– ಇಷ್ಟೆಲ್ಲಾ ಮಳೆಯಾದ್ರೂ ನೀರಿಲ್ಲ ಎಂಬ ದೂರು
ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ಮುಂಗಾರಿನ ಅಬ್ಬರ ಜೋರಾಗಿದೆ. ಹೀಗಿದ್ದರೂ ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿ ನೀರಿಲ್ಲ ಎಂದು ದೂರಿದ್ದಾರೆ.
Advertisement
ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನ (Bengaluru Water Crisis) ಬಗ್ಗೆ ರಿಷಬ್ ಶ್ರೀವಾಸ್ತವ ಎಂಬ ವ್ಯಕ್ತಿಯೊಬ್ಬ ಎಕ್ಸ್‌ನಲ್ಲಿ ಹಾಕಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವ್ಯಕ್ತಿ ತಾನು ಕೆಲಸ ಮಾಡುವ ಕಚೇರಿ ಸ್ನಾನಗೃಹದಲ್ಲಿ ಬ್ರಷ್ ಮಾಡುತ್ತಿರುವ ಫೋಟೊ ಹಂಚಿಕೊಂಡಿದ್ದಾರೆ. ‘ಪೀಕ್ ಬೆಂಗಳೂರು ಮೂಮೆಂಟ್! ಮನೆಯಲ್ಲಿ ನೀರಿಲ್ಲದ ಕಾರಣ ಬೆಳಗ್ಗೆ 10 ಗಂಟೆಗೆ ಕಚೇರಿಗೆ ಬಂದೆ’ ಎಂದು ಅಡಿಬರಹ ನೀಡಿದ್ದಾನೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ – ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ
Advertisement
Peak Bengaluru Moment!
Came to office at 10 am because there’s no water at home. pic.twitter.com/ebZe8mtZLD
— 🎟Rishabh Srivastava (@arre_rishabh) June 6, 2024
Advertisement
ಕಳೆದ ವರ್ಷ ಮುಂಗಾರಿನ ಕೊರತೆಯಿಂದಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿತ್ತು. ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಎದುರಾಗಿತ್ತು. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿತ್ತು. ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಆದರೂ ನಗರದಲ್ಲಿ ನೀರಿನ ಬಿಕ್ಕಟ್ಟು ಎಂಬಂತೆ ಈ ವ್ಯಕ್ತಿ ಪೋಸ್ಟ್ ಹಾಕಿದ್ದಾನೆ.
Advertisement
ನೀರನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ. ‘ನಗರದ ಆಗ್ನೇಯ ಭಾಗದಿಂದ ಹೆಚ್ಚಿನ ದೂರುಗಳು ದಾಖಲಾಗುತ್ತಿದ್ದು, ನೀರು ಮಿತವಾಗಿ ಬಳಕೆ ಮಾಡುವಂತೆ ಜನರಲ್ಲಿ ಮನವಿ ಮಾಡಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಸಂಸದ ವಿಶಾಲ್ ಕಾಂಗ್ರೆಸ್‌ಗೆ ಬೆಂಬಲ – ‘ಕೈ’ ಸ್ಥಾನಗಳ ಸಂಖ್ಯೆ 100 ಕ್ಕೆ ಏರಿಕೆ
ಬೆಂಗಳೂರಿನಲ್ಲಿ ನೀರಿನ ಅಭಾವ ಇನ್ನೂ ಇದೆ ಎಂದು ಈ ವ್ಯಕ್ತಿ ನಿಜಕ್ಕೂ ಹೇಳಿದ್ದಾನೆಯೇ? ಅಥವಾ ತಮಾಷೆಗೆ ಈ ರೀತಿ ಪೋಸ್ಟ್ ಹಾಕಿದ್ದಾನೆಯೇ ಎಂಬುದು ಪ್ರಶ್ನೆಯಾಗಿದೆ.