ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗ ಎಲ್ಲಿ ನೋಡಿದರೂ ಚಾಕಲೆಟ್ಸ್, ಕೇಕ್ಸ್, ಸಾಂಟಾಕ್ಲಾಸ್ ಗಳು ಕಣ್ಣಿಗೆ ಬೀಳುತ್ತವೆ. ಕ್ರಿಸ್‍ಮಸ್ ಹಬ್ಬ ಹತ್ತಿರ ಬರುತ್ತಿದ್ದಂತೆ ಸಿಟಿ ಫುಲ್ ಕಲರ್ ಫುಲ್ ಆಗತ್ತಿದೆ.
ಗರುಡಾ ಮಾಲ್‍ನಲ್ಲಿ ಮಿಂಚು ಹುಳದ ಹಾಗೆ ಲೈಟ್ಸ್ ಗಳು ಜಗಮಗಿಸುತ್ತಿದ್ದು, ಬೆಳಕಿನ ಚಿತ್ತಾರದ ನಡುವೆ ಚಿಟ್ಟೆಗಳು ಬ್ರೈಟ್ ಆಗಿ ಕಾಣಿಸುತ್ತಿದೆ. ಕ್ರಿಸ್‍ಮಸ್ ಟ್ರಿ ನೋಡುತ್ತಿದ್ದರೆ, ಎಲ್ಲರಿಗೂ ನೋಡತ್ತಾನೇ ಇರಬೇಕು ಎಂದು ಅನಿಸುತ್ತದೆ.
Advertisement
Advertisement
ಗರುಡಾ ಮಾಲ್ ನಲ್ಲಿ ಕ್ರಿಸ್‍ಮಸ್ ಹಬ್ಬದ ಖುಷಿ ಎದ್ದು ಕಾಣುತ್ತಿದೆ. ಈ ಫೆಸ್ಟ್ ಗಾಗಿ ಮಾಲ್‍ನ್ನು ವಿಶೇಷವಾಗಿ ಎಲೆಕ್ಟ್ರಿಕ್ ಬೃಹತ್ ದೀಪಗಳಿಂದ ಅಲಂಕರಿಸಲಾಗಿದೆ. ಜೊತೆಗೆ ವಿಶೇಷವಾದ ಶಾಪಿಂಗ್ ಫೆಸ್ಟ್ ಆಯೋಜಿಸಲಾಗಿದೆ. ಈ ಲೈಟ್ ಫೆಸ್ಟಿವಲ್‍ಗೆ ನಟಿ ಹರಿಪ್ರಿಯ ಚಾಲನೆ ನೀಡಿದರು.
Advertisement
Advertisement
ಗರುಡಾಮಾಲನ್ನು ಸುಮಾರು 2 ಲಕ್ಷಕ್ಕೂ ಹೆಚ್ಚು ಎಲ್‍ಇಡಿ ದೀಪಗಳಿಂದ ಅಲಂಕರಿಸಲಾಗಿದೆ. ಜೊತೆಗೆ ಜೈಪುರ ಅರಮನೆಯ ಪ್ರತಿಕೃತಿ ಪ್ಯಾಲೇಸ್ ಆಫ್ ವಿಂಡ್ಸ್, ಹವಾ ಮಹಲ್ ನಿರ್ಮಿಸಲಾಗಿದೆ. 45 ಅಡಿ ಅಗಲ ಮತ್ತು 38 ಅಡಿ ಎತ್ತರದ ಚಿಟ್ಟೆಗಳ ಕ್ರಿಸ್‍ಮಸ್ ಟ್ರೀ ಮಾಲ್‍ನ ಮುಂಭಾಗದಲ್ಲಿ ಎಲ್ಲರನ್ನು ಬರಮಾಡಿಕೊಳ್ಳುತ್ತದೆ.
ಕ್ರಿಸ್‍ಮಸ್ ಅಂದರೆ ಹೊಸತನ ಇರಲೇಬೇಕು. ಈ ಹಬ್ಬಕ್ಕೆ ಜನರನ್ನು ಸೆಳೆಯಲು ಮಾಲ್ ಗಳು ಡಿಫರೆಂಟ್ ಆಗಿ ರೆಡಿಯಾಗಿದ್ದು, ಐಟಿ ಸಿಟಿ ಮಂದಿಯನ್ನು ಕೈ ಬೀಸಿ ಕರೆಯುತ್ತಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv