ಹಾಸನದಲ್ಲಿ ಪುಡಿ ರೌಡಿಯ ಕಾಟ | ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ

Public TV
1 Min Read
Bengaluru Mangaluru bus stopped and attacked with deadly weapon hassan bypass Road

ಹಾಸನ: ಖಾಸಗಿ ಬಸ್ (Private Bus) ತಡೆದು ಪುಡಿ ರೌಡಿ ಅಟ್ಟಹಾಸ ಮೆರೆದು ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ ಘಟನೆ ಹಾಸನ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ ನಡೆದಿದೆ.

ಬುಧವಾರ ನಸುಕಿನ ಜಾವ 2 ಗಂಟೆಗೆ ಬೈಪಾಸ್‌ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ (Bengaluru To Mangaluru) ಖಾಸಗಿ ಬಸ್‌ ಸಂಚರಿಸುತ್ತಿತ್ತು. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಹೇಮಾವತಿ ನದಿಗೆ ಬಿದ್ದ ವಿದ್ಯಾರ್ಥಿ – ಪ್ರಾಣಾಪಾಯದಿಂದ ಪಾರು


ಈ ಸಂದರ್ಭದಲ್ಲಿ ಕೆಎ 51 ಎಂವಿ 8912 ನಂಬರ್‌ನ ಸ್ವಿಫ್ಟ್ ಕಾರನ್ನು ಬಸ್ಸಿನ ಮುಂದೆ ಅಡ್ಡ ಹಾಕಿ ನಿಲ್ಲಿಸಿದ್ದಾನೆ. ಕಾರಿನಿಂದ ಇಳಿದ ಬಳಿಕ ಗಲಾಟೆ ಮಾಡಿ ಬಸ್ಸಿನ ಗ್ಲಾಸನ್ನು ಒಡೆದು ಹಾಕಿದ್ದಾನೆ.

ಪುಡಿ ರೌಡಿಯ ಹುಚ್ಚಾಟ ಬಸ್ಸಿನಲ್ಲಿದ್ದವರ ಮೊಬೈಲಿನಲ್ಲಿ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದಂತೆ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಸ್ಸಿಗೆ ಹೀಗೆ ಆದರೆ ಇನ್ನೂ ಕಾರು, ಬೈಕಿನಂತ ವಾಹನದಲ್ಲಿ ‌ಪ್ರಯಾಣ ಮಾಡುವವರು ಏನು ಮಾಡಬೇಕು ಎಂದು ನೆಟ್ಟಿಗರು ಪೊಲೀಸರನ್ನು ಪ್ರಶ್ನಿಸಿದ್ದಾರೆ.

Share This Article