ಬೆಂಗಳೂರು: ಮೊಬೈಲ್ ಶೋರೂಮ್‍ಗಳಿಗೆ ಕನ್ನ ಹಾಕಿ ಲಕ್ಷಾಂತರ ರೂ. ಬೆಲೆ ಬಾಳುವ ಮೊಬೈಲ್ ಎಗರಿಸಿದ್ದ ಮೂವರು ಕಳ್ಳರನ್ನು ಬೆಂಗಳೂರಿನ ಮಾದನಾಯಕನಹಳ್ಳಿಯ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ಕಬ್ಬಾಳ (24), ರಘು (25) ಹಾಗೂ ಮಂಜ (25) ಬಂಧಿತ ಮೊಬೈಲ್ ಕಳ್ಳರು. ಆರೋಪಿಗಳಿಂದ 6.50 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ಒಟ್ಟು 49 ಮೊಬೈಲ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
Advertisement
ಏನಿದು ಪ್ರಕರಣ?:
ಮಾದನಾಯಕನಹಳ್ಳಿಯ ಠಾಣೆ ವ್ಯಾಪ್ತಿಯ ಎಸ್‍ಎಲ್‍ಆರ್ ಎಂಟರ್‍ಪ್ರೈಸಸ್ ಮೊಬೈಲ್ ಅಂಗಡಿಗೆ ಮೂವರು ಕಳ್ಳರು ಇದೇ ತಿಂಗಳ 10ರಂದು ನುಗ್ಗಿದ್ದರು. ತಮ್ಮ ಕೈಗೆ ಸಿಕ್ಕ ಭಾರೀ ಮೌಲ್ಯದ ಮೊಬೈಲ್‍ಗಳನ್ನು ಬ್ಯಾಗ್‍ಗೆ ತುಂಬಿಕೊಂಡು ಪರಾರಿಯಾಗಿದ್ದರು. ಈ ಕುರಿತು ಅಂಗಡಿಯ ಮಾಲೀಕ ಗಂಗಾನರಸಿಂಮಯ್ಯ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಮಾದನಾಯಕನಹಳ್ಳಿಯ ಪೊಲೀಸರಿಗೆ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಸಹಾಯವಾಗಿತ್ತು.
Advertisement
ವಿಡಿಯೋ ಮೂಲಕ ಕಳ್ಳರನ್ನು ಗುರುತಿಸಿ, ಅವರಿಗಾಗಿ ಬಲೆ ಬೀಸಿದ್ದರು. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, 6.50 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ಒಟ್ಟು 49 ಮೊಬೈಲ್‍ಗಳು, ಕೃತ್ಯಕ್ಕೆ ಬಳಸಿದ ಕಟ್ಟಿಂಗ್ ಮಷಿನ್, ಮೂರು ಬೈಕ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv