ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವಾರು ಪ್ರದೇಶಗಳು ಜಲಾವೃತಗೊಂಡು ಜನ ಪರದಾಡುತ್ತಿದ್ದಾರೆ. ಹೀಗಿದ್ದರೂ ಜನ ತಮ್ಮ ಜೀವನ ಸಾಗಿಸಲು ಒಂದಲ್ಲ ಒಂದು ಕಸರತ್ತು ನಡೆಸುತ್ತಲೇ ಇದ್ದಾರೆ. ಅನೇಕ ಮಂದಿ ತಮ್ಮ ಸೃಜನಾಶೀಲತೆಯಿಂದಾಗಿ ಕೆಲಸ ಮಾಡುತ್ತಿದ್ದಾರೆ.
Advertisement
ಇದಕ್ಕೆ ಸಾಕ್ಷಿ ಎಂಬಂತೆ ಕಾಫಿ ಶಾಪ್‍ಗೆ ವ್ಯಕ್ತಿಯೊಬ್ಬ ಡೆಸ್ಕ್‌ಟಾಪ್ ಅನ್ನು ತೆಗೆದುಕೊಂಡು ಬಂದು ಕೆಲಸ ಮಾಡಿದ್ದಾನೆ. ಈ ಫೋಟೋವನ್ನು ಕಾಫಿ ಶಾಪ್‍ನ ಸಿಬ್ಬಂದಿ ಸಂಕೇತ್ ಸಾಹು ಅವರು ಸೆಪ್ಟೆಂಬರ್ 7ರಂದು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇದೀಗ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ ಮಾಜಿ ಮೇಯರ್
Advertisement
I just saw a group working from the Third Wave Coffee with “a full-fledged desktop setup” because their offices are flooded ????@peakbengaluru pic.twitter.com/35ooB1TOqU
— Sanket Sahu (@sanketsahu) September 7, 2022
Advertisement
ಫೋಟೋ ಜೊತೆಗೆ ತಮ್ಮ ಆಫೀಸ್ ಜಲಾವೃತಗೊಂಡಿದ್ದರಿಂದ ಗುಂಪೊಂದು ಬೆಂಗಳೂರಿನ ಥರ್ಡ್ ವೇವ್ ಕಾಫಿ ಶಾಪ್‍ನಲ್ಲಿ ಟೇಬಲ್ ಮೇಲೆ ಡೆಸ್ಕ್‌ಟಾಪ್ ಸೆಟಪ್ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಮಳೆಗಾಲದ ಅಧಿವೇಶನ- ಕಾಂಗ್ರೆಸ್ ವಿರುದ್ಧ ರೀ ಡೂ ಅಸ್ತ್ರಕ್ಕೆ ಬಿಜೆಪಿ ಸಿದ್ಧತೆ
Advertisement
ಇದೀಗ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಾರೀ ಚರ್ಚೆ ನಡೆಯುತ್ತಿದ್ದು, ಅನೇಕ ಮಂದಿ ವ್ಯಕ್ತಿ ತನ್ನ ಡೆಸ್ಕ್‌ಟಾಪ್ ಮತ್ತು ಸಿಪಿಯುವನ್ನು ಕಾಫಿ ಶಾಪ್‍ಗೆ ಹೊತ್ತೊಯ್ದಿದ್ದಾನೇ? ಬದಲಾಗಿ ಅವನು ಮನೆಯಿಂದಲೇ ಏಕೆ ಕೆಲಸ ಮಾಡಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಈತನಿಗೆ ಕೆಲಸ ಮಾಡುವ ವೇಳೆ ಸಾಕಷ್ಟು ಅನುಮಾನಗಳ ಬರಬಹುದು, ಕೆಲಸ ಮಾಡುವ ಸಾಮರ್ಥ್ಯವನ್ನು ಕಳೆದುಕೊಂಡಿರಬಹುದು ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ.