ನೆಲಮಂಗಲ: ಪಬ್ಲಿಕ್ ಟಿವಿಯ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ಆಟೋ ಡ್ರೈವರ್ ಧನಂಜಯ ಎಂಬವರು ಶುಕ್ರವಾರ ಕರೆ ಮಾಡಿ ತಮ್ಮ ಕಷ್ಟವನ್ನ ಹೇಳಿಕೊಂಡಿದ್ದರು.
Advertisement
ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮನೆಯಿಂದ ಹೊರಬರದೆ ಹಾಗೂ ಬಡತನದ ಬೇಗೆಯಿಂದ ಸಾಕಷ್ಟು ಸಮಸ್ಯೆ ಎದುರಿಸಿದ್ದ ಕುಟುಂಬಕ್ಕೆ ನೆರವು ಸಿಕ್ಕಿದೆ. ಇಂದು ಈ ಬಡ ಕುಟುಂಬದ ಸದಸ್ಯರಿಗೆ ಕರವೇ ಶಿವರಾಮೇಗೌಡ ಬಣದ ನೆಲಮಂಗಲ ತಾಲೂಕು ಅಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಕರವೇ ಸ್ನೇಹಿತರು ಮಾನವೀಯತೆ ಮೆರೆದಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯ ಕರೆಗೆ ಸ್ಪಂದಿಸಿ ಈ ಕುಟುಂಬಕ್ಕೆ 15 ದಿನಕ್ಕೆ ಬೇಕಾಗುವ ಎಲ್ಲಾ ರೀತಿಯ ದಿನಸಿ ಪದಾರ್ಥಗಳು ಹಾಗೂ ತರಕಾರಿ ಹಣ್ಣುಗಳನ್ನು ನೀಡಿ ಸಂಕಷ್ಟದಲ್ಲಿದ್ದ ಆಟೋ ಡ್ರೈವರ್ ಧನಂಜಯ್ ಕುಟುಂಬಕ್ಕೆ ನೆರವು ನೀಡಿದ್ದಾರೆ. ನೆರವಿಗೆ ಧಾವಿಸಿದ ಪಬ್ಲಿಕ್ ಟಿವಿ ತಂಡ ಹಾಗೂ ಕರವೇ ಸ್ನೇಹಿತರಿಗೆ ಆಟೋ ಚಾಲಕನ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.
Advertisement
ಈ ವೇಳೆ ಮಾತನಾಡಿದ ನೆಲಮಂಗಲ ಕರವೇ ಅಧ್ಯಕ್ಷ ಸುರೇಶ್, ಇಂತಹ ಸಾಕಷ್ಟು ಜನರು ಈ ಲಾಕ್‍ಡೌನ್ ಸಮಯದಲ್ಲಿ ಸಮಸ್ಯೆ ಎದುರಿಸುತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ತಾಲೂಕಿನಲ್ಲಿ ನಮ್ಮ ಸೇವೆಯನ್ನು ಮುಂದುವರಿಸಿ ಜನರ ಏಳಿಗೆಗೆ ನಮ್ಮ ತಂಡ ಶ್ರಮಿಸುವುದಾಗಿ ತಿಳಿಸಿದ್ದಾರೆ.