ಬೆಂಗಳೂರು: ಲೋಕಸಭಾ ಚುನಾವಣೆಯ ಬಳಿಕ ಸರ್ಕಾರ ರಚನೆಯ ಕನಸಿನಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಶಾಕ್ ಎದುರಾಗಿದೆ. ಒಂದೇ ಏಟಿಗೆ ಮೂರು ಹಕ್ಕಿ ಹೊಡೆಯಲು ಮಹಾಪ್ಲಾನ್ ನಡೆದಿದೆ.
ಚಿಕ್ಕೋಡಿ ಹಾಗೂ ಬೆಂಗಳೂರು ದಕ್ಷಿಣ ಈ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಎಸ್‍ವೈ, ಅನಂತ್ ಕುಮಾರ್ ಬೆಂಬಲಿಗರಿಗೆ ಸಂಕಷ್ಟ ಶುರುವಾಗಿದೆ. ಇದಕ್ಕೆ ಕಾರಣ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಎಂದು ಅವರ ವಿರುದ್ಧ ಆರೋಪ ಕೇಳಿಬರುತ್ತಿದೆ.
Advertisement
Advertisement
ಚಿಕ್ಕೋಡಿಯಲ್ಲಿ ಬಿಎಸ್‍ವೈ ಆಪ್ತ ಉಮೇಶ್ ಕತ್ತಿ ಸಹೋದರನಿಗೆ ಟಿಕೆಟ್ ಕೈತಪ್ಪಲು ಹಾಗೂ ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತಕುಮಾರ್‍ಗೆ ಟಿಕೆಟ್ ಕೈ ತಪ್ಪಲು ಸಂತೋಷ್ ಅವರೇ ಕಾರಣರಾಗಿದ್ದಾರೆ. ಮೂರು ಹಕ್ಕಿಗಳನ್ನು ಹೊಡೆಯಲು ಈ ಎರಡು ಕ್ಷೇತ್ರಗಳಲ್ಲಿ ಮಾಸ್ಟರ್ ಗೇಮ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ತೇಜಸ್ವಿಸೂರ್ಯ ತಂದು ತೇಜಸ್ವಿನಿ ಅನಂತ್ ಕುಮಾರ್‍ಗೆ ಬ್ರೇಕ್ ಹಾಕುವುದು ಮೂಲ ಉದ್ದೇಶವಾಗಿದೆ. ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಮೂಲಕ ವಿಜಯೇಂದ್ರಕ್ಕೆ ಮೂಗುದಾರ ಹಾಕುವ ಪ್ಲಾನ್ ಮಾಡಲಾಗಿದೆ. ಈ ನಡುವೆ ಲೋಕಸಭಾ ಚುನಾವಣೆ ಬಳಿಕ ಯಡಿಯೂರಪ್ಪ ಸರ್ಕಾರ ರಚನೆಯ ಕನಸನ್ನ ಭಂಗ ಮಾಡುವ ಯತ್ನ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ.
Advertisement
ಉಮೇಶ್ ಕತ್ತಿಯನ್ನ ಯಡಿಯೂರಪ್ಪರಿಂದ ದೂರ ಮಾಡಿದ್ರೆ ಸಿಎಂ ಕುರ್ಚಿ ಸಿಗಲ್ಲ ಅನ್ನೋ ಆಲೋಚನೆ ಇದಾಗಿದೆ. ಹಾಗಾಗಿಯೇ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ಕೈ ತಪ್ಪಿಸುವ ಮೂಲಕ ಸಂತೋಷ್ ರಾಜಕೀಯ ಚದುರಂಗದಾಟಕ್ಕಿಳಿದಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸಂತೋಷ್ ಚದುರಂಗದಾಟಕ್ಕೆ ಬಿಎಸ್‍ವೈ ಚೆಕ್ ಕೊಡ್ತಾರಾ ಅನ್ನೋ ಕುತೂಹಲ ಮೂಡಿದೆ.