ಬೆಂಗಳೂರು: ಅವಧಿಗೂ ಮುನ್ನವೇ ಮಾರುಕಟ್ಟೆಗೆ ಹಣ್ಣುಗಳ ರಾಜ ಮಾವಿನ ಹಣ್ಣು ಕಾಲಿಟ್ಟಿದ್ದು, ರೈತರ ಹಾಗೂ ಮಾವು ಪ್ರಿಯರ ಮೊಗದಲ್ಲಿ ಮಂದಹಾಸ ಮೂಡಿದೆ.
ನಗರದ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣುಗಳು ಎಲ್ಲರನ್ನೂ ಅಟ್ರಾಕ್ಟ್ ಮಾಡುತ್ತಿವೆ. ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇನಲ್ಲಿ ಬರುವ ಮಾವಿನ ಹಣ್ಣು ಈ ಬಾರಿ ಅವಧಿಗೆ ಮುನ್ನವೇ ಎಂಟ್ರಿ ಕೊಟ್ಟಿವೆ. ಬಾದಾಮಿ, ರಸಪುರಿ, ಸಿಂಧೂರ, ನೀಲಂ ತೋತಾಪುರಿ, ಮಲ್ಲಿಕಾ ಹಣ್ಣುಗಳಿಗೆ ಸಿಲಿಕಾನ್ ಸಿಟಿ ಮನಸೋತು ಭರ್ಜರಿ ವ್ಯಾಪಾರ ನಡೆಸುತ್ತಿದ್ದಾರೆ.
ಮಾವು ಉತ್ಪಾದನೆಯಲ್ಲಿ ಕರ್ನಾಟಕ, ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಈ ವರ್ಷ ಉತ್ತಮ ಮಳೆಯಾಗಿರೋದ್ರರಿಂದ ಒಳ್ಳೆ ಫಸಲು ಸಿಕ್ಕಿದೆ. ಜೊತೆಗೆ ನೆರೆಯ ರಾಜ್ಯಗಳಿಂದಲೂ ಮಾವು ಬೆಳೆ ರಾಜ್ಯಕ್ಕೆ ಹರಿದು ಬರುತ್ತಿದೆ. ಕಳೆದ ವರ್ಷ ಜೂನ್ ನಲ್ಲಿ ಮಾವಿನ ಸೀಸನ್ ಶುರುವಾಗಿತ್ತು.
ಮಾವಿನ ಹಣ್ಣಿನ ರೇಟ್ ಒಂದು ಕೆಜಿಗೆ 200 ರೂಪಾಯಿ ಇದೆ. ಇದರಿಂದ ರೈತರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಒಟ್ಟಿನಲ್ಲಿ ಮಾವಿನ ಕಾಯಿ, ಮಾವಿನ ಹಣ್ಣುಗಳು ರಾಜಧಾನಿ ಜನರನ್ನು ಕೈಬೀಸಿ ಕರೆಯುತ್ತಿವೆ. ಈ ತಿಂಗಳಿನಿಂದಲೇ ಮ್ಯಾಂಗೋ ಸೀಜನ್ ಶುರುವಾಗಿರೋದು ರೈತರಿಗೆ ಹಾಗೂ ಮಾವು ಪ್ರಿಯರಿಗೆ ವರದಾನವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv