ಬೆಂಗಳೂರು: ಆನ್‍ಲೈನ್‍ನಲ್ಲಿ ಶಾಪಿಂಗ್ ಮಾಡೋ ಗ್ರಾಹಕರೇ ಎಚ್ಚರವಾಗಿರಿ. ಯಾಕೆಂದರೆ ಬೆಂಗಳೂರಿನ ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದೇ ಒಂದು ಪ್ರಾಡಕ್ಟ್. ಆದರೆ ಅವರ ಕೈಗೆ ಸಿಕ್ಕಿದ್ದೇ ಮತ್ತೊಂದು ಪ್ರಾಡಕ್ಟ್.
ಹೌದು. ಬೆಂಗಳೂರಿನ ವೈಯಾಲಿಕಾವಲ್ ನಿವಾಸಿ ಮಧುಸೂದನ್ ಅವರು ಆನ್‍ಲೈನ್ ಶಾಪಿಂಗ್ ಮಾಡಿ ಮೋಸ ಹೋಗಿದ್ದಾರೆ. ಡಿಸೆಂಬರ್ 1ರಂದು ಅಮೆಜಾನ್‍ನಲ್ಲಿ ಸ್ಪೀಕರ್ ಬಾಕ್ಸ್ ಒಂದನ್ನು ಮಧುಸೂದನ್ ಆರ್ಡರ್ ಮಾಡಿದ್ದರು. ಆದರೆ ಅವರ ಕೈ ಸೇರಿದ್ದು ಮಾತ್ರ ಟೈಲ್ಸ್ ಕಲ್ಲು. ಸೋಮವಾರ ಈ ಪ್ರಾಡಕ್ಟ್ ಮಧುಸೂದನ್ ಕೈಗೆ ತಲುಪಿದೆ. ಬಾಕ್ಸ್ ಓಪನ್ ಮಾಡಿ ನೋಡಿದಾಗ ಕಲ್ಲು ಇರೋದು ಗೊತ್ತಾಗಿದೆ. ಇದನ್ನು ನೋಡಿದ ಗ್ರಾಹಕ ಕಕ್ಕಾಬಿಕ್ಕಿಯಾಗಿದ್ದು, ನನ್ನಂತೆ ಯಾರಿಗೂ ಮೋಸ ಆಗಬಾರದು. ಇದರಲ್ಲಿ ಯಾರ ನಿರ್ಲಕ್ಷ್ಯವಿದೆ ಗೊತ್ತಾಗಬೇಕು ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ರಾಯಲ್ ಎನ್‍ಫೀಲ್ಡ್ ಖರೀದಿಸಲು ಹೋಗಿ 1 ಲಕ್ಷ ರೂ. ಕಳೆದುಕೊಂಡ ಟೆಕ್ಕಿ
Advertisement
Advertisement
ಆದ್ದರಿಂದ ಮೋಸ ಹೋದ ಮಧುಸೂದನ್ ಅಮೆಜಾನ್ ಕಂಪನಿ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಪಾರ್ಸೆಲ್ ಬಾಕ್ಸ್ ನಲ್ಲಿ ಕಲ್ಲು ಇರೋದು ಗೊತ್ತಾದ ಮೇಲೆ, ಡೆಲಿವರಿ ಬಾಯ್‍ಗೆ ಪ್ರಾಡೆಕ್ಟ್ ವಾಪಸ್ ಮಾಡಿದ್ದಾರೆ. ದೂರು ಕೊಡಲು ಅಮೆಜಾನ್ ಕಂಪನಿಯ ಸಿಬ್ಬಂದಿಗೆ ಫೋನ್ ಮಾಡಿದರೆ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ ಎಂದು ಮಧುಸೂದನ್ ಆರೋಪಿಸಿದ್ದಾರೆ.
Advertisement
Advertisement
ಈ ಎಡವಟ್ಟಿನಲ್ಲಿ ಡೆಲವರಿ ಮಾಡಲು ಹುಡಗನದ್ದು ತಪ್ಪೇ? ಅಥವಾ ಅಮೆಜಾನ್ ಕಂಪನಿಯದ್ದು ತಪ್ಪಾ ಗೊತ್ತಿಲ್ಲ. ಆದರೆ ಮೊಸ ಹೋದ ಗ್ರಾಹಕ ಮಾತ್ರ ನನ್ನ ದುಡ್ಡು ಹೊಯ್ತು, ಪ್ರಾಡಕ್ಟೂ ಹೊಯ್ತು ಅಂತ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಆದಕ್ಕೆ ಯಾವುದಕ್ಕೂ ಆನ್‍ಲೈನ್‍ನಲ್ಲಿ ಶಾಪಿಂಗ್ ಮಾಡುವಾಗ ನೀವು ಹುಷಾರಾಗಿರಿ.