ಬೆಂಗಳೂರು: ಕೊರೊನಾ ಭೀತಿಯಿಂದ ಎಲ್ಲರೂ ಮಾಸ್ಕ್ ಧರಿಸಿ ಓಡಾಡುವಂತೆ ಸರ್ಕಾರಗಳು ಮನವಿ ಮಾಡಿಕೊಳ್ಳುತ್ತಿವೆ. ಈಗ ಬಂಕ್‍ಗಳಿಗೆ ಬರುವ ವ್ಯಕ್ತಿಗಳು ಮಾಸ್ಕ್ ಧರಸದಿದ್ದರೆ ಪೆಟ್ರೋಲ್ ನೀಡುವುದಿಲ್ಲ ಎಂದು ಬಂಕ್‍ಗಳೇ ಬೋರ್ಡ್ ಹಾಕಿಕೊಂಡಿವೆ.
ಇಂದು ಬೆಳಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ ಅವರು, ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸಿದ್ದರು. ಇದರ ಜೊತೆಗೆ ಏಪ್ರಿಲ್ 20ರವರೆಗೆ ಡಬಲ್ ಲಾಕ್‍ಡೌನ್ ಇರಲಿದ್ದು, ಕಠಿಣ ರೀತಿಯಲ್ಲಿ ಕಾನೂನನ್ನು ಜಾರಿ ಮಡಲಾಗುವುದು ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಮೋದಿ ಅವರ ಮಾತಿನಂತೆ ಮಾಸ್ಕ್ ಹಾಕದೇ ಇರುವ ವಾಹನ ಸವಾರರಿಗೆ ಪೆಟ್ರೋಲ್ ಹಾಕುವುದಿಲ್ಲ ಎಂದು ಬಂಕ್ ಮಾಲೀಕರು ಹೇಳಿದ್ದಾರೆ.
Advertisement
Advertisement
ಈ ವಿಚಾರವಾಗಿ ನೋ ಮಾಸ್ಕ್ ನೋ ಫ್ಯೂಯೆಲ್ ಎಂಬ ಹೊಸ ನಿಯಮವನ್ನು ಕೆಲ ಬಂಕ್‍ಗಳೇ ಜಾರಿಗೆ ತಂದಿದ್ದು, ಬೆಂಗಳೂರಿನ ಕೆಲ ಪೆಟ್ರೋಲ್ ಬಂಕ್‍ಗಳಲ್ಲಿ ಮಾಸ್ಕ್ ಹಾಕಿದ್ದರೇ ಮಾತ್ರ ಪೆಟ್ರೋಲ್ ಹಾಕುತ್ತೇವೆ ಎಂದು ಬೋರ್ಡ್ ಹಾಕಿಕೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಸಿಕೊಂಡಿದ್ದರೆ ಮಾತ್ರ ಪೆಟ್ರೋಲ್ ಹಾಕುತ್ತೇವೆ ಎಂದು ಬಂಕ್‍ಗಳೇ ಗ್ರಾಹಕರಿಗೆ ತಿಳಿಸುತ್ತಿವೆ.