ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು (Bengaluru Temperature) ಇತಿಹಾಸದಲ್ಲೇ ದಾಖಲೆಯ ತಾಪಮಾನ ದಾಖಲಾಗಿದೆ. ಭಾನುವಾರ 38.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಇದು ಬೆಂಗಳೂರಿನ ಇದುವರೆಗಿನ ಗರಿಷ್ಠ ತಾಪಮಾನವಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಬೆಂಗಳೂರಿನಲ್ಲಿ 37.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇದನ್ನೂ ಓದಿ: SC-ST ಸಮುದಾಯಗಳಿಗೆ ಸೇರಬೇಕಿದ್ದ 11,000 ಕೋಟಿ ಹಣವನ್ನ ಕಾಂಗ್ರೆಸ್ ನುಂಗಿ ನೀರು ಕುಡಿದಿದೆ: ಮೋದಿ ಕೆಂಡ
ದಾಖಲೆಗಳ ಪ್ರಕಾರ 1996ರ ಮಾರ್ಚ್ 27ರಂದು ಅತ್ಯಧಿಕ 37.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಅದೇ ರೀತಿ 2017 ರಲ್ಲಿ 37.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ನಂತರ ದಾಖಲಾದ ಗರಿಷ್ಠ ತಾಪಮಾನ ಇದಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂಗಾರು ಕೊರತೆ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಬೇಸಿಗೆಯ ಬಿಸಿಲ ಝಳ ಜನರನ್ನು ಹೈರಾಣಾಗಿಸಿತ್ತು. ನಂತರ ಒಂದೊಂದು ಜಿಲ್ಲೆಗಳೂ ದಾಖಲೆಯ ಪ್ರಮಾಣದ ತಾಪಮಾನವನ್ನು ದಾಖಲಿಸುತ್ತ ಬಂದಿವೆ. ಈಗ ಬೇಸಿಗೆ ಬೇಗೆ ಮತ್ತಷ್ಟು ಕಾಡುತ್ತಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠ 7ನೇ ಆವೃತ್ತಿಗೆ ಅದ್ದೂರಿ ತೆರೆ
ಇತ್ತ ಬರ ಪರಿಸ್ಥಿತಿ ಕೂಡ ಜನರ ನಿದ್ದೆಗೆಡಿಸಿದೆ. ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹಲವೆಡೆ ಮಳೆಯಾಗಿ ಜನ ಕೊಂಚ ನಿಟ್ಟುಸಿರು ಬಿಡುವಂತಾಗಿತ್ತು. ಈಗ ಮತ್ತೆ ಬಿಸಿಲ ತಾಪಮಾನ ಹೆಚ್ಚಾಗಿದೆ.