ಬೆಂಗಳೂರು: ಎಲೆಕ್ಟ್ರಾನಿಕ್ ವಸ್ತುಗಳ ಜೊತೆಗೆ ಹಾವು ಕೂಡ ಗಿಫ್ಟ್ ಆಗಿ ಬಂದು, ಆತಂಕ ಸೃಷ್ಟಿಸಿದ್ದ ಘಟನೆ ನಗರದಲ್ಲಿ ನಡೆದಿದೆ.
ಮೆಜೆಸ್ಟಿಕ್ನ ಎಲೆಕ್ಟ್ರಾನಿಕ್ ಅಂಗಡಿಯೊಂದಕ್ಕೆ ದೆಹಲಿಯಿಂದ ಲೈಟ್ಸ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ವಸ್ತುಗಳು ಪಾರ್ಸೆಲ್ ಬಂದಿದ್ದವು. ಜೊತೆಗೆ ಒಂದು ಹಾವು ಕೂಡ ಬಂದಿದೆ. ಬೆಳಗ್ಗೆ 10:30ಕ್ಕೆ ಪಾರ್ಸಲ್ ಬಾಕ್ಸ್ ತೆಗೆದು ನೋಡಿದಾಗ ಹಾವನ್ನು ಕಂಡು ಅಂಗಡಿಯ ಮಾಲೀಕ ಬೆಚ್ಚಿ ಬಿದ್ದಿದ್ದಾರೆ.
ಅದೃಷ್ಟವಶಾತ್ ಬಾಕ್ಸ್ ತೆಗೆದಿದ್ದ ಅಂಗಡಿ ಮಾಲೀಕನಿಗೆ ಹಾವು ಕಚ್ಚಿಲ್ಲ. ಹಾವನ್ನು ನೋಡಿದ ತಕ್ಷಣವೇ ಮಾಲೀಕ ಉರಗ ತಜ್ಞರಿಗೆ ಕರೆ ಮಾಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಬಂದ ಉರಗತಜ್ಞರು ಸುಮಾರು ಎರಡು ಅಡಿ ಉದ್ದದ ಹಾವನ್ನು ಹಿಡಿದಿದ್ದಾರೆ. ಬಳಿಕ ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.
ಈ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಉರಗತ್ಞ ಜಯರಾಜ್ ಅವರು, ಅಂಗಡಿ ಮಾಲೀಕರು ಫೋನ್ ಮಾಡಿದ ತಕ್ಷಣವೇ ಅಲ್ಲಿಗೆ ಹೋಗಿ ನೋಡಿಗಾದ ಅದು ಮಣ್ಣಮುಕ್ಕ ಹಾವು ಎನ್ನುವುದು ತಿಳಿಯಿತು. ಈ ಹಾವು ಯಾವುದೇ ಹಾನಿ ಮಾಡುವುದಿಲ್ಲ ಅಂತ ಅಂಗಡಿಯವರಿಗೆ ತಿಳಿಸಿದ್ದೇವೆ. ಅಷ್ಟೇ ಅಲ್ಲದೆ ಮೆಜೆಸ್ಟಿಕ್ ನಲ್ಲಿ ಈ ಹಾವು ಬಂದಿರುವುದು ಅಪರೂಪ ಎಂದು ಹೇಳಿದರು.