ಗ್ರಾಹಕರು ಮುತ್ತಿಗೆ ಹಾಕಿದರು. ಅಷ್ಟೇ ಅಲ್ಲದೆ ಬಜಾಜ್ ಫೈನಾನ್ಸ್ ಸಿಬ್ಬಂದಿ ಜೊತೆಗೆ ವಾಗ್ವಾದಕ್ಕೆ ಇಳಿದು ಕಚೇರಿಯ ಕಿಟಕಿ, ಗ್ಲಾಸ್‍ಗಳನ್ನ ಒಡೆದು ಆಕ್ರೋಶ ಹೊರ ಹಾಕಿದರು.
Advertisement
Advertisement
ಬಡ್ಡಿ ಹಾಗೂ ಅಸಲು ಹಣವನ್ನು ಪಾವತಿಸುವುದು ಸ್ವಲ್ಪ ತಡವಾದ್ರೂ ಬಡ್ಡಿ ಮೇಲೆ ಬಡ್ಡಿ ಹಾಕುತ್ತಾರೆ. ನಮಗೆ ಹೇಳುವುದು ಒಂದು ಫೈನಾನ್ಸ್ ನವರು ಕಟ್ಟಿಸಿಕೊಳ್ಳುವ ಹಣವೇ ಒಂದು. ಹಣದ ಅವಶ್ಯಕತೆ ಇದೆ ಅಂತ ಸಣ್ಣ ಅಕ್ಷರಗಳಲ್ಲಿ ಬರೆದಿರುವ ಟಮ್ರ್ಸ್ ಅಂಡ್ ಕಂಡೀಷನ್‍ಗೆ ಒಪ್ಪಿ ಸಹಿ ಮಾಡುತ್ತೇವೆ. ಹೀಗಾಗಿ ಬಡ್ಡಿಗೆ ಬಡ್ಡಿ ಹಾಕಿದರೂ ಕಟ್ಟಲೇ ಬೇಕು ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದರು.
Advertisement
ಗ್ರಾಹಕರ ಆಕ್ರೋಶಕ್ಕೆ ಬಜಾಜ್ ಫೈನಾನ್ಸ್ ಕಚೇರಿಯ ಕ್ಯಾಶ್ ಕೌಂಟರ್ ಮುಂಭಾಗ ಗಾಜು ಜಖಂಗೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ.