– 2 ಗಂಟೆಯ ಬಳಿಕ ಮಾಲ್ ಓಪನ್
ಬೆಂಗಳೂರು: ನಗರದ ಜಿಟಿ ಮಾಲ್‌ನಲ್ಲಿ (GT Mall) ವ್ಯಕ್ತಿಯೋರ್ವ ಮೂರನೇ ಫ್ಲೋರ್‌ನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಸಾಗರ್ (34) ಎಂದು ಗುರುತಿಸಲಾಗಿದ್ದು, ಅವಿವಾಹಿತನಾಗಿದ್ದು ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ಈ ಕುರಿತು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ ; GRAP ಹಂತ IIರ ನಿಯಮಗಳು ಜಾರಿ
ಸದ್ಯ ಮಾಲ್‌ಗೆ ಕೆಪಿ ಅಗ್ರಹಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾಲ್‌ನ ಮೂರನೇ ಫ್ಲೋರ್‌ನಿಂದ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು, ಆದರೆ ಕಾಲುಜಾರಿ ಬಿದ್ದಿದ್ದಾ? ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾ? ಜೊತೆಗೆ ಮೃತ ವ್ಯಕ್ತಿ, ಮಾಲ್‌ನ ಸಿಬ್ಬಂದಿನಾ? ಅಥವಾ ಹೊರಗಿನಿಂದ ಬಂದ ಗ್ರಾಹಕನಾ? ಎನ್ನುವ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ಈ ಕುರಿತು ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ಹೊರಗಿನಿಂದ ಬಂದು ಬೇಕಂತಲೇ ಮೂರನೇ ಫ್ಲೋರ್‌ನಿಂದ ಬಿದ್ದಿದ್ದಾನೆ. ಮುಖಕ್ಕೆ ಗಾಯ ಆಗಿದೆ. ಆದರೆ ಬಿದ್ದ 10 ನಿಮಿಷ ಬದುಕಿದ್ದ ಅಷ್ಟೇ, ಆಮೇಲೆ ಪ್ರಾಣಬಿಟ್ಟ ಎಂದು ತಿಳಿಸಿದ್ದಾರೆ.
ಸದ್ಯ ಮೃತದೇಹವನ್ನ ಆಂಬ್ಯುಲೆನ್ಸ್‌ಗೆ ಶಿಫ್ಟ್ ಮಾಡಲು ತಯಾರಿ ನಡೆಸುತ್ತಿದ್ದು, ಈವರೆಗೂ ಆತನ ಬಳಿ ಮೊಬೈಲ್, ಪರ್ಸ್, ಯಾವುದೇ ದಾಖಲೆಗಳು ಸಿಕ್ಕಿಲ್ಲ. ಘಟನೆ ಹಿನ್ನೆಲೆ ಮಾಲ್‌ನಲ್ಲಿ ಬೆಳಗಿನ ಮೂವಿ ಶೋ ಕೂಡ ರದ್ದು ಮಾಡಲಾಗಿದೆ. ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನ ಪಡೆದು ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಇಬ್ಬರು ದುರ್ಮರಣ